newsics.com
ಬೆಂಗಳೂರು : ಬಿಗ್ಬಾಸ್ ಸೀಸನ್ 11ರ ಎರಡನೇ ಪ್ರೋಮೋ ರಿಲೀಸ್ ಆಗಿದೆ.
ಸದ್ಯ ಬಹುನಿರೀಕ್ಷಿತ ಕನ್ನಡದ ಬಿಗ್ಬಾಸ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಕಲರ್ಸ್ ಕನ್ನಡದಲ್ಲಿ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ ಅಂತ ಹೇಳಲಾಗಿದೆ. ಜೊತೆಗೆ ಖುದ್ದು ಬಿಗ್ಬಾಸ್ ಮಾತಾಡಿದ್ದಾರೆ. ಆದರೆ ಅದರಲ್ಲಿ ಈ ಬಾರಿಯ ಬಿಗ್ಬಾಸ್ಗೆ ನಿರೂಪಣೆ ಯಾರು ಮಾಡಲಿದ್ದಾರೆ ಎಂದು ಸಸ್ಪೆನ್ಸ್ ಇಟ್ಟಿದ್ದಾರೆ. ಸದ್ಯ ಇದೇ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದಷ್ಟು ಬೇಗ ಕಿಚ್ಚ ಸುದೀಪ್ ಅವರ ದರ್ಶನ ಆಗಲಿ ಅಂತ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಪ್ರತಿ ಸೀಸನ್ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್ಬಾಸ್ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
https://www.instagram.com/reel/C_vQUulPQpF/?igsh=MTVwNWdyMzdvZ3M3cQ==