newsics.com
ನವದೆಹಲಿ : ಯುವಕನೋರ್ವ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಹಣೆಗೆ ಕುಂಕುಮ ಇಟ್ಟುಕೊಂಡು ದೆಹಲಿ ಮೆಟ್ರೋದ ಪ್ಲಾಟ್‌ಫಾರ್ಮ್ ಮೇಲೆ ಓಡಾಡಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ವಿಚಿತ್ರವಾಗಿ ಓಡಾಡಿದವನನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅಭಿಷೇಕ್ ಎಂದು ಗುರುತಿಸಲಾಗಿದೆ.
ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್ ಹಾಗೂ ಮಹಿಳೆಯರು ಸೀರೆಗೆ ಧರಿಸುವಂತಹ ಕಪ್ಪು ಬಣ್ಣದ ಡೀಪ್ ನೆಕ್ ಇರುವ ಹಾಗೂ ಹಿಂಭಾಗವೂ ಬಹಳ ಡೀಪ್ ಆಗಿರುವ ಬ್ಲೌಸ್ ಧರಿಸಿದ ಯುವಕನೋರ್ವ ಮೆಟ್ರೋ ನಿಲ್ದಾಣದಲ್ಲಿ ಓಡಾಡಿದ್ದಾನೆ.
ಆದರೆ ಆತ ಸಾರಿ ಧರಿಸಿಲ್ಲ, ಈತನ ಈ ವಿಚಿತ್ರ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಆತ ಲಂಗ ಹಾಗೂ ಬ್ಲೌಸ್ ಧರಿಸಿ ಸಾರಿ ಹಾಕಲು ಮರೆತವನಂತೆ ಕಾಣುತ್ತಿದ್ದಾನೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.
https://www.instagram.com/reel/C8g4m27vUUh/?igsh=aDUxMjY3dXdvMzFk