newsics.com
ನಿದ್ರೆ ಮಾತ್ರೆ ಸೇವಿಸಿ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕೃಷಿಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆ ಹೆಸರಿನಲ್ಲಿ ಪತ್ರ ಬರೆದಿಟ್ಟು ಈ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಧರ್ಮರಾಜ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಜೇವರ್ಗಿ ತಾಲೂಕಿನಲ್ಲಿ ಕೃಷಿ ಅಧಿಕಾರಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಇನ್ನು ಈ ವ್ಯಕ್ತಿ ಡೆತ್ ನೋಟ್ ನಲ್ಲಿ ತಮಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಉಲ್ಲೇಖ ಮಾಡಿದ್ದಾರೆ.ಜೊತೆಗೆ ವರ್ಗಾವಣೆ ಹೆಸರಿನಲ್ಲಿ 2 ಲಕ್ಷದ 50 ಸಾವಿರ ವಸೂಲಿ ಮಾಡಿದ್ದಾರೆ ಎಂದು ಕೂಡ ಧರ್ಮರಾಜ್ ಆರೋಪ ಮಾಡಿದ್ದಾರೆ.
ತಮ್ಮನ್ನು ವಿಜಾಪುರ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಬ್ಲಾಕ್ಟೇಲ್ ಮಾಡಿ ತಮ್ಮಿಂದ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅಧಿಕಾರಿ ಧರ್ಮರಾಜ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದಿಂದ ಕಲಬುರಗಿಯಲ್ಲಿ ವರ್ಗಾವಣೆಯ ದಂಧೆ ಹೆಚ್ಚಾಗಿರುವ ಅನುಮಾನ ಮೂಡಿದೆ.