newsics.com
ಬೆಂಗಳೂರು: ಜ್ಯೋತಿ ರೈ ಹಾಟ್ ಫೋಟೋ ಶೇರ್ ಮಾಡಿ ಇನ್ಮೇಲೆ ನನಗೆ ಕಾಮೆಂಟ್ ಮಾಡಬೇಡಿ ಎಂದಿದ್ದಾರೆ. ನಟಿಯ ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಬೋಲ್ಡ್ ಫೋಟೋಶೂಟ್‌ಗಳ ಮೂಲಕ ಸದ್ದು ಮಾಡುವ ಜ್ಯೋತಿ ರೈಗೆ ಅಶ್ಲೀಲ ಕಾಮೆಂಟ್‌ಗಳ ಕಾಟ ಹೆಚ್ಚಾಗಿದೆ. ಹಾಗಾಗಿ ನಟಿ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಕಾಮೆಂಟ್ ಸೆಕ್ಷನ್ ಆಫ್ ಮಾಡುವ ನಿರ್ಧಾರಕ್ಕೆ ಬಂದಿರೋದಾಗಿ ಇದೀಗ ನಟಿ ತಿಳಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಇನ್ಮುಂದೆ ನೇರವಾಗಿ ಇನ್‌ಬಾಕ್ಸ್‌ನಲ್ಲಿ ಮೆಸೇಜ್ ಮಾಡುವ ಮೂಲಕ ತಿಳಿಸಿ ಎಂದಿದ್ದಾರೆ ಜ್ಯೋತಿ ರೈ.
ನಾನು ಕನ್ನಡ ‘ಬಿಗ್ ಬಾಸ್’ ಶೋನಲ್ಲಿ ಸ್ಪರ್ಧಿಸುವ ಬಗ್ಗೆ ಅನೇಕರು ನನ್ನನ್ನು ಕೇಳ್ತಿದ್ದಾರೆ. ನನಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿತ್ತು. ನಾನು ಅದನ್ನು ಗೌರವದಿಂದಲೇ ತಿರಸ್ಕರಿಸಿದ್ದೇನೆ. ಈ ಮೊದಲೇ ನಾನು ಕೆಲವು ಕೆಲಸಗಳನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಆಫರ್ ತಿರಸ್ಕರಿಸಿದ್ದೇನೆ. ಅವಕಾಶಕ್ಕಾಗಿ ಹಾಗೂ ನನ್ನ ಅಭಿಮಾನಿಗಳ ಬೆಂಬಲಕ್ಕೆ ನಾನು ಸದಾ ಚಿರಋಣಿ ಎಂದು ಜ್ಯೋತಿ ರೈ ತಿಳಿಸಿದ್ದರು.
https://www.instagram.com/p/C_cq87AvGVd/?igsh=N2Z0bGRwejRkM2t6