newsics.com
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ A1 ಆರೋಪಿಯಾಗಿರುವ ಪವಿತ್ರಾಗೌಡ ವಿರುದ್ಧವಾಗಿ ಚಪ್ಪಲಿನೇ ಪ್ರಬಲ ಸಾಕ್ಷಿಯಾಗಲಿದೆ ಎಂದು ತಿಳಿದು ಬಂದಿದೆ.
ಘಟನೆ ದಿನ ಪವಿತ್ರಾ ಗೌಡ ಪಟ್ಟಣಗೆರೆ ಶೆಡ್ಗೆ ಹೋಗಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಈಗ ಅದೇ ಚಪ್ಪಲಿ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಇದರ ಲುಮಿನಲ್ ವರದಿಯನ್ನ ಸದ್ಯ ಚಾರ್ಜ್ಶೀಟ್ನಲ್ಲಿ ಪೊಲೀಸರು ಅಡಕ ಮಾಡಿದ್ದಾರೆ.
ಪೊಲೀಸರು ಪವಿತ್ರಾಗೌಡ ಮನೆಗೆ ಹೋಗಿ ಅಲ್ಲಿ ಪವಿತ್ರಾಗೌಡ ಚಪ್ಪಲಿಯನ್ನು ವಶಪಡಿಸಿಕೊಂಡಿದ್ದರು. ಬಳಿಕ ಚಪ್ಪಲಿಯನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಈ ವೇಳೆ ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಎಫ್ಎಸ್ಎಲ್ ವರದಿಯಲ್ಲಿ ದೃಢವಾಗಿದೆ. ಇದೇ ಪವಿತ್ರಾಗೌಡ ವಿರುದ್ಧ ಪ್ರಬಲ ಸಾಕ್ಷಿ ಆಗಲಿದೆ.
ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ನ ಪ್ರತಿಯೊಬ್ಬರೂ ಹೊಡೆಯುವಾಗ ಪವಿತ್ರಾ ಗೌಡ ನಿಂತು ಕಿರುಚಾಡುತ್ತಿದ್ದಾರೆ. ಬಿಡಬೇಡಿ, ಸಾಯಿಸಿ ಅವನನ್ನ ಅಂತ ಪವಿತ್ರಾ ಕೂಗಾಡಿದ್ದಾರೆ. ಆಕೆ ಹೇಳಿದ್ದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಅಂತ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.