newsics.com
ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಆತನ ಕುಟುಂಬ ದುರಂತ ಅಂತ್ಯಕಂಡ ಘಟನೆ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನಾಯಕನಾಗಿ ಹೊರಹೊಮ್ಮಿದ್ದ ಪಂಚ್ರಮ್ ಯಾದವ್ ಹಾಗೂ ಕುಟುಂಬ ದುರಂತ ಅಂತ್ಯಕಂಡಿದೆ. ಮನೆಗೆ ಬೀಗ ಹಾಕಿ ವಿಷ ಕುಡಿದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
66 ವರ್ಷದ ಕಾಂಗ್ರೆಸ್ ನಾಯಕ ಪಂಚ್ರಮ್ ಯಾದವ್, ಪತ್ನಿ 55 ವರ್ಷದ ದಿನೇಶ ನಂದಿನಿ, ಪುತ್ರರಾದ 27 ವರ್ಷದ ಸೂರಜ್ ಹಾಗೂ 32 ವರ್ಷದ ನೀರಜ್ ಮೃತ ದುರ್ದೈವಿಗಳು. ಆಗಸ್ಟ್ 30 ರಂದು ಬೋಧ ತಲಬ್ ಪ್ರದೇಶದಲ್ಲಿರುವ ಮನೆಯಲ್ಲಿ ಹೊರಗಿನಿಂದ ಲಾಕ್ ಮಾಡಿ ವಿಷ ಕುಡಿದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದಲೂ ಗೇಟು, ಬಾಗಿಲು ಲಾಕ್ ಮಾಡಿರುವುದು ನೆರೆಮನೆಯವರಿಗೆ ಅನುಮಾನ ಮೂಡಿಸಿದೆ.
ಚತ್ತೀಸಘಡದ ಜಂಜೀರ್ ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಬೀಗ ಒಡದು ಪ್ರವೇಶಿಸಿದ ಸ್ಥಳೀಯರು ಅಸ್ವಸ್ಥರಾಗಿದ್ದ ನಾಯಕ ಕುಟುಂಬವನ್ನು ಆಸ್ಪತ್ರೆ ದಾಖಲಿಸಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.