newsics.com
ಬೆಂಗಳೂರು: 19 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.ಉತ್ತರಪ್ರದೇಶದ ಲಖನೌನಲ್ಲಿರುವ ರಾಮ್ ಮನೋಹರ ಲೋಹಿಯಾ ನ್ಯಾಷನಲ್ ಲಾ ಕಾಲೇಜಿನಲ್ಲಿ ನಡೆದಿದೆ.
3ನೇ ವರ್ಷದ ಎಲ್ಎಲ್ಬಿ ಓದುತ್ತಿದ್ದ ಯುವತಿಯ ಹಾಸ್ಟೆಲ್ ರೂಮ್ನಲ್ಲಿ ಮೃತದೇಹ ಪತ್ತಯಾಗಿದ್ದು, ಯುವತಿಯನ್ನು ಎನ್ಐಎನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಆಫೀಸರ್ ಪುತ್ರಿ ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ರೂಮ್ನೊಳಗೆ ಹೋದ ಯುವತಿ ಮತ್ತೆ ಆಚೆ ಬಂದಿಲ್ಲ ಎಂಬುದು ವರದಿಯಾಗಿದೆ. ರೂಮ್ ಒಳಗಿ ನಿಂದಲೇ ಲಾಕ್ ಆಗಿತ್ತು ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಯುವತಿಯ ಕುಟುಂಬದಿಂದ ಇನ್ನೂ ಕೂಡ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಮುಂದಿನ ತನಿಖೆ ಪೋಸ್ಟ್ ಮಾರ್ಟಮ್ ವರದಿ ಬಂದ ಬಳಿಕವೇ ನಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ.