newsics.com | ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿಯ ಹೆಬ್ಬಾಳ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ (BMTC) ಬಸ್‌ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನಿಗೆ, ಯುವತಿಯ ಚಾಣಾಕ್ಷತನದಿಂದ ಹಾಗೂ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಕ್ಕ ಶಾಸ್ತಿಯಾಗಿದೆ.
ಹೆಬ್ಬಾಳದಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆಗೆ ತೆರಳುತ್ತಿದ್ದ 500D ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿದ್ದ ಕಾಮುಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಲು ಮುಂದಾಗಿದ್ದಾನೆ. ಆದರೆ ಹೆದರಿ ಸುಮ್ಮನಾಗದೆ ಯುವತಿ ಧೈರ್ಯದಿಂದ ಆತನ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಪ್ರತಿಭಟಿಸಿದ್ದಾಳೆ.
Sexual harassment on a #Bengaluru bus
Salute to the courage of the girl who fought back after allegedly being sexually harassed on a #BMTC bus on the #ORR, refusing to stay silent. The incident happened on route 500D when the bus was moving from Hebbal towards Manyata Tech Park.… pic.twitter.com/lMrmiBwl0f
— TOI Bengaluru (@TOIBengaluru) July 25, 2026
ಯುವತಿ ಕಿರುಚಾಡುವುದನ್ನು ಗಮನಿಸಿದ ಕೂಡಲೇ ಬಸ್ ಚಾಲಕ ಪ್ರವೀಣ್ ಅವರು ಬಸ್ ಅನ್ನು ಸುರಕ್ಷಿತವಾಗಿ ರಸ್ತೆ ಬದಿಗೆ ನಿಲ್ಲಿಸಿ, ಆರೋಪಿಯನ್ನು ಪ್ರಶ್ನಿಸಿದ್ದಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವ ಬದಲು ಆ ಆರೋಪಿ ಚಾಲಕನ ಮೇಲೆಯೇ ದುರಹಂಕಾರ ತೋರಿದ್ದಾನೆ. ಇದರಿಂದ ಕೆರಳಿದ ಚಾಲಕ ಪ್ರವೀಣ್, ಸಾರ್ವಜನಿಕರ ರಕ್ಷಣೆಗೆ ಮುಂದಾಗಿ ಆರೋಪಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಬಸ್‌ನಲ್ಲಿದ್ದ ಇತರೆ ಪ್ರಯಾಣಿಕರೂ ಕೂಡ ಚಾಲಕನಿಗೆ ಸಾಥ್ ನೀಡಿ ಕಾಮುಕನಿಗೆ ಧರ್ಮದೇಟು ನೀಡಿದ್ದಾರೆ. ಸದ್ಯ ಯುವತಿಯ ಧೈರ್ಯ ಹಾಗೂ ಚಾಲಕ ಪ್ರವೀಣ್ ಅವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Crime Case ಸಾಲದ ಕಿರುಕುಳಕ್ಕೆ ಮನನೊಂದು ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳು ಸಾ*ವು