newsics.com | ನ್ಯೂಸಿಕ್ಸ್
ಹಿಮಾಚಲ ಪ್ರದೇಶ: ಚಲಿಸುತ್ತಿದ್ದ ಟಾಟಾ ಸುಮೋ ವಾಹನದ ಮೇಲೆ ಬೃಹತ್ ಬಂಡೆ ಕುಸಿದು ಬಿದ್ದು 13 ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಪಂಗಿ ಕಣಿವೆಯ ಕಿಲ್ಲರ್-ಉದಯಪುರ ರಸ್ತೆಯ ‘ಕಾಡು ನಲ್ಲಾ’ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಬೆಟ್ಟದ ಮೇಲಿಂದ ಏಕಾಏಕಿ ಬಿದ್ದ ಬಂಡೆಯ ರಭಸಕ್ಕೆ ವಾಹನ ಸಂಪೂರ್ಣವಾಗಿ ಪುಡಿಯಾಗಿದೆ. ಅದರಲ್ಲಿದ್ದ ಎಲ್ಲಾ 13 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಶಾಸಕ ಡಾ. ಜನಕ್ ರಾಜ್ ದೃಢಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ಹಾಗೂ ಅಧಿಕಾರಿಗಳು ಧಾವಿಸಿದ್ದು, ಬಂಡೆಯಡಿಯಲ್ಲಿ ಸಿಲುಕಿರುವ ವಾಹನದ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
BMRCL ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್; ಶೇ.12ರಷ್ಟು ಟಿಕೆಟ್ ದರ ಏರಿಕೆಗೆ BMRCL ಪ್ರಸ್ತಾಪ