newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯದ ಜನತೆಗೆ ದಿನಬಳಕೆಯ ಅಗತ್ಯ ವಸ್ತುಗಳ ಸಾಲಿನಲ್ಲಿ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿ (KMF) ತನ್ನ ಪ್ರಸಿದ್ಧ ‘ನಂದಿನಿ’ ಬ್ರ್ಯಾಂಡ್‌ನ ತುಪ್ಪ ಮತ್ತು ಬೆಣ್ಣೆಯ ದರವನ್ನು ಪರಿಷ್ಕರಿಸಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ನಂದಿನಿ ತುಪ್ಪದ ಬೆಲೆ ಕೆಜಿಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 700 ರಿಂದ 715 ಗೆ ಏರಿಕೆಯಾಗಿದೆ. ಗೃಹ ಬಳಕೆ ಮತ್ತು ಹೋಟೆಲ್ ಉದ್ಯಮದ ಮೇಲೆಯೂ ಬೆಲೆ ಏರಿಕೆಯಿಂದ ಪರಿಣಾಮ ಬೀರಲಿದೆ.
ನಂದಿನಿ ತುಪ್ಪದ ಬೆಲೆಯನ್ನು ಕೆಜಿಗೆ 15 ರೂಪಾಯಿ ಹಾಗೂ ಬೆಣ್ಣೆಯ ದರವನ್ನು ಕೆಜಿಗೆ 22 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಎಲ್ಲಾ ಕೆಎಂಎಫ್ ಮಳಿಗೆಗಳಲ್ಲಿಯೂ ಬೆಣ್ಣೆ ಮತ್ತು ತುಪ್ಪದ ದರ ಏರಿಕೆಯಾಗಲಿದೆ.
ಕೆಎಂಎಫ್ ನೀಡಿರುವ ಮಾಹಿತಿಯಂತೆ, ಹಾಲಿನ ಸಂಸ್ಕರಣೆ, ಸಾಗಾಣಿಕೆ ವೆಚ್ಚ, ನಿರ್ವಹಣಾ ವೆಚ್ಚಗಳು ಹಾಗೂ ಮಾರುಕಟ್ಟೆಯಲ್ಲಿ ಹಾಲಿನ ಉಪ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿರುವುದೇ ಈ ದರ ಪರಿಷ್ಕರಣೆಗೆ ಮುಖ್ಯ ಕಾರಣ. ಹಾಲು ಒಕ್ಕೂಟಗಳ ನಷ್ಟವನ್ನು ಸರಿದೂಗಿಸಲು ಮತ್ತು ರೈತರಿಗೆ ನೀಡುವ ಸೌಲಭ್ಯಗಳನ್ನು ಕಾಯ್ದುಕೊಳ್ಳಲು ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹೋಟೆಲ್‌ಗಳು, ಸಿಹಿತಿಂಡಿ (ಸ್ವೀಟ್ಸ್) ತಯಾರಕರು ಹಾಗೂ ಬೇಕರಿ ಉದ್ಯಮಿಗಳು ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಈಗ ತುಪ್ಪ-ಬೆಣ್ಣೆ ದರ ಏರಿಕೆಯಾಗಿರುವುದರಿಂದ ತಿಂಡಿ, ಸ್ವೀಟ್ಸ್‌ಗಳ ಬೆಲೆಯಲ್ಲೂ ಸಣ್ಣ ಮಟ್ಟದ ಏರಿಕೆಯಾಗುವ ಸಾಧ್ಯತೆಯಿದೆ.
Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ
Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ