newsics.com | ನ್ಯೂಸಿಕ್ಸ್
ಹಾಲಿವುಡ್‌ನ ಜನಪ್ರಿಯ ಸೂಪರ್‌ಹೀರೋ ಸರಣಿಗಳಲ್ಲೊಂದು ‘ಸ್ಪೈಡರ್‌ಮ್ಯಾನ್’ ಮತ್ತೆ ಭಾರತೀಯ ಸಿನಿಪ್ರಿಯರನ್ನು ಸೆಳೆಯಲು ಸಜ್ಜಾಗಿದೆ. ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿರುವ ‘Spider-Man: Brand New Day’ ಚಿತ್ರದ ಮೇಲೆ ಭಾರೀ ನಿರೀಕ್ಷೆ ವ್ಯಕ್ತವಾಗಿದ್ದು, ಬಿಡುಗಡೆಯಕ್ಕೂ ಮುನ್ನವೇ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ.
ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಅದರಲ್ಲೂ ಸ್ಪೈಡರ್‌ಮ್ಯಾನ್ ಸರಣಿಗೆ ವಿಶೇಷ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಬಿಡುಗಡೆಗೆ ಇನ್ನೂ 8 ದಿನ ಬಾಕಿ ಇರುವಾಗಲೇ ದೇಶದ ವಿವಿಧ ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಮಾರು 1.55 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಈ ಹಿಂದಿನ ‘Spider-Man: No Way Home’ ಸಿನಿಮಾ ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಅಡ್ವಾನ್ಸ್ ಟಿಕೆಟ್ ಮಾರಾಟ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ‘Brand New Day’ ಕೂಡ ಆ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ನಡೆದಿರುವ ಟಿಕೆಟ್ ಮಾರಾಟದ ಆಧಾರದ ಮೇಲೆ, ಮೊದಲ ದಿನವೇ 40 ರಿಂದ 48 ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಬಾಕ್ಸ್‌ಆಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದ ‘Spider-Man: No Way Home’ ಭಾರತದಲ್ಲಿ ಸುಮಾರು 265 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆಗ ‘ಪುಷ್ಪ’ ಚಿತ್ರದ ಪ್ರಬಲ ಸ್ಪರ್ಧೆಯ ನಡುವೆಯೂ ಈ ಸಾಧನೆ ಮಾಡಿತ್ತು. ಈ ಕಾರಣದಿಂದಲೇ ‘Spider-Man: Brand New Day’ ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು