newsics.com | ನ್ಯೂಸಿಕ್ಸ್
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ವಸ್ತ್ರಲ್ ವಲಯದಲ್ಲಿ ಇಂದು ಮಧ್ಯಾಹ್ನ ದುರಂತವೊಂದು ಸಂಭವಿಸಿದೆ. ಇಲ್ಲಿನ ಮೆಹಮೂದ್‌ಪುರ ರಸ್ತೆಯಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ ಉಂಟಾಗಿದ್ದು, ಎಂಟು ಮಂದಿ ಕಾರ್ಮಿಕರು ಜೀವಂತವಾಗಿ ಸುಟ್ಟು ಬೂದಿಯಾಗಿದ್ದಾರೆ. ಸ್ಫೋಟದ ರಭಸಕ್ಕೆ ಫ್ಯಾಕ್ಟರಿ ತುಂಬಾ ಬೆಂಕಿಯ ಜ್ವಾಲೆ ಆವರಿಸಿಕೊಂಡಿದ್ದರಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರಂತ ನಡೆದ ಜಾಗದ ಸನಿಹದಲ್ಲೇ ಕ್ಷಿಪ್ರ ಕಾರ್ಯ ಪಡೆಯ (RAF) ಮಿಲಿಟರಿ ಕ್ಯಾಂಪ್ ಇದ್ದಿದ್ದರಿಂದ ದೊಡ್ಡ ಮಟ್ಟದ ಸಾವು-ನೋವು ಸದ್ಯಕ್ಕೆ ತಪ್ಪಿದೆ. ಅಪಾಯದಲ್ಲಿದ್ದ ಹಲವು ಗಾಯಾಳುಗಳನ್ನು ಜೀವದ ಹಂಗು ತೊರೆದು ಹೊರತಂದು ಆಸ್ಪತ್ರೆಗೆ ಸೇರಿಸಿದ್ದಾರೆ. ತದನಂತರ ಬಂದ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿವೆ. ನಗರದ ಮೇಯರ್ ಹಿತೇಶ್ ಬರೋಟ್ ಅವರ ಸಮ್ಮುಖದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಮಾಲೀಕನ ಬೇಜವಾಬ್ದಾರಿತನಕ್ಕೆ ಎಂಟು ಜೀವಗಳು ಬಲಿ
ಜಂಟಿ ಪೊಲೀಸ್ ಕಮಿಷನರ್ ಜೈಪಾಲ್ ಸಿಂಗ್ ರಾಥೋಡ್ ನೀಡಿರುವ ಮಾಹಿತಿ ಪ್ರಕಾರ, ಈ ಘಟಕವನ್ನು ಮೆಹುಲ್ ದೋಡಿಯಾ ಎಂಬಾತ ಮುನ್ನಡೆಸುತ್ತಿದ್ದು, ನಿಯಮಾವಳಿಗಳನ್ನು ಗಾಳಿಗೆ ತೂರಿದ್ದರಿಂದ ಸರ್ಕಾರ ಈ ಹಿಂದೆನೇ ಈತನ ಕಾರ್ಖಾನೆಯ ಪರವಾನಗಿಯನ್ನು ಸೀಜ್ ಮಾಡಿತ್ತು. ಆದರೂ ಈತ ಕದ್ದುಮುಚ್ಚಿ ಕಾರ್ಮಿಕರ ಜೀವದ ಜೊತೆ ಆಟವಾಡುತ್ತಿದ್ದ. ಸ್ಥಳದಿಂದ ಸದ್ಯಕ್ಕೆ ಎಂಟು ಸುಟ್ಟ ದೇಹಗಳನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬ ತಾಂತ್ರಿಕ ತನಿಖೆ ಪ್ರಗತಿಯಲ್ಲಿದೆ. ರಾಮೋಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ನಡೆಸಿದ ಮಾಲೀಕ ಮೆಹುಲ್ ದೋಡಿಯಾ ವಿರುದ್ಧ ‘ಸ್ಫೋಟಕ ಕಾಯ್ದೆ’ಯಡಿ ಜಾಮೀನು ರಹಿತ ಪ್ರಕರಣ ಹೂಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
અમદાવાદના રામોલ ગત્રાડ રોડ પર ફટાકડા ફેક્ટરી મા આગ
8 લોકોના મોત 10 થી વધુ ઘાયલ pic.twitter.com/Fi1ti4gouq
— Hiren (@hdraval93) July 18, 2026