Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Cabinet expansion ಸಂಪುಟ ವಿಸ್ತರಣೆ ಕಸರತ್ತು ಬಹುತೇಕ ಅಂತಿಮ: ಹೈಕಮಾಂಡ್ ಹೆಣೆದ ಸೂತ್ರ ಏನು? ಯಾರಿಗೆಲ್ಲ ಸಿಗುತ್ತೆ ಸಚಿವ ಸ್ಥಾನ?
ಕರ್ನಾಟಕದೇಶಪ್ರಮುಖ

Cabinet expansion ಸಂಪುಟ ವಿಸ್ತರಣೆ ಕಸರತ್ತು ಬಹುತೇಕ ಅಂತಿಮ: ಹೈಕಮಾಂಡ್ ಹೆಣೆದ ಸೂತ್ರ ಏನು? ಯಾರಿಗೆಲ್ಲ ಸಿಗುತ್ತೆ ಸಚಿವ ಸ್ಥಾನ?

Share
2 Min Read
SHARE

newsics.com| ನ್ಯೂಸಿಕ್ಸ್

ಬೆಂಗಳೂರು: ಸಂಪುಟ ವಿಸ್ತರಣೆಗೆ ಮೊದಲ ಹಂತದ ಕಸರತ್ತು ಮುಗಿದಿದ್ದು, ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳನ್ನು ದೃಷ್ಟಿ ಯಲ್ಲಿಟ್ಟು ಹೈಕಮಾಂಡ್‌ ನಾಯಕರು “ನವಚೈತನ್ಯ’ದ ಸೂತ್ರ ಹೆಣೆದಿದ್ದಾರೆ.

ಸಂಪುಟದಲ್ಲಿ ಶೇ.40ರಷ್ಟು ಹಿರಿಯ ರಿದ್ದರೆ, ಶೇ.60ರಷ್ಟು ಹೊಸಬರು ಇರಬೇಕೆಂಬ ಸೂತ್ರ ಹೊಸೆದಿದ್ದು, ಸದ್ಯ 13 ಸ್ಥಾನಗಳಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದ 12 ಮಂದಿ ಹಳಬರೇ ಇದ್ದಾರೆ.

ಖಾಲಿ ಇರುವ 20 ಸ್ಥಾನಗಳ ಪೈಕಿ ಒಮ್ಮೆಯೂ ಸಚಿವರಾಗದ 16 ಮಂದಿಗೆ ಹಾಗೂ ಉಳಿದ 4 ಸ್ಥಾನಗಳನ್ನು ಹಿರಿಯರಿಗೆ ಕೊಟ್ಟು, “ಸಮತೋಲನದ ಸಂಪುಟ’ಕ್ಕೆೆ ಹೈಕಮಾಂಡ್‌ ಸಲಹೆ ನೀಡಿದೆ ಎನ್ನಲಾಗಿದೆ.

ಅದೇ ರೀತಿ “ಜಾತಿ ಸಮೀಕರಣ’ದ ಸೂತ್ರವನ್ನೂ ಹೈಕಮಾಂಡ್‌ ಜೋಡಿಸಿದ್ದು, 8 ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಬೇಕು ಎಂದಿದೆ. ಇನ್ನುಳಿದ 12 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳಾ ಕೋಟಾದಡಿ ಭರ್ತಿ ಮಾಡಿಕೊಳ್ಳುವಂತೆ ನಿರ್ದೇಶನಗಳನ್ನು ನೀಡಲಾಗಿದೆ. ಇದರಲ್ಲೇ ಪ್ರಾದೇಶಿಕತೆಗೂ ಮನ್ನಣೆ ನೀಡಬೇಕು ಎಂಬ ಫರ್ಮಾನನ್ನೂ ಹೊರಡಿಸಿದೆ.

ಮೊದಲ ಬಾರಿ ಗೆದ್ದಿರುವ ಅನೇಕ ಶಾಸಕರೂ ಸಂಪುಟ ಸೇರುವ ಉತ್ಸಾಹದಲ್ಲಿ ಇದ್ದರು. ಆದರೆ ಇದಕ್ಕೆ ಹೈಕಮಾಂಡ್‌ ತಡೆ ಹಾಕಿದೆ.

ಗುರುವಾರ ರಾತ್ರಿ ವೇಣುಗೋಪಾಲ್‌ ನಿವಾಸದಲ್ಲಿ ಸಭೆ ಮುಗಿಸಿ ಕರ್ನಾಟಕಕ್ಕೆ ಭವನಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನು ಆಪ್ತಶಾಸಕರು ಭೇಟಿ ಮಾಡಿ ಸಭೆಯ ಮಾಹಿತಿ ಕೇಳಿ ಪಡೆದುಕೊಂಡರು.

ಸೂತ್ರ ಏನು?

– 20 ಸ್ಥಾನಗಳ ಪೈಕಿ 16 ಹೊಸಬರಿಗೆ, 4 ಹಿರಿಯರಿಗೆ ಅವಕಾಶ

– ಸಾಮಾನ್ಯ ವರ್ಗ, ಎಸ್ಸಿ, ಎಸ್ಟಿ, ಒಬಿಸಿ ಜತೆ ಮಹಿಳೆಯರಿಗೂ ಮಂತ್ರಿಗಿರಿ

– ಜಾತಿ ಜತೆಗೆ ಪ್ರಾದೇಶಿಕತೆ ಆಧಾರದ ಮೇಲೂ ಸಚಿವ ಸ್ಥಾನ ಹಂಚಿಕೆ

– ಮೊದಲ ಬಾರಿ ಗೆದ್ದವರಿಗೆ ಸದ್ಯಕ್ಕೆ ಮಂತ್ರಿ ಸ್ಥಾನ ಕೊಡದಿರಲು ನಿರ್ಧಾರ

ಸೋಮವಾರ ಬಳಿಕವೇ ವಿಸ್ತರಣೆ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಪಸ್ಥಿತಿಯಲ್ಲಿ ಪ್ರಾಥಮಿಕ ಹಂತದ ಕಸರತ್ತು ಮುಗಿದಿದ್ದು, ಖರ್ಗೆ ಅವರು ದಿಲ್ಲಿಗೆ ತೆರಳಿದ ಬಳಿಕ ಸೋಮವಾರದ ವೇಳೆಗೆ ಮತ್ತೂಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಸಂಜೆಯೇ ಬೆಂಗಳೂರಿಗೆ ಮರಳಿದ್ದು, ಸಿಎಂ ಶಿವಕುಮಾರ್‌ಅವರು ರಾತ್ರಿ ಹೊರಟು, ಶನಿವಾರ ಬೆಳಗಿನ ಜಾವ ಬೆಂಗಳೂರಿಗೆ ತಲುಪಿದ್ದಾರೆ. ಆದರೆ ಕೆಲವು ಸಚಿವಾಕಾಂಕ್ಷಿಗಳು ಇನ್ನೂ ದಿಲ್ಲಿಯಲ್ಲೇ ಇದ್ದು, ಕೊನೆಯ ಕ್ಷಣದ ಕಸರತ್ತು ನಡೆಸುವ ಸಿದ್ಧತೆಯಲ್ಲಿದ್ದಾರೆ.

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

S Janaki life ಹೈದ್ರಾಬಾದ್‌ನಲ್ಲಿ ಭವ್ಯ ಬಂಗಲೆಯಿದ್ರೂ ಮೈಸೂರಿನ ಬಾಡಿಗೆ ಮನೆಯಲ್ಲಿ ಗಾನಕೋಗಿಲೆ ವಾಸ! ಜಾನಕಿ ಜೀವನ ಯಾಕೆ ಹೀಗೆ? ಕೇರ್ ಟೇಕರ್ಸ್ ಹೇಳಿದ್ದೇನು?

God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!

Beauty is not beautiful ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ‘ಸುಂದರಿ’ ಮನುಷ್ಯಳೇ ಅಲ್ಲ! ಈಕೆಯ ವಿರುದ್ಧ ಭಾರೀ ಕ್ಯಾಂಪೇನ್

TAGGED:Volume expansion exercise almost final: What is the high command's formula? Who will get the position of minister?
Share This Article
Facebook Twitter Copy Link Print
Previous Article Swiggy Partner life inspire story | ಬರಿಗೈಯಿಂದ ಬೆಂಗಳೂರಿನಲ್ಲಿ ಸ್ವಂತ ಬದುಕು ಕಟ್ಟಿಕೊಂಡ ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್
Next Article Sonam Wangchuk Hunger Strike | 20 ದಿನಗಳಿಂದ ಉಪವಾಸ ಸತ್ಯಾಗ್ರಹ: ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

Popular Posts

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read

You Might Also Like

ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read
ಕರ್ನಾಟಕಪ್ರಮುಖ

Crime news ಆಸ್ತಿ ಕೊಡದ ತಂದೆಯನ್ನು‌ ಕೊಂ*ದು ತಾನೂ ಜೀವ ಕಳೆದುಕೊಂಡ ಮಗ!

1 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?