newsics.com | ನ್ಯೂಸಿಕ್ಸ್
ಪ್ರೀತಿ ಅಂದ್ರೆ ಕೇವಲ ಕಣ್ಣುಗಳ ಮಿಲನ, ಹೃದಯದ ಬಡಿತ ಅಂದುಕೊಂಡಿದ್ದೀರಾ? ಖಂಡಿತ ಇಲ್ಲ! ಪ್ರೀತಿಯಲ್ಲಿ ಬಿದ್ದಾಗ ನಮ್ಮ ಮನಸ್ಸಿಗೆ ಸಿಗೋ ಆ ಅಮಲು, ಆ ತೇಲಾಡುವ ಅನುಭವದ ಹಿಂದೆ ಇಡೀ ವಿಜ್ಞಾನವೇ ಅಡಗಿದೆ.
ಸೈರಾಕ್ಯೂಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯೊಂದು ಈಗ ಜಗತ್ತನ್ನೇ ಆಶ್ಚರ್ಯಚಕಿತಗೊಳಿಸಿದೆ. ನೀವು ತೀವ್ರವಾಗಿ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನಿಮ್ಮ ಮೆದುಳು ಕೆಲಸ ಮಾಡುವ ರೀತಿ ಮತ್ತು ಡ್ರಗ್ಸ್ (ಕೊಕೇನ್) ತಿಂದ ವ್ಯಕ್ತಿಯ ಮೆದುಳು ಕೆಲಸ ಮಾಡುವ ರೀತಿ ಎರಡೂ ಒಂದೇ ಅಂತೆ!
ಮೆದುಳಿನ 12 ಭಾಗಗಳಲ್ಲಿ ‘ಪ್ರೀತಿಯ ಬ್ಲಾಸ್ಟಿಂಗ್’!
ವಿಜ್ಞಾನಿಗಳ ಪ್ರಕಾರ, ನಾವು ಒಬ್ಬ ವ್ಯಕ್ತಿಯನ್ನು ನೋಡಿ ಪ್ರೀತಿಯಲ್ಲಿ ಬಿದ್ದ ಕೇವಲ 0.2 ಸೆಕೆಂಡುಗಳಲ್ಲಿ ನಮ್ಮ ಮೆದುಳಿನಲ್ಲಿ ಅದ್ಭುತ ರಸಾಯನಿಕಗಳ ಸುನಾಮಿಯೇ ಎದ್ದುಬಿಡುತ್ತದೆ. ಮೆದುಳಿನ ಒಟ್ಟು 12 ವಿಭಿನ್ನ ಭಾಗಗಳು ಒಟ್ಟಿಗೆ ಕೆಲಸ ಮಾಡಲು ಶುರು ಮಾಡುತ್ತವೆ. ಈ ಸಮಯದಲ್ಲಿ ಬಿಡುಗಡೆಯಾಗುವ ಹಾರ್ಮೋನ್ಗಳು ಮನುಷ್ಯನಿಗೆ ಸ್ವರ್ಗದಲ್ಲಿ ತೇಲುತ್ತಿರುವಂತಹ ಅನುಭವ ನೀಡುತ್ತವೆ.
ಕೊಕೇನ್ ಕಿಕ್ ವರ್ಸಸ್ ಲವ್ ಕಿಕ್: ಏನಿದು ಸೀಕ್ರೆಟ್?
ಅಷ್ಟಕ್ಕೂ ಮೆದುಳು ಕೊಕೇನ್ ತಿಂದಂತೆ ಆಡುವುದು ಯಾಕೆ ಗೊತ್ತಾ? ಅದಕ್ಕೆ ಕಾರಣ ಈ ಮೂರು ಹಾರ್ಮೋನ್ಗಳು:
ಡೋಪಮೈನ್ (Dopamine – ದಿ ಹ್ಯಾಪಿ ಹಾರ್ಮೋನ್):
ಕೊಕೇನ್ ಸೇವಿಸಿದಾಗ ಮೆದುಳಿನಲ್ಲಿ ಡೋಪಮೈನ್ ಎಂಬ ಹಾರ್ಮೋನ್ ವಿಪರೀತವಾಗಿ ಉಕ್ಕಿ ಹರಿಯುತ್ತದೆ. ಇದು ಮನುಷ್ಯನಿಗೆ ಅತಿಯಾದ ಆನಂದ ಮತ್ತು ಎನರ್ಜಿ ನೀಡುತ್ತದೆ. ಆಶ್ಚರ್ಯ ಅಂದ್ರೆ, ನೀವು ಪ್ರೀತಿಪಾತ್ರರ ಜೊತೆಗಿರುವಾಗ ಅಥವಾ ಅವರ ನೆನಪಿನಲ್ಲಿರುವಾಗಲೂ ಇದೇ ಡೋಪಮೈನ್ ಮೆದುಳಿನಲ್ಲಿ ರಾಕೆಟ್ ವೇಗದಲ್ಲಿ ಬಿಡುಗಡೆಯಾಗುತ್ತದೆ!
ಅಡ್ರಿನಾಲಿನ್ (Adrenaline):
ಸಂಗಾತಿಯನ್ನು ನೋಡಿದಾಗ ಕೈಕಾಲು ನಡುಗುವುದು, ಬೆವರುವುದು, ಹೃದಯ ಜೋರಾಗಿ ಬಡಿದುಕೊಳ್ಳುವುದು ಇದೇ ಹಾರ್ಮೋನ್ನ ಕೈಚಳಕ.
ಲೋ ಸೆರೊಟೋನಿನ್ (Low Serotonin – ಹುಚ್ಚುತನದ ಹಂತ):
ಪ್ರೀತಿಯ ಆರಂಭದಲ್ಲಿ ಮೆದುಳಿನಲ್ಲಿ ಸೆರೊಟೋನಿನ್ ಮಟ್ಟ ದಿಡೀರ್ ಕುಸಿಯುತ್ತದೆ. ಮಜಾ ಅಂದ್ರೆ, ಮಾನಸಿಕ ಕಾಯಿಲೆಯಾದ OCD (Obsessive-Compulsive Disorder) ಇರೋ ರೋಗಿಗಳಲ್ಲೂ ಈ ಹಾರ್ಮೋನ್ ಮಟ್ಟ ಹೀಗೆಯೇ ಕಡಿಮೆ ಇರುತ್ತೆ. ಅದಕ್ಕೇ ಇರಬೇಕು ಪ್ರೀತಿಯಲ್ಲಿ ಬಿದ್ದವರು 24 ಗಂಟೆಯೂ ಸಂಗಾತಿಯ ನೆನಪಿನಲ್ಲೇ ಹುಚ್ಚರಂತೆ ಇರುತ್ತಾರೆ!
ಪ್ರೀತಿ ಒಂದು ಅಡಿಕ್ಷನ್!
ವಿಜ್ಞಾನಿಗಳು ಈ ಸಂಶೋಧನೆಯ ಮೂಲಕ ಲವ್ ಎನ್ನುವುದು ಕೇವಲ ಒಂದು ಭಾವನೆಯಲ್ಲ, ಅದೊಂದು “ನಡವಳಿಕೆಯ ವ್ಯಸನ” (Behavioral Addiction) ಎಂದು ಕರೆದಿದ್ದಾರೆ.
ಡ್ರಗ್ಸ್ ಸೇವಿಸಿದಾಗ ಸಿಗುವ ಕಿಕ್, ಪ್ರೀತಿಯಲ್ಲಿ ಸಿಗುವುದರಿಂದಲೇ ಪ್ರೇಮಿಗಳು ಇಡೀ ಪ್ರಪಂಚವನ್ನೇ ಮರೆತುಬಿಡುತ್ತಾರೆ. ಬ್ರೇಕಪ್ ಆದಾಗ ಕಾಡುವ ನೋವು ಕೂಡ ಡ್ರಗ್ಸ್ ಚಟ ಬಿಟ್ಟಾಗ ಆಗುವ ‘ವಿತಡ್ರಾವಲ್ ಸಿಂಪ್ಟಮ್ಸ್’ (Withdrawal Symptoms) ನಷ್ಟೇ ತೀವ್ರವಾಗಿರುತ್ತದೆ.
ಹಾಗಾಗಿ, ಯಾರಾದರೂ ನಿಮ್ಮನ್ನು “ಏನು ಪ್ರೀತಿ ಹುಚ್ಚು ಹಿಡಿದಿದೆಯಾ?” ಅಂತ ಕೇಳಿದರೆ, ಧೈರ್ಯವಾಗಿ, ಹೌದು, ನನ್ನ ಮೆದುಳಿನಲ್ಲಿ ಈಗ ಕೊಕೇನ್ ಕಿಕ್ ನಡೀತಿದೆ! ಎಂದು ಹೇಳಬಹುದು.
Teacher’s torcher ಹಣ ಪತ್ತೆಗಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿ! ಪೋಷಕರ ಆಕ್ರೋಶ
God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!
ಟ್ರಂಪ್ ತಲೆಗೆ ಬೆಲೆ ಕಟ್ಟಿದ ಇರಾಕ್ ಸಶಸ್ತ್ರ ಗುಂಪು! ದೊಡ್ಡಣ್ಣನನ್ನು ಕೊಲ್ಲುವವರಿಗೆ ಸಿಗಲಿದ್ಯಂತೆ 83 ಕೋಟಿ ಬಹುಮಾನ!