Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > S Janaki life ಹೈದ್ರಾಬಾದ್‌ನಲ್ಲಿ ಭವ್ಯ ಬಂಗಲೆಯಿದ್ರೂ ಮೈಸೂರಿನ ಬಾಡಿಗೆ ಮನೆಯಲ್ಲಿ ಗಾನಕೋಗಿಲೆ ವಾಸ! ಜಾನಕಿ ಜೀವನ ಯಾಕೆ ಹೀಗೆ? ಕೇರ್ ಟೇಕರ್ಸ್ ಹೇಳಿದ್ದೇನು?
ಕರ್ನಾಟಕದೇಶಪ್ರಮುಖಮನರಂಜನೆ

S Janaki life ಹೈದ್ರಾಬಾದ್‌ನಲ್ಲಿ ಭವ್ಯ ಬಂಗಲೆಯಿದ್ರೂ ಮೈಸೂರಿನ ಬಾಡಿಗೆ ಮನೆಯಲ್ಲಿ ಗಾನಕೋಗಿಲೆ ವಾಸ! ಜಾನಕಿ ಜೀವನ ಯಾಕೆ ಹೀಗೆ? ಕೇರ್ ಟೇಕರ್ಸ್ ಹೇಳಿದ್ದೇನು?

Share
2 Min Read
SHARE

newsics.com | ನ್ಯೂಸಿಕ್ಸ್

ಗಾನಕೋಗಿಲೆ ಎಸ್‌ ಜಾನಕಿ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಕೋಟ್ಯಂತರ ಭಾರತೀಯರ ಹೃದಯ ಗೆದ್ದವರು. ಆದರೆ, ಕಳೆದ ಕೆಲವು ಸಮಯದಿಂದ ಅವರು ಹೈದರಾಬಾದ್‌ನ ತಮ್ಮ ಭವ್ಯ ಬಂಗಲೆಯನ್ನ ಬಿಟ್ಟು, ಮೈಸೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ದೊಡ್ಡ ಬಂಗಲೆ, ಹಣದ ಸೌಲಭ್ಯವಿದ್ದರೂ ಜಾನಕಿ ಅವರು ಬಾಡಿಗೆ ಮನೆಯಲ್ಲಿ ಯಾಕಿದ್ದರು? ಅನ್ನೋ ಪ್ರಶ್ನೆಗೆ ಇದೀಗ ಅವರ ಕೇರ್‌ಟೇಕರ್‌ಗಳಾದ ಪವನ್‌ ಮತ್ತು ನವೀನ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇರ್‌ಟೇಕರ್ ಪವನ್, “ಅವರ ಮೊಮ್ಮಗಳಿಗೂ ಜಾನಕಿಯಮ್ಮ ಮೈಸೂರಿನಲ್ಲಿರೋದೇ ಸೇಫ್‌ ಅಂತ ಚೆನ್ನಾಗಿ ಗೊತ್ತಿತ್ತು. ಯಾಕೆಂದರೆ, ಸತತವಾಗಿ ಅವರ ಮೊಮ್ಮಗಳು ಅಪ್ಸರಾ ಏಳೆಂಟು ತಿಂಗಳಿನಿಂದಲೂ ಮೈಸೂರಿಗೆ ಬಂದು ಹೋಗೋದೆಲ್ಲವನ್ನೂ ಮಾಡ್ತಾ ಇದ್ದಳು. ನಾವೆಲ್ಲಾ ಇಲ್ಲಿ ಅಮ್ಮನನ್ನ ಹೇಗೆ ನೋಡಿಕೊಳ್ತಿದ್ದೇವೆ? ಎಷ್ಟು ಸೇಫ್‌ ಆಗಿ ಅವರನ್ನ ಹ್ಯಾಂಡಲ್‌ ಮಾಡ್ತಿದ್ದೇವೆ? ಡಾಕ್ಟರ್‌ ಸಪೋರ್ಟ್‌ ಎಲ್ಲಾ ಹೇಗಿದೆ? ಅನ್ನೋದು ಅಪ್ಸರಾಗೆ ಒಂದು ಐಡಿಯಾ ಇತ್ತು” ಎಂದಿದ್ದಾರೆ. ‌

ಈಗ ಬಾಡಿಗೆ ಮನೆ ವಿಷ್ಯ, ಏನೂ ಇಲ್ಲ ಬಾಡಿಗೆ ಮನೆಯಲ್ಲಿದ್ದಾರೆ ಅಂತ ಹೇಳೋದು ತುಂಬಾ ಮೂರ್ಖತನ. ಆ ರೀತಿ ಯಾರು ಮಾತಾಡ್ತಿದ್ದಾರೋ ಅವರು ಮೂರ್ಖರು, ದಡ್ಡರು. ಜಾನಕಿ ಅಮ್ಮ ಅವರದ್ದು ಹೈದರಾಬಾದ್‌ನಲ್ಲೂ ಸೂಪರ್‌ ಆಗಿರುವ ಬಂಗಲೇ ಇದೆ. ಅಲ್ಲಿ ಎಲ್ಲಾ ತರಹದ ಫೆಸಿಲಿಟಿ ಇದೆ. ಅವರ ಮನೆ ಸುತ್ತ, ವಿಲ್ಲಾ ಸುತ್ತ ಐದೈದು ಸೆಕ್ಯೂರಿಟಿಗಳಿರ್ತಾರೆ. ಮಧ್ಯರಾತ್ರಿಯಲ್ಲಿ ಕೂಗಿದ್ರು ಓಡಿ ಬರ್ತಾರೆ. ಅಷ್ಟು ಟೈಟ್‌ ಸೆಕ್ಯೂರಿಟಿ ಇದೆ ಅವರ ಹೈದರಾಬಾದ್‌ ಬಂಗಲೆಗೆ. ಅಮ್ಮನ ಬಳಿ ಸಾಕಷ್ಟು ಹಣ ಇತ್ತು.

ಅಣ್ಣ (ಮುರಳಿಕೃಷ್ಣ, ಎಸ್‌ ಜಾನಕಿ ಅವರ ಮಗ) ಮೂರು ಮೂರು ಕಾರು ಇಟ್ಟುಕೊಂಡಿದ್ರು. ಅಮ್ಮನಿಗೆ ಏನೂ ಕುಂದುಕೊರತೆ ಬಾರದೇ ಇರುವ ರೀತಿ ಅಣ್ಣ, ಅಮ್ಮನನ್ನ ನೋಡಿಕೊಂಡಿದ್ರು. ಎಲ್ಲದರಲ್ಲೂ ಸಮೃದ್ಧವಾಗಿದ್ದರು” ಎಂದಿದ್ದಾರೆ ಕೇರ್‌ಟೇಕರ್‌ ಪವನ್.

ಹಾಗಾದರೆ, ಭವ್ಯ ಬಂಗಲೆಯನ್ನು ಬಿಟ್ಟು ಜಾನಕಿಯಮ್ಮ ಮೈಸೂರಿನಲ್ಲಿ ಕಾಲ ಕಳೆಯಲು ಮುಖ್ಯ ಕಾರಣವೇನು ಎಂಬ ರಹಸ್ಯವನ್ನೂ ಅವರು ಬಿಚ್ಚಿಟ್ಟಿದ್ದಾರೆ. “ಅಮ್ಮ ಮೈಸೂರನ್ನ ಯಾಕೆ ಇಷ್ಟಪಡ್ತಿದ್ರು ಅಂತಂದರೆ, ಮುರಳಿ ಅಣ್ಣನಿಗೆ ಈ ಕ್ರೆಡಿಟ್‌ ಹೋಗಬೇಕು. ಮುರಳಿ ಅಣ್ಣ ತುಂಬಾ ಸ್ಪಿರಿಚ್ಯೂವಲ್‌ ಆಗಿದ್ರು. ಅವರಿಗೆ ದೇವಸ್ಥಾನಗಳಿಗೆ ಹೆಚ್ಚು ಹೋಗುವ ಹಾಬಿ ಇತ್ತು. ಮೈಸೂರು ಅಂತಂದರೆ, ಅದೇನೋ ಪ್ರಶಾಂತತೆ ಅವರಿಗೆ. ಏನೋ ಒಂಥರಾ ಖುಷಿ ಮತ್ತು ಆನಂದ” ಎಂದಿದ್ದಾರೆ ಕೇರ್‌ ಟೇಕರ್‌ ಪವನ್‌ ಮತ್ತು ನವೀನ್.

ಗಾನಕೋಗಿಲೆ ಎಸ್‌ ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಆಂಧ್ರ ಪ್ರದೇಶದವರಾದ ಇವರು, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ನೆಲೆಸಿದ್ದರು. ತಮ್ಮ ಕೊನೆಯ ದಿನಗಳನ್ನ ಮೈಸೂರಿನಲ್ಲೇ ಕಳೆದರು.

TAGGED:#gaanakogile #sjanaki #hyderabad #bungelow #mysore #rentedhouse #caretakers #news #entertainment #kanandanews #newsics
Share This Article
Facebook Twitter Copy Link Print
Previous Article Unlucky couple 15 ದಿನಗಳ ಹಿಂದಷ್ಟೇ ಮದುವೆ! ಬೈಕ್ ಅಪಘಾತದಲ್ಲಿ ನವವಿವಾಹಿತೆ ಸಾವು, ಗಂಭೀರ ಸ್ಥಿತಿಯಲ್ಲಿ ಪತಿ
Next Article Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

Popular Posts

Relationship- Love kick ಪ್ರೀತಿಯಲ್ಲಿ ಬಿದ್ದರೆ ಮೆದುಳು ಕೊಕೇನ್ ತಿಂದಂತೆ ಆಡುತ್ತೆ! ನಿಮ್ಮೊಳಗಿನ ‘ಲವ್ ಕೆಮಿಸ್ಟ್ರಿ’ ಬಗ್ಗೆ ನಿಮಗೇನಾದ್ರೂ ಗೊತ್ತಾ?

2 Min Read

S Janaki life ಹೈದ್ರಾಬಾದ್‌ನಲ್ಲಿ ಭವ್ಯ ಬಂಗಲೆಯಿದ್ರೂ ಮೈಸೂರಿನ ಬಾಡಿಗೆ ಮನೆಯಲ್ಲಿ ಗಾನಕೋಗಿಲೆ ವಾಸ! ಜಾನಕಿ ಜೀವನ ಯಾಕೆ ಹೀಗೆ? ಕೇರ್ ಟೇಕರ್ಸ್ ಹೇಳಿದ್ದೇನು?

2 Min Read

Unlucky couple 15 ದಿನಗಳ ಹಿಂದಷ್ಟೇ ಮದುವೆ! ಬೈಕ್ ಅಪಘಾತದಲ್ಲಿ ನವವಿವಾಹಿತೆ ಸಾವು, ಗಂಭೀರ ಸ್ಥಿತಿಯಲ್ಲಿ ಪತಿ

1 Min Read

God of money ಒಂದೇ ದಿನದಲ್ಲಿ ತಿರುಪತಿ ವೆಂಕಟರಮಣನಿಗೆ 97 ಕೋಟಿ ಕಾಣಿಕೆ!

1 Min Read

You Might Also Like

ಪ್ರಮುಖವಿದೇಶವೈರಲ್

ಟ್ರಂಪ್ ತಲೆಗೆ ಬೆಲೆ ಕಟ್ಟಿದ ಇರಾಕ್ ಸಶಸ್ತ್ರ ಗುಂಪು! ದೊಡ್ಡಣ್ಣನನ್ನು ಕೊಲ್ಲುವವರಿಗೆ ಸಿಗಲಿದ್ಯಂತೆ 83 ಕೋಟಿ ಬಹುಮಾನ!

2 Min Read
ದೇಶಪ್ರಮುಖವೈರಲ್

Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ

2 Min Read
ದೇಶಕರ್ನಾಟಕಪ್ರಮುಖವೈರಲ್

Beauty is not beautiful ಮಿಲಿಯನ್ ಫಾಲೋವರ್ಸ್ ಹೊಂದಿರುವ ಈ ‘ಸುಂದರಿ’ ಮನುಷ್ಯಳೇ ಅಲ್ಲ! ಈಕೆಯ ವಿರುದ್ಧ ಭಾರೀ ಕ್ಯಾಂಪೇನ್

2 Min Read
ಕರ್ನಾಟಕದೇಶಪ್ರಮುಖ

Chennamma critical ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ, ಆಸ್ಪತ್ರೆಗೆ ಎಚ್‌ಡಿಡಿ, ಎಚ್‌ಡಿಕೆ, ರೇವಣ್ಣ ಭೇಟಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?