newsics.com| ನ್ಯೂಸಿಕ್ಸ್
ತಿರುಪತಿ: ಶ್ರೀಮಂತ ದೇವರೆಂದೇ ಖ್ಯಾತವಾದ ತಿರುಪತಿ ತಿರುಮಲದ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ದೇವಾಲಯಕ್ಕೆ ಬರೋಬ್ಬರಿ 97 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿ(ಟಿಟಿಡಿ) ಘೋಷಿಸಿದೆ.
ತಿರುಪತಿ ದೇವಾಲಯಕ್ಕೆ ದೇಣಿಗೆ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಲೇ ಆಡಳಿತ ಮಂಡಳಿ ಜುಲೈ 15ರ ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್ ಜಾರಿ ಮಾಡಿದೆ.
ಹೊಸ ನಿಯಮದ ಪ್ರಕಾರ ಭಕ್ತರಿಗೆ ನೀಡಲಾಗುವ ಸೌಲಭ್ಯದ ಜತೆಗೆ ವಿಐಪಿ ಹಕ್ಕು ಕೂಡ ಸಂಪೂರ್ಣವಾಗಿ ಬದಲಾಗಲಿದೆ. ದಾನಿಗಳು ಈ ಹಿಂದೆ ಪಡೆಯುತ್ತಿದ್ದ ಆಜೀವ ಸೌಲಭ್ಯಗಳನ್ನು ರದ್ದುಪಡಿಸಲಾಗಿದ್ದು, ಹೊಸ ಪ್ರಿವಿಲೇಜ್ ರೂಲ್ಸ್ ಜಾರಿಯಾಗಿದೆ.
ತಿರುಪತಿ ತಿರುಮಲ ದೇವಾಲಯಕ್ಕೆ ಒಂದೇ ದಿನದಲ್ಲಿ ಬರೋಬ್ಬರಿ 2460ಕ್ಕೂ ಅಧಿಕ ಭಕ್ತರು ವಿಶೇಷ ದೇಣಿಗೆ ನೀಡಿದ್ದಾರೆ. ಇಬ್ಬರು ಭಕ್ತರು 1 ಕೋಟಿ ರೂಪಾಯಿಗೂ ಅಧಿಕ ಕಾಣಿಕೆಯನ್ನು ತಿರುಪತಿ ದೇವರಿಗೆ ಸಮರ್ಪಣೆ ಮಾಡಿದ್ರೆ, 1,246 ಭಕ್ತರು 10 ಲಕ್ಷ ದಿಂದ ಹಿಡಿದು 25 ಲಕ್ಷ ರೂಪಾಯಿವರೆಗೆ ಹಾಗೂ 1,212 ಭಕ್ತರು 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ದೇವರಿಗೆ ಕಾಣಿಕೆ ಸಮರ್ಪಿಸಿದ್ದಾರೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಟ್ರಂಪ್ ತಲೆಗೆ ಬೆಲೆ ಕಟ್ಟಿದ ಇರಾಕ್ ಸಶಸ್ತ್ರ ಗುಂಪು! ದೊಡ್ಡಣ್ಣನನ್ನು ಕೊಲ್ಲುವವರಿಗೆ ಸಿಗಲಿದ್ಯಂತೆ 83 ಕೋಟಿ ಬಹುಮಾನ!
Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ