Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ
ಪ್ರಮುಖಮನರಂಜನೆವಿದೇಶವೈರಲ್

Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

Share
1 Min Read
SHARE

newsics.com | ನ್ಯೂಸಿಕ್ಸ್

ಮಳೆ ಬರುವಾಗ ನಾವೆಲ್ಲರೂ ಚಹಾದ ಜೊತೆ ಇಷ್ಟಪಟ್ಟು ಸವಿಯುವ ಬಿಸಿಬಿಸಿ ಆಲೂಬೋಂಡಾ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಅಮೆರಿಕದ ಅತ್ಯಂತ ಪ್ರಸಿದ್ಧ ಕುಕ್ಕರಿ ಶೋ ಆದ ‘ಮಾಸ್ಟರ್‌ಶೆಫ್‌’ ವೇದಿಕೆಯಲ್ಲಿ ನಮ್ಮ ದೇಶಿ ಆಲೂಬೋಂಡಾ ಭಾರಿ ಹವಾ ಸೃಷ್ಟಿಸಿದ್ದು, ಜಗತ್ತಿನ ಖ್ಯಾತ ಶೆಫ್‌ಗಳು ಇದರ ರುಚಿಗೆ ಮನಸೋತಿದ್ದಾರೆ.

ಭಾರತೀಯ ಮೂಲದ ಐಶು ಚಲ್ಲಾ ಎಂಬ ಯುವತಿ ಅಮೆರಿಕದ ಈ ಪ್ರತಿಷ್ಠಿತ ವೇದಿಕೆಯಲ್ಲಿ ತಯಾರಿಸಿದ ಆಲೂಬೋಂಡಾ ಮತ್ತು ಚಟ್ನಿ, ವಿಶ್ವದ ಹತ್ತಾರು ದೇಶಗಳ ಐಷಾರಾಮಿ ತಿನಿಸುಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.

ಮಾಸ್ಟರ್‌ಶೆಫ್‌ನಲ್ಲಿ ‘ಇಮ್ಯುನಿಟಿ ಪಿನ್’ ಗೆದ್ದ ಐಶು

‘ಮಾಸ್ಟರ್‌ಶೆಫ್ ಯುಎಸ್‌ಎ ಸೀಸನ್ 16’ರ ಗ್ಲೋಬಲ್ ಗಾಂಟ್ಲೆಟ್ ಸ್ಪರ್ಧೆಯಲ್ಲಿ ಏಷ್ಯಾ-ಪೆಸಿಫಿಕ್ ತಂಡವನ್ನು ಪ್ರತಿನಿಧಿಸುತ್ತಿರುವ ಐಶು ಚಲ್ಲಾ, ಈ ಅದ್ಭುತ ಸಾಧನೆ ಮಾಡಿದ್ದಾರೆ.

ಬೇಯಿಸಿದ ಆಲೂಗಡ್ಡೆಗೆ ಜೀರಿಗೆ, ಮಸಾಲೆ ಹಾಗೂ ಹಸಿತೆಂಗಿನ ತುರಿ ಸೇರಿಸಿ ಗರಿಗರಿಯಾದ ಚಿನ್ನದ ಬಣ್ಣ ಬರುವಂತೆ ಐಶು ಬೋಂಡಾ ಸಿದ್ಧಪಡಿಸಿದ್ದರು. ಇದರ ಜೊತೆಗೆ ಅವರು ನೀಡಿದ ಪುದೀನಾ-ಕೊತ್ತಂಬರಿ ಹಾಗೂ ಕಾಯಿಚಟ್ನಿಯ ಕಾಂಬಿನೇಷನ್ ತೀರ್ಪುಗಾರರ ಬಾಯಲ್ಲಿ ನೀರೂರಿಸಿತು. ಆಲೂಬೋಂಡಾದ ಅದ್ಭುತ ರುಚಿಗೆ ಮನಸೋತ ಜಡ್ಜ್‌ಗಳು ಐಶು ಅವರಿಗೆ ಶೋನ ಅತ್ಯಂತ ಗೌರವಾನ್ವಿತ ‘ಇಮ್ಯುನಿಟಿ ಪಿನ್’ ನೀಡಿ ಸತ್ಕರಿಸಿದ್ದಾರೆ.

ವಿಶೇಷವೆಂದರೆ, ಈ ಶೋನ ವಿದೇಶಿ ತೀರ್ಪುಗಾರರು ನಮ್ಮ ಆಲೂಬೋಂಡಾವನ್ನು ‘ಸೇವರಿ ಡೋನಟ್’ (Savoury Donut – ಅಂದರೆ ಉಪ್ಪು ಹಾಗೂ ಖಾರವಿರುವ ಡೋನಟ್) ಎಂದು ಕರೆದು ಕೊಂಡಾಡಿದ್ದಾರೆ.

ಈ ಸಂಚಿಕೆ ಟಿವಿಯಲ್ಲಿ ಪ್ರಸಾರವಾದ ಬೆನ್ನಲ್ಲೇ, ವಿದೇಶಗಳಲ್ಲೂ ದಕ್ಷಿಣ ಭಾರತದ ಶೈಲಿಯ ಆಲೂಬೋಂಡಾ ಮಾಡುವುದು ಹೇಗೆ ಎಂಬ ಹುಡುಕಾಟ ಶುರುವಾಗಿದ್ದು, ಗೂಗಲ್‌ನಲ್ಲಿ ಇದರ ರೆಸಿಪಿಗಾಗಿ ಸಿಕ್ಕಾಪಟ್ಟೆ ಸರ್ಚ್ ಮಾಡಲಾಗುತ್ತಿದೆ. ನಮ್ಮ ಗಲ್ಲಿಗಳಲ್ಲಿ ಸಿಗುವ ಸಾಧಾರಣ ಆಲೂಬೋಂಡಾ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

TAGGED:#MasterChef #USA #Alu Bonda #news #newsics
Share This Article
Facebook Twitter Copy Link Print
Previous Article Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್
Next Article Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

Popular Posts

Electrical Safety Tips ಮಳೆಗಾಲದಲ್ಲಿ ಕರೆಂಟ್ ಶಾಕ್ ಹೊಡೆಯುವ ಭಯವೇ? ಹಾಗಿದ್ದರೆ ತಕ್ಷಣ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ

2 Min Read

SIR ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ವಿಸ್ತರಣೆ: ಹೊಸ ವೇಳಾಪಟ್ಟಿ ಪ್ರಕಟ

2 Min Read

UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ

2 Min Read

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

You Might Also Like

ಪ್ರಮುಖದೇಶಮನರಂಜನೆ

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read
ಪ್ರಮುಖCrimeದೇಶ

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read
ಪ್ರಮುಖಆರೋಗ್ಯ

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read
ಪ್ರಮುಖಆರೋಗ್ಯ

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?