Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Prisoners escape case ಮೂವರು ಕೈದಿಗಳ ಪರಾರಿ ಪ್ರಕರಣ: ಸಿಸಿ ಟಿವಿ ದೃಶ್ಯ ವೈರಲ್, ವಿಡಿಯೋ ನೋಡಿ
ಕರ್ನಾಟಕಪ್ರಮುಖವೈರಲ್

Prisoners escape case ಮೂವರು ಕೈದಿಗಳ ಪರಾರಿ ಪ್ರಕರಣ: ಸಿಸಿ ಟಿವಿ ದೃಶ್ಯ ವೈರಲ್, ವಿಡಿಯೋ ನೋಡಿ

Share
1 Min Read
SHARE

newsics.com | ನ್ಯೂಸಿಕ್ಸ್ 

ಕಲಬುರಗಿ: ರಾಜ್ಯದ ಗಮನ ಸೆಳೆದಿರುವ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಸಿಸಿ ಟಿವಿ ದೃಶ್ಯಗಳು ಇದೀಗ ವೈರಲ್ ಆಗಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಮಂಗಳವಾರ ಮುಂಜಾನೆ ಕೇಂದ್ರ ಕಾರಾಗೃಹದಿಂದ ಪೋಕ್ಸೋ, ಕೊಲೆ ಹಾಗೂ ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಪರಾರಿಯಾಗಿದ್ದರು. ಇದೀಗ ಹೊರಬಿದ್ದಿರುವ ಸಿಸಿ ಟಿವಿ ದೃಶ್ಯಗಳಲ್ಲಿ ಆರೋಪಿಗಳು ಸುಮಾರು 20 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಹತ್ತಿ ಜಿಗಿದು ಪರಾರಿಯಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ.

ವಿಡಿಯೋದಲ್ಲಿ ಮೂವರು ಕೈದಿಗಳು ಜೈಲಿನ ಒಳಭಾಗದಿಂದ ಗೋಡೆಯ ಸಮೀಪಕ್ಕೆ ತೆರಳಿ, ಗೋಡೆಯನ್ನು ಏರಿ ಹೊರಭಾಗಕ್ಕೆ ಜಿಗಿಯುತ್ತಿರುವ ದೃಶ್ಯ ದಾಖಲಾಗಿದೆ. ಇಷ್ಟೊಂದು ಎತ್ತರದ ಭದ್ರತಾ ಗೋಡೆಯನ್ನು ದಾಟಿ ಆರೋಪಿಗಳು ಪರಾರಿಯಾಗಿರುವುದು ಜೈಲು ಆಡಳಿತದ ನಿರ್ಲಕ್ಷ್ಯ ಹಾಗೂ ಭದ್ರತಾ ಲೋಪವನ್ನು ಬಯಲಿಗೆಳೆದಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ವ್ಯಾಪಕ ಶೋಧ ಕಾರ್ಯ ಆರಂಭಿಸಲಾಗಿತ್ತು. ಈ ನಡುವೆ ಪರಾರಿಯಾಗಿದ್ದ ಆರೋಪಿಗಳ ಪೈಕಿ ಸಂತೋಷ್ ಎಂಬಾತನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಆರ್‌ಟಿಒ ವೃತ್ತದ ಬಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಪರಾರಿ ಪ್ರಕರಣ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದು, ಕಾರಾಗೃಹದ ಭದ್ರತಾ ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಹಾಗೂ ಸಿಸಿ ಟಿವಿ ನಿಗಾ ವ್ಯವಸ್ಥೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಘಟನೆಯ ಕುರಿತು ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

https://www.newsics.com/wp-content/uploads/2026/07/VID-20260715-WA0023.mp4

 

Karnataka Weather Today ಹಲವು ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ, ಮೋಡ ಕವಿದ ವಾತಾವರಣ ಮುಂದುವರಿಕೆ

TAGGED:#prisoners #kalaburagi #jail #escape #viralvideo #karnataka #news #newsics #kannadanews
Share This Article
Facebook Twitter Copy Link Print
Previous Article Modi gifted sweets to slovakia leader | ಬಿಹಾರದ ಥೆಕ್ವಾ ಸವಿದ ಸ್ಲೋವಾಕಿಯಾ ನಾಯಕ: ಪ್ರಧಾನಿ ಮೋದಿ ಉಡುಗೊರೆಗೆ ಮೆಚ್ಚುಗೆ, ವೈರಲ್ ಆದ ವಿಡಿಯೋ
Next Article Kissing Young Couples in namma metro | ನಮ್ಮ ಮೆಟ್ರೋದಲ್ಲಿ ವೈರಲ್ ವಿಡಿಯೋ: ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಕುರಿತು ಮತ್ತೆ ಚರ್ಚೆ

Popular Posts

SIR ಮತದಾರರ ಪಟ್ಟಿ ಪರಿಷ್ಕರಣೆ ದಿನಾಂಕ ವಿಸ್ತರಣೆ: ಹೊಸ ವೇಳಾಪಟ್ಟಿ ಪ್ರಕಟ

2 Min Read

UT Khader 15 ನಿಮಿಷ ಲೇಟಾದ್ರೆ 108 ಆ್ಯಂಬುಲೆನ್ಸ್‌ಗೆ ₹5,000 ಫೈನ್; ಆರೋಗ್ಯ ಇಲಾಖೆಯಿಂದ ಹೊಸ ನಿಯಮ ಜಾರಿ

2 Min Read

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

1 Min Read

You Might Also Like

ಪ್ರಮುಖದೇಶಮನರಂಜನೆ

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read
ಪ್ರಮುಖCrimeದೇಶ

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read
ಪ್ರಮುಖಆರೋಗ್ಯ

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read
ಪ್ರಮುಖಆರೋಗ್ಯ

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?