newsics.com | ನ್ಯೂಸಿಕ್ಸ್
ಬೆಂಗಳೂರು: ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪ ಎದುರಿಸುತ್ತಿರುವ ಸಿನಿಮಾ ನಟ ಪ್ರಕಾಶ್ ರಾಜ್ ಅವರಿಗೆ ಬೆಂಗಳೂರಿನ ಕೋರ್ಟ್ ಜಾಮೀನು ನೀಡಿದೆ.
ದಿಲೀಪ್ ರಾಜ್ ಎಂಬುವವರು ಪ್ರಕಾಶ್ ರಾಜ್ ವಿರುದ್ಧ ಕಾನೂನು ಬಾಹಿರವಾಗಿ ನಾಲ್ಕು ವೋಟರ್ ಐಡಿ ಇಟ್ಟುಕೊಂಡಿದ್ದಾರೆ ಎಂದು ಖಾಸಗಿ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯವು ನಟನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿತ್ತು.
ಕೋರ್ಟ್‌ಗೆ ಹಾಜರಾದ ನಟ ಈ ಮುಂಚೆ ವಿಚಾರಣೆಗೆ ಬರುವಂತೆ ಕೋರ್ಟ್ ಸಮನ್ಸ್ ಕಳುಹಿಸಿದರೂ ಪ್ರಕಾಶ್ ರಾಜ್ ಬಂದಿರಲಿಲ್ಲ. ಹೀಗಾಗಿ ನ್ಯಾಯಾಧೀಶರು ನಟನ ವಿರುದ್ಧ ವಾರಂಟ್ ಜಾರಿ ಮಾಡಿದ್ದರು. ವಾರಂಟ್ ಬಂದ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಇಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು.
ತಾವು ವಿಚಾರಣೆಗೆ ಬಾರದೇ ಇರಲು ಇದ್ದ ಕಾರಣಗಳನ್ನು ನಟ ಕೋರ್ಟ್‌ಗೆ ತಿಳಿಸಿ, ಜಾಮೀನು ನೀಡುವಂತೆ ವಕೀಲರ ಮೂಲಕ ಕೇಳಿಕೊಂಡರು. ವಾದ ಆಲಿಸಿದ ನ್ಯಾಯಾಧೀಶರು, 4,000 ರೂಪಾಯಿ ನಗದು ಬಾಂಡ್ ಪಡೆದುಕೊಂಡು ನಟ ಪ್ರಕಾಶ್ ರಾಜ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.