newsics.com | ನ್ಯೂಸಿಕ್ಸ್
ಶಿವಮೊಗ್ಗ: ಎಸ್ಐಆರ್ ಕೆಲಸದ ನಿಮಿತ್ತ ಮನೆ ಮನೆಗೆ ತೆರಳುತ್ತಿದ್ದ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಎಸ್ಐಆರ್ (SIR) ಪ್ರಕ್ರಿಯೆಯ ಕರ್ತವ್ಯದಲ್ಲಿದ್ದ ಬಿಎಲ್‌ಒ (BLO) ಲಕ್ಷ್ಮೀಸಿಂಗ್ ಎಂಬುವವರು ನಾಯಿ ದಾಳಿಗೆ ಒಳಗಾದ ದುರ್ದೈವಿ.
ಅಧಿಕಾರಿಯ ಕಿರುಚಾಟ ಕೇಳಿ ತಕ್ಷಣವೇ ಅಲರ್ಟ್ ಆದ ಜೊತೆಯಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಓಡಿ ಬಂದು, ಲಕ್ಷ್ಮೀಸಿಂಗ್ ಅವರನ್ನು ರಕ್ಷಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು