newsics.com | ನ್ಯೂಸಿಕ್ಸ್
ವಾಷಿಂಗ್ಟನ್: ಮಂಗಳ ಗ್ರಹ ಹಾಗೂ ಬಾಹ್ಯಾಕಾಶದ ಇತರ ಭಾಗಗಳಿಂದ ಭೂಮಿಗೆ ತರಲಾಗುವ ಮಣ್ಣು, ಕಲ್ಲು ಹಾಗೂ ಇತರೆ ಮಾದರಿಗಳನ್ನು ನೇರವಾಗಿ ಭೂಮಿಗೆ ತರುವಂತಿಲ್ಲ! ಒಂದು ವೇಳೆ ತಂದರೆ ಇಡೀ ಭೂಮಿಯ ಜೀವಸಂಕುಲವೇ ನಾಶವಾಗಬಹುದು ಎಂಬ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಅನ್ಯಗ್ರಹಗಳ ವಸ್ತುಗಳನ್ನು ಪರೀಕ್ಷಿಸಲು ಚಂದ್ರನ ಮೇಲೆಯೇ ವಿಶೇಷ ‘ಲೂನಾರ್ ಕ್ವಾರಂಟೈನ್ ಸೌಲಭ್ಯ’ (Lunar Quarantine Facility) ಅಥವಾ ಬಾಹ್ಯಾಕಾಶ ಕ್ವಾರಂಟೈನ್ ಕೇಂದ್ರವನ್ನು ನಿರ್ಮಿಸಬೇಕು ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಿದೆ.
ಏಲಿಯನ್ ವೈರಸ್ನಿಂದ ಭೂಮಿಗೆ ಕಂಟಕ?
ನಾಸಾ (NASA) ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಮುಂದಿನ ಕೆಲವು ವರ್ಷಗಳಲ್ಲಿ ಮಂಗಳ ಗ್ರಹದಿಂದ (Mars) ಮಣ್ಣು ಮತ್ತು ಬಂಡೆಗಳ ಮಾದರಿಗಳನ್ನು ತರಲು ಭಾರಿ ಸಿದ್ಧತೆ ನಡೆಸಿವೆ.
ಆದರೆ, ಈ ಮಾದರಿಗಳಲ್ಲಿ ಭೂಮಿಗೆ ಒಗ್ಗದ, ಅತ್ಯಂತ ಭೀಕರವಾದ ಅನ್ಯಗ್ರಹ ಸೂಕ್ಷ್ಮಾಣುಜೀವಿಗಳು ಅಥವಾ ‘ಏಲಿಯನ್ ಮೈಕ್ರೋಆರ್ಗಾನಿಸಂಗಳು’ (Alien Microorganisms) ಅಡಗಿರಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ಜೀವಿಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದರೆ, ಕೋವಿಡ್ಗಿಂತಲೂ ನೂರು ಪಟ್ಟು ಅಪಾಯಕಾರಿಯಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಚಂದ್ರನನ್ನೇ ಪ್ರಯೋಗಾಲಯ ಮಾಡಲು ಸಿದ್ಧತೆ
ಈ ಸಂಭಾವ್ಯ ಅಪಾಯ ತಪ್ಪಿಸಲು ವಿಜ್ಞಾನಿಗಳು ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದಾರೆ. ಬಾಹ್ಯಾಕಾಶದಿಂದ ತರುವ ಯಾವುದೇ ವಸ್ತುವನ್ನು ಮೊದಲು ಚಂದ್ರನ ಮೇಲೆ ನಿರ್ಮಿಸಲಾಗುವ ಸುಸಜ್ಜಿತ ಕ್ವಾರಂಟೈನ್ ಲ್ಯಾಬ್ನಲ್ಲಿ ಇಳಿಸಲಾಗುತ್ತದೆ. ಅಲ್ಲಿ ಯಾವುದೇ ರೀತಿಯ ಜೈವಿಕ ಅಪಾಯ (Bio-hazard) ಇಲ್ಲ ಎಂಬುದು 100% ಖಚಿತವಾದ ನಂತರವಷ್ಟೇ ಅದನ್ನು ಭೂಮಿಗೆ ತರಲು ಅನುಮತಿ ನೀಡಲಾಗುತ್ತದೆ.
ಬಾಹ್ಯಾಕಾಶದ ಸಣ್ಣ ಸೂಕ್ಷ್ಮಾಣು ಜೀವಿಯೂ ಸಹ ಭೂಮಿಯ ಇಡೀ ಜೈವಿಕ ಪರಿಸರವನ್ನು ನಾಶಮಾಡುವ ಶಕ್ತಿ ಹೊಂದಿರುತ್ತದೆ. ಹಾಗಾಗಿ, ಚಂದ್ರನನ್ನು ರಕ್ಷಣಾ ಗೋಡೆಯಾಗಿ ಬಳಸುವುದು ಇಂದಿನ ಅನಿವಾರ್ಯತೆ ಎಂದು ಬಾಹ್ಯಾಕಾಶ ವಿಜ್ಞಾನಿಗಳ ಸಮಿತಿಯ ಪ್ರಮುಖರು ಎಚ್ಚರಿಸಿದ್ದಾರೆ.
ವಿಜ್ಞಾನ ಲೋಕದಲ್ಲಿ ಹೊಸ ಚರ್ಚೆ
ಬಾಹ್ಯಾಕಾಶ ರೇಸ್ನಲ್ಲಿ ಮುಂಚೂಣಿಯಲ್ಲಿರುವ ನಾಸಾ ಮತ್ತು ಚೀನಾ ಬಾಹ್ಯಾಕಾಶ ಸಂಸ್ಥೆಗಳು ಈಗಾಗಲೇ ಚಂದ್ರನ ಮೇಲೆ ಮಾನವ ವಸಾಹತು ನಿರ್ಮಿಸಲು ಮುಂದಾಗಿರುವ ಬೆನ್ನಲ್ಲೇ ಈ ಕ್ವಾರಂಟೈನ್ ಕೇಂದ್ರದ ಪ್ರಸ್ತಾವನೆ ಬಂದಿದೆ. ಈ ಯೋಜನೆಗೆ ಕೋಟ್ಯಂತರ ಡಾಲರ್ ವೆಚ್ಚವಾಗಲಿದ್ದು, ತಂತ್ರಜ್ಞಾನದ ದೃಷ್ಟಿಯಿಂದ ಇದು ಜಾಗತಿಕ ವಿಜ್ಞಾನ ಲೋಕದಲ್ಲಿ ಅತ್ಯಂತ ರೋಚಕ ಮತ್ತು ಸವಾಲಿನ ಹೆಜ್ಜೆಯಾಗಿ ಹೊರಹೊಮ್ಮಿದೆ.
Terrible encounter ಭೀಕರ ಎನ್ಕೌಂಟರ್ಗೆ ನಾಲ್ವರು ಶೂಟರ್ಸ್ ಬಲಿ, 3 ಪೊಲೀಸರಿಗೆ ಗಾಯ, 60 ಬಾರಿ ಗುಂಡು!
Court Order ಗಾಂಜಾ ಸೇವಿಸಿದ ಯುವಕನಿಂದಲೇ ಶಾಲೆಯಲ್ಲಿ ಜಾಗೃತಿ ಪಾಠ! ಗಮನ ಸೆಳೆದ ಕೋರ್ಟ್ ಆದೇಶ
Snakes escaped ಹಾವು ಸಾಕಾಣಿಕಾ ಕೇಂದ್ರಕ್ಕೆ ನುಗ್ಗಿದ ಮಳೆ ನೀರು, 900 ಹಾವುಗಳು ಎಸ್ಕೇಪ್! ವೈರಲ್ ವಿಡಿಯೋ ನೋಡಿ