Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ಗಜಕೇಸರಿ ಯೋಗ: ಈ ಐದು ರಾಶಿಗಳ ಜನರಿಗೆ‌ ಭಾರೀ‌ ಅದೃಷ್ಟ
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ಇಂದು ಗಜಕೇಸರಿ ಯೋಗ: ಈ ಐದು ರಾಶಿಗಳ ಜನರಿಗೆ‌ ಭಾರೀ‌ ಅದೃಷ್ಟ

Share
4 Min Read
SHARE

newsics.com | ನ್ಯೂಸಿಕ್ಸ್

ಇಂದು ಜುಲೈ 9, ಗುರುವಾರ. ಈ ದಿನ ಗಜಕೇಸರಿ ಯೋಗ, ದುರುಧರ ಯೋಗ, ಸಮ ಯೋಗ, ಹಂಸ ರಾಜಯೋಗ ಸಂಯೋಗಗೊಂಡಿವೆ.

ಜತೆಗೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ. ಈ ಶುಭ ದಿನ ಶನಿಯು ತನ್ನ ನಕ್ಷತ್ರ ಪಾದವನ್ನು ಸಹ ಬದಲಾಯಿಸಲಿದೆ. ಇಂದು ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಇಂದು ಚಂದ್ರನ ಸಂಚಾರವು ಮೇಷ ರಾಶಿಯಲ್ಲಿ ಆಗುವುದು. ಹಾಗೆ ಚಂದ್ರನಿಂದ 12ನೇ ಮನೆಯಲ್ಲಿ ಶನಿ ಮತ್ತು ಮಂಗಳನು ಎರಡನೇ ಮನೆಯಲ್ಲಿ ಚಲಿಸುವ ಮೂಲಕ ಇಂದು ದುರುಧರ ಯೋಗದ ನಿರ್ಮಾಣವಾಗುವುದು. ಜತೆಗೆ ಗುರು ಗ್ರಹವು ಕಟಕ ರಾಶಿಯಲ್ಲಿ ಚಲಿಸುವ ಮೂಲಕ ಹಂಸರಾಜ ಯೋಗದ ನಿರ್ಮಾಣವಾಗಲಿದೆ. ಇದರೊಂದಿಗೆ ಚಂದ್ರನಿಂದ ನಾಲ್ಕನೇ ಮನೆಯಲ್ಲಿ ಗುರು ಚಲಿಸುವ ಮೂಲಕ ಗಜಕೇಸರಿ ಯೋಗ ನಿರ್ಮಾಣವಾಗುವುದು. ಹಾಗೆ ಚಂದ್ರ ಸೂರ್ಯನಿಂದ 11ನೇ ಮನೆಯಲ್ಲಿ ಚಲಿಸುವ ಮೂಲಕ ಸಮ ಯೋಗದ ಸೃಷ್ಟಿಯಾಗಲಿದೆ.

ಮೇಷ

ಈ ರಾಶಿಗೆ ಸೇರಿದ ಜನರಿಗೆ ಜುಲೈ 9ರ ಗುರುವಾರದ ದಿನ ಮನೋಬಲ ಮತ್ತು ಉತ್ಸಾಹದಲ್ಲಿ ಸಾಕಷ್ಟು ಹೆಚ್ಚಳವಾಗುವುದು. ಹಾಗೆ ಮೇಷ ರಾಶಿಗೆ ಸೇರಿದ ಜನರು ತಮ್ಮ ಕೆಲಸಗಳಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿರುವರು. ಹಾಗೆ ತಮ್ಮ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ದೊರಕುವುದರಿಂದ ಸಾಕಷ್ಟು ಸಂತೋಷದಿಂದಿರುವರು. ಮೇಷ ರಾಶಿಗೆ ಸೇರಿದ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲದಿಂದ ಅಪಾರ ಆರ್ಥಿಕ ಲಾಭ ದೊರಕಲಿದೆ. ಮೇಷ ರಾಶಿಗೆ ಸೇರಿದ ಜನರು ಕಲಾತ್ಮಕ ಮತ್ತು ರಚನಾತ್ಮಕ ಸಾಮರ್ಥ್ಯದಲ್ಲಿ ಸಾಕಷ್ಟು ವೃದ್ಧಿ ಸಹ ಹೊಂದಲಿದ್ದಾರೆ. ನೀವು ನಿಮ್ಮ ಮಾತು ಮತ್ತು ವ್ಯವಹಾರ ಕೌಶಲ್ಯದಿಂದಾಗಿ ವಿರೋಧಿಗಳಿಂದ ನಿಮ್ಮ ಕೆಲಸವನ್ನು ಮಾಡಿಸುವಲ್ಲಿ ಯಶಸ್ಸು ಕಾಣುವಿರಿ. ಹಾಗೆ ಮೇಷ ರಾಶಿಗೆ ಸೇರಿದ ಜನರ ವೈವಾಹಿಕ ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಾಗುವುದು.ಮೇಷ ರಾಶಿಗೆ ಸೇರಿದ ಜನರು ಶಿವನಿಗೆ ಅಭಿಷೇಕ ಮಾಡುವುದರಿಂದ ಶುಭವಾಗುವುದು.

ಮಿಥುನ

ಮಿಥುನ ರಾಶಿಗೆ ಸೇರಿದ ಜನರಿಗೆ ಇಂದು ಗುರುವಾರದ ದಿನ ಚಂದ್ರನು ನಿಮ್ಮ ಜಾತಕದ 11ನೇ ಮನೆಯಲ್ಲಿ ಚಲಿಸುವ ಮೂಲಕ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿಮಗೆ ಅಪಾರ ಲಾಭವನ್ನು ಗಳಿಸುವಂತೆ ಮಾಡಲಿದೆ. ಈ ಸಂದರ್ಭದಲ್ಲಿ ಮಿಥುನ ರಾಶಿಗೆ ಸೇರಿದ ಜನರು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚಿನ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಹಾಗೆ ಮಿಥುನ ರಾಶಿಗೆ ಸೇರಿದ ಜನರು ತಮ್ಮ ಮನೆಯವರೊಂದಿಗೆ ಮನೋರಂಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಮಯವನ್ನು ಕಳೆಯುವರು.

ಕೆಲಸವನ್ನು ಮಾಡುವ ಮಿಥುನ ರಾಶಿಗೆ ಸೇರಿದ ಜನರು  ತಮ್ಮ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲವನ್ನು ಗಳಿಸಲಿದ್ದಾರೆ. ಜೊತೆಗೆ ಮಿಥುನ ರಾಶಿಗೆ ಸೇರಿದ ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಶಕ್ತಿ ಹೊಂದುವರು. ಇದರೊಂದಿಗೆ ಕಿರಿಯ ಸಹೋದರಿ, ಸಹೋದರರೊಂದಿಗಿನ ಸಂಬಂಧವನ್ನು ಬಲಪಡಿಸಲು ಈ ಅವಧಿಯು ಸಾಕಷ್ಟು ಅನುಕೂಲಕರವಾಗಿರುವುದು. ಮಿಥುನ ರಾಶಿಗೆ ಸೇರಿದ ಜನರು ಗಜೇಂದ್ರ ಮೋಕ್ಷವನ್ನು ಪಠಿಸಿರಿ. ಇದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ.

ಕರ್ಕಾಟಕ

ಕರ್ಕಾಟಕ ರಾಶಿಗೆ ಸೇರಿದ ಜನರಿಗೆ ಇಂದು ಜುಲೈ 9 ರ ಗುರುವಾರದ ದಿನ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟ ಪ್ರಗತಿ ಲಭಿಸುವ ಯೋಗ ನಿರ್ಮಾಣಗೊಳ್ಳುವುದು. ಹಾಗೆ ನಿಮ್ಮ ಕಾರ್ಯ ಯೋಜನೆಗಳಿಂದಾಗಿ ನೀವು ಸಾಕಷ್ಟು ಲಾಭವನ್ನು ಗಳಿಸುವಿರಿ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕಟಕ ರಾಶಿಗೆ ಸೇರಿದ ಜನರು ಹೆಚ್ಚು ಅನುಕೂಲಗಳನ್ನು ಹೊಂದಲಿದ್ದಾರೆ. ಜತೆಗೆ ನಿಮ್ಮ ಮನಸ್ಸಿನಲ್ಲಿ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಹೆಚ್ಚಾಗುವುದು ಮತ್ತು ನೀವು ಸಾಕಷ್ಟು ಉತ್ಸಾಹದಿಂದಿರುವಿರಿ. ಇದರಿಂದಾಗಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಕರ್ಕಾಟಕ ರಾಶಿಗೆ ಸೇರಿದ ಜನರು ಸಾಕಷ್ಟು ಸಕಾರಾತ್ಮಕ ಪ್ರಭಾವಕ್ಕೆ ಒಳಗಾಗುವರು. ಸ್ನೇಹಿತರು ಮತ್ತು ಮನೆಯ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಗಳಿಸುವಿರಿ. ಜತೆಗೆ ಈ ಅವಧಿಯಲ್ಲಿ ಯಾವುದಾದರೂ ಆಪ್ತ ಸಂಬಂಧಿಕರ ಸಹಾಯದಿಂದ ಮನೆಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುವುದು. ಹಾಗೆ ಕರ್ಕಾಟಕ ರಾಶಿಗೆ ಸೇರಿದ ಜನರ ತಮ್ಮ ಸುಖ, ಸಮೃದ್ಧಿಯನ್ನು ಹೆಚ್ಚಿಸುವಂತಹ ವಸ್ತುಗಳನ್ನು ಖರೀದಿಸುವರು. ಜತೆಗೆ ಈ ಅವಧಿಯಲ್ಲಿ ಕಟಕ ರಾಶಿಗೆ ಸೇರಿದ ಜನರ ಪ್ರೇಮ ಸಂಬಂಧ ಭಾವನಾತ್ಮಕವಾಗಿ ಹೆಚ್ಚು ಬಲಶಾಲಿಯಾಗಿರುವುದು. ಶ್ರೀ ಭಜರಂಗ ಬಾಣವನ್ನು ಪಠಿಸಿ. ಇದರಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ.

ತುಲಾ

ಇಂದು ತುಲಾ ರಾಶಿಗೆ ಸೇರಿದ ಜನರಿಗೆ ಸಂತೋಷ ಹಾಗೂ ಸಮೃದ್ಧಿಯಿಂದ ಕೂಡಿದಂತಹ ದಿನವಾಗಿರುವುದು. ನಿಮ್ಮ ರಾಶಿಯ ಅಧಿಪತಿಯಾದ ಶುಕ್ರನು ನಿಮ್ಮ ರಾಶಿಯ 11ನೇ ಮನೆಯಲ್ಲಿ ಚಲಿಸುವುದರಿಂದಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದು ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸ್ಥಿರವಾದ ಸ್ಥಾನವನ್ನು ತಲುಪಲು ಸಾಧ್ಯವಾಗಲಿದೆ. ಇಂದು ಟೆಕ್ನಿಕಲ್ ಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ವಿಶೇಷವಾಗಿ ಲಾಭ ಮತ್ತು ಯಶಸ್ಸು ದೊರಕಲಿದೆ. ಹಾಗೆ ತಂದೆ ಮತ್ತು ಮನೆಯ ಹಿರಿಯರ ಸಂಪೂರ್ಣ ಬೆಂಬಲವನ್ನು ಗಳಿಸುವಿರಿ. ಈ ರಾಶಿಗೆ ಸೇರಿದ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನಾಳೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗುವುದು. ಹೊರಗಿನ ಆಹಾರವನ್ನು ಸೇವಿಸದಂತೆ ಎಚ್ಚರ ವಹಿಸುವುದು ಉತ್ತಮ. ಶುಕ್ರನೊಂದಿಗೆ ಕೇತುವಿನ ಚಲನೆಯಿಂದಾಗಿ ನೀವು ಹೆಚ್ಚು ರೋಮ್ಯಾಂಟಿಕ್ ಆಗಿರುವಿರಿ ಮತ್ತು ನಿಮ್ಮ ಜೀವನದಲ್ಲಿ ಪ್ರೀತಿಯ ಹೆಚ್ಚಳವನ್ನು ನೋಡಬಹುದಾಗಿದೆ. ಶ್ರೀ ರಾಮರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ನಿಮಗೆ ಹೆಚ್ಚು ಶುಭ ಫಲ ದೊರಕುವುದು.

ಮಕರ

ಮಕರ ರಾಶಿಗೆ ಸೇರಿದ ಜನರಿಗೆ ಜುಲೈ 9ರ ಗುರುವಾರದ ದಿನ ಗ್ರಹಗಳ ಚಲನೆಯು ಸಾಕಷ್ಟು ಅನುಕೂಲಕರವಾಗಿರುವುದು. ಹಾಗೆ ತಾಯಿ ಮತ್ತು ಅತ್ತೆ ಮಾವನವರಿಂದ ಹೆಚ್ಚಿನ ಲಾಭ ಹಾಗೂ ಸಂತೋಷವನ್ನು ಗಳಿಸುವಿರಿ. ನಿಮ್ಮ ಕುಟುಂಬ ಜೀವನ ಸಂತಸದಿಂದ ಕೂಡಿರಲಿದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯವಿರುವುದು. ಮನೆಯವರೊಂದಿಗೆ ಹೊರಗೆ ಸುತ್ತಾಡಲು ತೆರಳುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ. ನಿಮ್ಮ ಆಪ್ತ ಸಂಬಂಧಿಕರನ್ನು ಭೇಟಿಯಾಗಬಹುದಾಗಿದೆ. ಜತೆಗೆ ಅಕೌಂಟ್, ಶಿಕ್ಷಣ ಇತ್ಯಾದಿಗಳಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರು ಗುರು ಗ್ರಹದ ಪ್ರಭಾವದಿಂದಾಗಿ ಹೆಚ್ಚಿನ ಪ್ರಯೋಜನ ಗಳಿಸಲಿದ್ದಾರೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ದೊರಕುವುದು. ನೀವು ಹೊಸ ಪಾಪುದಾರಿಗೆಯಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ಇದರೊಂದಿಗೆ ನೀವು ನಿಮ್ಮ ಆಪ್ತರ ಸಹಾಯದಿಂದ ಮಾನಸಿಕ ಸಂತೋಷವನ್ನು ಹೊಂದಲು ಸಾಧ್ಯವಾಗುವುದು. ವಿಷ್ಣು ದೇವನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಮತ್ತು ಕೇಸರಿ ತಿಲಕವನ್ನು ಹಚ್ಚಿರಿ.

Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?

 

TAGGED:Gajakesari Yoga today: People of these five signs are very lucky
Share This Article
Facebook Twitter Copy Link Print
Previous Article Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!
Next Article Horoscope ಇಂದಿನ ರಾಶಿಫಲ: ಮಿಥುನ ರಾಶಿಯವರಿಗೆ ಅನಾರೋಗ್ಯ ಭೀತಿ, ಕನ್ಯಾ ರಾಶಿಯವರಿಗೆ ಕಾದಿದೆ ವಿವಾಹ ಯೋಗ! ನಿಮ್ಮ ರಾಶಿ ಫಲ ಇಲ್ಲಿದೆ…

Popular Posts

Horoscope ಇಂದಿನ ರಾಶಿಫಲ: ಮಿಥುನ ರಾಶಿಯವರಿಗೆ ಅನಾರೋಗ್ಯ ಭೀತಿ, ಕನ್ಯಾ ರಾಶಿಯವರಿಗೆ ಕಾದಿದೆ ವಿವಾಹ ಯೋಗ! ನಿಮ್ಮ ರಾಶಿ ಫಲ ಇಲ್ಲಿದೆ…

6 Min Read

ASTRO ಇಂದು ಗಜಕೇಸರಿ ಯೋಗ: ಈ ಐದು ರಾಶಿಗಳ ಜನರಿಗೆ‌ ಭಾರೀ‌ ಅದೃಷ್ಟ

4 Min Read

Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!

2 Min Read

Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

1 Min Read

You Might Also Like

ಪ್ರಮುಖರಿಲೇಷನ್‌ಶಿಪ್ವಿದೇಶವೈರಲ್

Strange first night ಇಲ್ಲಿನ ಫಸ್ಟ್ ನೈಟ್‌ನಲ್ಲಿ ಹುಡುಗಿಯ ತಾಯಿಯೂ ಇರ್ತಾಳೆ!

3 Min Read
ಪ್ರಮುಖವಿದೇಶ

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read
ದೇಶಪ್ರಮುಖವೈರಲ್

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?