Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Grihajyoti scheme ಗೃಹಜ್ಯೋತಿ ಯೋಜನೆ ಮರುಪರಿಶೀಲನೆ: ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿವೆ ಐದು ಸರಳ ಹಂತಗಳು
ಕರ್ನಾಟಕಪ್ರಮುಖವೈರಲ್

Grihajyoti scheme ಗೃಹಜ್ಯೋತಿ ಯೋಜನೆ ಮರುಪರಿಶೀಲನೆ: ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿವೆ ಐದು ಸರಳ ಹಂತಗಳು

Share
3 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ಆ್ಯಪ್ ಮೂಲಕ ಮರುಪರಿಶೀಲನೆ ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವ ಗ್ರಾಹಕರು ಈ ಕೆಳಗಿನ ಹಂತಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು. ಒಟ್ಟು 5 ಹಂತಗಳು ಇವೆ. ಈ ಬಗ್ಗೆ ವಿಡಿಯೋವೊಂದನ್ನು ಲೈನ್​​ ಮ್ಯಾನ್​ ತಮ್ಮ ಇನ್ಸ್ಟಾಗ್ರಾಮ್​​ ಖಾತೆ @powerman_yogesh ಎಂಬ ಖಾತಯಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ವಿಡಿಯೋವನ್ನು ನೀಡಿದ್ದಾರೆ.

ಹಂತ 1: ಗ್ರಾಹಕರ ವಿವರಗಳ ಪರಿಶೀಲನೆ

ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೃಹ ಜ್ಯೋತಿ ಆಪ್ (Gruha Jyothi App) ಅನ್ನು ಓಪನ್ ಮಾಡಿಕೊಳ್ಳಿ.

ನಿಮ್ಮ ವಿದ್ಯುತ್ ಸರಬರಾಜು ಸಂಸ್ಥೆಯನ್ನು (ESCOM – ಉದಾಹರಣೆಗೆ: HESCOM, BESCOM ಇತ್ಯಾದಿ) ಆಯ್ಕೆ ಮಾಡಿ.

ಬಳಿಕ ನಿಮ್ಮ ಗ್ರಾಹಕರ ಖಾತೆ ಸಂಖ್ಯೆಯನ್ನು (Account ID) ನಮೂದಿಸಿ, ‘ವಿವರಗಳನ್ನು ಪಡೆಯಿರಿ’ ಎಂಬುದರ ಮೇಲೆ ಕ್ಲಿಕ್ ಮಾಡಿ.

ಈಗ ಪರದೆಯ ಮೇಲೆ ಗ್ರಾಹಕರ ಹೆಸರು ಮತ್ತು ವಿಳಾಸದ ವಿವರಗಳು ಕಾಣಿಸುತ್ತವೆ. ಇವು ಸರಿಯಾಗಿದ್ದರೆ ‘ಹೌದು’ ಎಂದು ಕ್ಲಿಕ್ ಮಾಡಿ ಮುಂದುವರಿಯಿರಿ.

ಹಂತ 2: ಮೊಬೈಲ್ ಮತ್ತು ಆಧಾರ್ ಇ-ಕೆವೈಸಿ (e-KYC) ಪರಿಶೀಲನೆ

ಮೊಬೈಲ್ ಪರಿಶೀಲನೆ: ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆ ಸಂಖ್ಯೆಗೆ ಬರುವ ಒಟಿಪಿ (OTP) ಅನ್ನು ನಮೂದಿಸುವ ಮೂಲಕ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.

ಸಂಬಂಧದ ವಿವರ: ನೀವು ಮನೆಯ ಮಾಲೀಕರೇ (Owner) ಅಥವಾ ಬಾಡಿಗೆದಾರರೇ (Tenant) ಎಂಬುದನ್ನು ಆಯ್ಕೆ ಮಾಡಿ.

ಆಧಾರ್ ಇ-ಕೆವೈಸಿ: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಯಮಗಳಿಗೆ ಒಪ್ಪಿಗೆ ಸೂಚಿಸಿ ಒಟಿಪಿ ಜನರೇಟ್ ಮಾಡಿ. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ಆಧಾರ್ ಪರಿಶೀಲನೆ ಪೂರ್ಣಗೊಳಿಸಿ.

ತದನಂತರ ನಿಮ್ಮ ಜಿಲ್ಲೆ, ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.

ಹಂತ 3: ಮತದಾರರ ಚೀಟಿ ಹಾಗೂ ರೇಷನ್ ಕಾರ್ಡ್ ವಿವರಗಳು

ನಿಮ್ಮ ರೇಷನ್ ಕಾರ್ಡ್ ಪ್ರಕಾರ (APL/BPL) ಸೂಕ್ತ ಆಯ್ಕೆಯನ್ನು ಆರಿಸಿ.

ನೀವು ಕರ್ನಾಟಕದ ನೋಂದಾಯಿತ ಮತದಾರರೇ ಎಂಬುದಕ್ಕೆ ‘ಹೌದು’ ಎಂದು ಗುರುತಿಸಿ.

ನಿಮ್ಮ ಮತದಾರರ ಚೀಟಿಯಲ್ಲಿ (Voter ID) ಇರುವಂತೆ ನಿಮ್ಮ ಪೂರ್ಣ ಹೆಸರನ್ನು ಮತ್ತು EPIC ಸಂಖ್ಯೆಯನ್ನು ನಮೂದಿಸಿ.

ನಿಮ್ಮ ವೋಟರ್ ಐಡಿಯ ಮುಂಭಾಗ (Front Side) ಮತ್ತು ಹಿಂಭಾಗದ (Back Side) ಸ್ಪಷ್ಟವಾದ ಫೋಟೋವನ್ನು ಕ್ಯಾಮೆರಾ ಮೂಲಕ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಿ.

ಹಂತ 4: ಆದಾಯ ತೆರಿಗೆ, ವೃತ್ತಿ ಮತ್ತು ವರ್ಗದ ಆಯ್ಕೆ

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ (Taxpayer) ‘ಹೌದು’ ಎಂದು, ಇಲ್ಲದಿದ್ದರೆ ‘ಇಲ್ಲ’ ಎಂದು ಆಯ್ಕೆ ಮಾಡಿ. (ತೆರಿಗೆದಾರರಾಗಿದ್ದರೆ ಪ್ಯಾನ್ ಕಾರ್ಡ್ ವಿವರ ಹಾಗೂ ಫೋಟೋ ಅಪ್‌ಲೋಡ್ ಮಾಡಬೇಕಾಗುತ್ತದೆ).

ನಿಮ್ಮ ವೃತ್ತಿಯನ್ನು (ಉದಾಹರಣೆಗೆ: ರೈತ, ಸ್ವಯಂ ಉದ್ಯೋಗ, ಶಿಕ್ಷಕ ಇತ್ಯಾದಿ) ಆಯ್ಕೆ ಮಾಡಿ.

ನಿಮ್ಮ ಸಾಮಾಜಿಕ ವರ್ಗವನ್ನು (SC, ST, OBC, Minority, ಇತರೆ) ಆಯ್ಕೆ ಮಾಡಿಕೊಳ್ಳಿ.

ಗಮನಿಸಿ: ನೀವು ‘ST’ ಅಥವಾ ನಿರ್ದಿಷ್ಟ ವರ್ಗವನ್ನು ಆಯ್ಕೆ ಮಾಡಿದರೆ, ಕಡ್ಡಾಯವಾಗಿ ನಿಮ್ಮ RD ಪ್ರಮಾಣಪತ್ರ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. OBC ಅಥವಾ ಇತರೆ ವರ್ಗಗಳಿಗೆ ಇದರ ಅಗತ್ಯವಿರುವುದಿಲ್ಲ.

ಹಂತ 5: ಫೋಟೋ ಅಪ್‌ಲೋಡ್ ಮತ್ತು ಅಂತಿಮ ಸಲ್ಲಿಕೆ

ಕೊನೆಯದಾಗಿ ಅರ್ಜಿದಾರರ ಲೈವ್ ಫೋಟೋವನ್ನು ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.

ಸ್ವಯಂ ಘೋಷಣೆಯ ನಿಯಮಗಳನ್ನು (Declarations) ಜಾಗರೂಕತೆಯಿಂದ ಓದಿ, ಸರಿಯಾಗಿದೆ ಎಂದು ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

ಎಲ್ಲಾ ವಿವರಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು, ಕೊನೆಯಲ್ಲಿ ‘ಅರ್ಜಿ ಸಲ್ಲಿಸಿ’ ಬಟನ್ ಒತ್ತಿ.

ಈ ಹಂತಗಳು ಪೂರ್ಣಗೊಂಡ ತಕ್ಷಣ ಪರದೆಯ ಮೇಲೆ ನೋಂದಣಿ ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಮುಂದಿನ ಪ್ರಕ್ರಿಯೆಯ ಕುರಿತು ನಿಮಗೆ ಮಾಹಿತಿ ನೀಡಲಾಗುತ್ತದೆ.

https://www.instagram.com/reel/DaVWRKHhSHs/?igsh=MWlhYnZudTY2ZTdkeQ==

https://www.instagram.com/reel/DaVWRKHhSHs/?igsh=MWlhYnZudTY2ZTdkeQ==

 

Rain & Holiday ರಾಜ್ಯದ ಅಲ್ಲಲ್ಲಿ ಮುಂಗಾರು ಮಳೆ ಜೋರು: 9 ಜಿಲ್ಲೆಗಳಿಗೆ ಅಲರ್ಟ್, 5 ಜಿಲ್ಲೆಗಳಲ್ಲಿಂದು ಶಾಲಾ‌ ಕಾಲೇಜುಗಳಿಗೆ ರಜೆ

Share This Article
Facebook Twitter Copy Link Print
Previous Article Rain & Holiday ರಾಜ್ಯದ ಅಲ್ಲಲ್ಲಿ ಮುಂಗಾರು ಮಳೆ ಜೋರು: 9 ಜಿಲ್ಲೆಗಳಿಗೆ ಅಲರ್ಟ್, 5 ಜಿಲ್ಲೆಗಳಲ್ಲಿಂದು ಶಾಲಾ‌ ಕಾಲೇಜುಗಳಿಗೆ ರಜೆ
Next Article Wayanad landslide ವಯನಾಡು ಭೂಕುಸಿತದ ಬೆಚ್ಚಿಬೀಳಿಸುವ ವಿಡಿಯೋ‌ ನೋಡಿ

Popular Posts

ASTRO ಇಂದು ಗಜಕೇಸರಿ ಯೋಗ: ಈ ಐದು ರಾಶಿಗಳ ಜನರಿಗೆ‌ ಭಾರೀ‌ ಅದೃಷ್ಟ

4 Min Read

Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!

2 Min Read

Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

1 Min Read

Strange first night ಇಲ್ಲಿನ ಫಸ್ಟ್ ನೈಟ್‌ನಲ್ಲಿ ಹುಡುಗಿಯ ತಾಯಿಯೂ ಇರ್ತಾಳೆ!

3 Min Read

You Might Also Like

ಪ್ರಮುಖವಿದೇಶ

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read
ದೇಶಪ್ರಮುಖವೈರಲ್

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read
ದೇಶಪ್ರಮುಖವಿದೇಶ

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?