Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ
ಕರ್ನಾಟಕದೇಶಪ್ರಮುಖ

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

Share
2 Min Read
SHARE

newsics.com| ನ್ಯೂಸಿಕ್ಸ್

ಸುಮಾರು 2000 ವರ್ಷಗಳ ಹಳೆಯ ಭಾರತದ ಚಿನ್ನದ ಉಂಗುರವೊಂದು ಥೈಲ್ಯಾಂಡ್ ಸಮಾಧಿ ಸ್ಥಳದಲ್ಲಿ ಪತ್ತೆಯಾಗಿದೆ. ಈ ಉಂಗುರದ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಕ್ಷರಗಳಿವೆ. ಈ ಲಿಪಿಯ ರಹಸ್ಯವನ್ನು ಪುರಾತತ್ವ ಇಲಾಖೆ ಬಹಿರಂಗಪಡಿಸಿದೆ.

ಥೈಲ್ಯಾಂಡ್‌ನ ಲಲಿತ ಕಲಾ ಇಲಾಖೆ ಪತ್ತೆಯಾದ ಉಂಗುರದ ಕುರಿತು ಸಂಶೋಧನೆ ನಡೆಸಿದೆ. ಇದು ಭಾರತದ ಉಂಗುರ ಅನ್ನೋದು ಖಚಿತಪಡಿಸಿದೆ. ಬ್ರಾಹ್ಮಿ ಲಿಪಿಯಲ್ಲಿ “ಪುಸರಖಿತಸ” ಎಂಬ ಅಕ್ಷರಗಳನ್ನು ಕೆತ್ತಲಾಗಿದೆ. ಈ ಪದಗಳನ್ನು ಜೋಡಿಸಿ ಸಂಸ್ಕೃತ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಪುಷ್ಯ ನಕ್ಷತ್ರದಿಂದ ರಕ್ಷಿಸಲ್ಪಟ್ಟವನು ಎಂದಾಗಿದೆ.ಅಂದರೆ ಪವಿತ್ರ ಹಾಗೂ ಶುಭಮಂಗಳ ಪುಷ್ಯ ನಕ್ಷತ್ರ ಉಲ್ಲೇಖ ಥೈಲ್ಯಾಂಡ್‌ನಲ್ಲಿ ಪತ್ತೆಯಾದ ಉಂಗುರದಲ್ಲಿದೆ.

ಸಂಶೋಧನೆ ವೇಳೆ ಎರಡು ಚಿನ್ನದ ಉಂಗುರಗಳು ಪತ್ತೆಯಾಗಿದೆ. ಒಂದರಲ್ಲಿ ಮಾತ್ರ ಬ್ರಾಹ್ಮಿ ಲಿಪಿಯ ಕೆತ್ತನೆ ಇದೆ. ಮತ್ತೊಂದರಲ್ಲಿ ಯಾವುದೇ ಕೆತ್ತನೇ ಇಲ್ಲ. ಚಿನ್ನದ ಉಂಗುರ ಜೊತೆ ಮಾನವನ ಪ್ರಾಚೀನ ಕಾಲದ ಅಸ್ಥಿಪಂಜರಗಳು ಪತ್ತೆಯಾಗಿದೆ. ಬ್ರಾಹ್ಮಿ ಲಿಪಿ ಹಾಗೂ ಸಮಾಧಿ ಶೈಲಿಯನ್ನು ಆಧರಿಸಿ ಇದು ಭಾರತದ ಪ್ರಾಚೀನ ವರ್ತಕರ ಸಮುದಾಯಕ್ಕೆ ಸೇರಿದ ಶ್ರೀಮಂತ ವ್ಯಾಪಾರಿಯ ಉಂಗುರವಾಗಿರಬಹುದು ಎಂದಿದ್ದಾರೆ. ಭಾರತ ಹಾಗೂ ಥೈಲ್ಯಾಂಡ್ ನಡುವೆ ಸಮುದ್ರ ವ್ಯಾಪಾರ ನಡೆಸುವ ಸಂದರ್ಭದಲ್ಲಿ ವರ್ತಕ ಕುಟುಂಬ ಸಮಾಧಿ ಮಾಡಿರುವ ಸಾಧ್ಯತೆ ಇದೆ. ಸಮಾಧಿ ವೇಳೆ ಅವರ ಪ್ರಿಯ ವಸ್ತುಗಳನ್ನು ಸಮಾಧಿ ಮಾಡುವ ಪದ್ಥತಿ ಈಗಲೂ ಹಲವೆಡೆ ಇದೆ.

ಬ್ಯಾಂಕಾಕ್‌ನಿಂದ 130 ಕಿಲೋಮೀಟರ್ ದೂರದ ಡಾನ್‌ಯಾಯಿ ಥಾಂಗ್ ಪ್ರದೇಶದಲ್ಲಿ ಈ ಚಿನ್ನದ ಉಂಗುರ ಪತ್ತೆಯಾಗಿದೆ. ರೈತನೊಬ್ಬ ತನ್ನ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಸಜ್ಜುಗೊಳಿಸುವಾಗ ಪರಂಪರೆ ಕುರುಹುಗಳ ಪತ್ತೆಯಾಗಿದೆ. ಹೀಗಾಗಿ ರೈತ ನೇರವಾಗಿ ಥೈಲ್ಯಾಂಡ್ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದ. ಹೀಗಾಗಿ ಸಂಶೋಧಕರು ಉತ್ಖನನ ಮಾಡುತ್ತಿದ್ದಾರೆ. ಇತಿಹಾಸದ ಹಲವು ಕುರುಹುಗಳು ಪತ್ತೆಯಾಗಿದೆ. ಈ ಪೈಕಿ ಭಾರತ ಹಾಗೂ ಥೈಲ್ಯಾಂಡ್ ನಡುವಿನ ಸಂಬಂಧ, ಇತಿಹಾಸಗಳ ಕರುಹುಗಳೇ ಹೆಚ್ಚಾಗಿದೆ.

ಸದ್ಯ ಉತ್ಖನನ ನಡೆಸುತ್ತಿರುವ ಪ್ರದೇಶ ಥೈಲ್ಯಾಂಡ್‌ ಇತಿಹಾಸದಲ್ಲಿ ಕಬ್ಬಿಣದ ಪ್ರಾಂತ್ಯವಾಗಿ ಹೆಸರುವಾಸಿಯಾಗಿತ್ತು. ರಾಜ ಮಹಾರಾಜರು ಇಲ್ಲಿಂದ ಕಬ್ಬಿಣದ ವಿವಿಧ ಹಲವು ಸಲಕರಣೆಗಳ ಖರೀದಿ ನಡೆಯುತ್ತಿತ್ತು ಎಂಬ ಇತಿಹಾಸವಿದೆ.

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

Share This Article
Facebook Twitter Copy Link Print
Previous Article Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ
Next Article Rapido ಬೈಕ್ ಸವಾರನ ವೇಗದ ಚಾಲನೆ: ಈ ಯುವತಿಗೆ 20 ದಿನಗಳಿಂದ ಆಸ್ಪತ್ರೆಯಲ್ಲಿ ಯಾತನೆ

Popular Posts

Rapido ಬೈಕ್ ಸವಾರನ ವೇಗದ ಚಾಲನೆ: ಈ ಯುವತಿಗೆ 20 ದಿನಗಳಿಂದ ಆಸ್ಪತ್ರೆಯಲ್ಲಿ ಯಾತನೆ

1 Min Read

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

You Might Also Like

ದೇಶಪ್ರಮುಖ

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read
ಕರ್ನಾಟಕದೇಶಪ್ರಮುಖ

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read
ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read
ಕರ್ನಾಟಕದೇಶಪ್ರಮುಖ

Ayodhye ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್‌ ರಾಯ್‌ ರಾಜೀನಾಮೆ ಅಂಗೀಕರಿಸಿದ ಟ್ರಸ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?