newsics.com| ನ್ಯೂಸಿಕ್ಸ್
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಜೆ.ಜೆ. ಕಾಲೋನಿಯಲ್ಲಿ ಅಕ್ಕ-ತಂಗಿಯರ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಏಜಾಜ್ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆ ನಡೆದ ಬಳಿಕ ಪರಾರಿಯಾಗಿದ್ದ ಆತ, ಕೋಲಾರ ನಗರಕ್ಕೆ ತೆರಳಿ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಭಾನುವಾರ ನಡೆದ ಈ ಭೀಕರ ಘಟನೆಯಲ್ಲಿ ರೇಷ್ಮಾ (21) ಮತ್ತು ಶಮಾ (25) ಎಂಬ ಅಕ್ಕ-ತಂಗಿಯರನ್ನು ಹತ್ಯೆ ಮಾಡಿದ್ದಾನೆ.
ಘಟನೆ ನಡೆದ ಬಳಿಕ ಎಜಾಜ್ ತನ್ನ ಮೂವರು ಮಕ್ಕಳನ್ನು ಕರೆದೊಯ್ದ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರೆ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗಾಂಜಾ ಮತ್ತಿನಲ್ಲಿ ಈ ಭೀಕರ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚಿಂತಾಮಣಿ ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗಿದ್ದು, ಇದನ್ನು ತಡೆಯಲು ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Rare mineral discovered ಗುಂಡ್ಲುಪೇಟೆಯಲ್ಲಿ ಅಪರೂಪದ ಖನಿಜ ಪತ್ತೆ! ಏನಿದರ ವಿಶೇಷ?