Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Rare mineral discovered ಗುಂಡ್ಲುಪೇಟೆಯಲ್ಲಿ ಅಪರೂಪದ ಖನಿಜ ಪತ್ತೆ! ಏನಿದರ ವಿಶೇಷ?
ಕರ್ನಾಟಕದೇಶಪ್ರಮುಖ

Rare mineral discovered ಗುಂಡ್ಲುಪೇಟೆಯಲ್ಲಿ ಅಪರೂಪದ ಖನಿಜ ಪತ್ತೆ! ಏನಿದರ ವಿಶೇಷ?

Share
2 Min Read
SHARE

newsics.com | ನ್ಯೂಸಿಕ್ಸ್

ಚಾಮರಾಜನಗರ: ಮೊಬೈಲ್‌, ಕಂಪ್ಯೂಟರ್‌, ವಾಹನದ ಬ್ಯಾಟರಿ ಸೇರಿದಂತೆ ತಂತ್ರಜ್ಞಾನದ ಅಗತ್ಯಗಳಿಗೆ ಬೇಕಿರುವ ಅಪರೂಪದ ಖನಿಜ ಸಂಪತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪತ್ತೆಯಾಗಿದೆ.

ತಾಲೂಕಿನ ಮಲ್ಲಯ್ಯನಪುರ, ವಿಜಯಪುರ, ಕೂತನೂರು, ಮನುಗನಹಳ್ಳಿ ಸುತ್ತಮುತ್ತ ಅಪರೂಪದ ವಿರಳ ಭೂಮಿಯ ಮೂಲ ಧಾತುಗಳು (ರೇರ್‌ ಅರ್ಥ್‌ ಎಲಿಮೆಂಟ್ಸ್‌) ಮತ್ತು ಯಟ್ರಿಯಮ್/ಥೋರಿಯಮ್ ಖನಿಜ ನಿಕ್ಷೇಪ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ (ಜಿಎಸ್‌ಐ) ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಜಿಎಸ್‌ಐ ವರದಿಯಲ್ಲಿ 2.85 ಚದರ ಕಿ.ಮೀಟರ್‌ನ 750 ಎಕರೆಯಲ್ಲಿ ಅತಿ ಅಪರೂಪದ ಖನಿಜ ಸಂಪತ್ತು ಗೋಚರವಾಗಿದ್ದು, 20 ಎಕರೆಯಷ್ಟು ಥೋರಿಯಂ ಇರುವುದು ತಿಳಿದುಬಂದಿದ್ದು, ಕೋರ್‌ ಮಿನರಲ್ ಝೋನ್ ಎಂದು ಘೋಷಣೆಯಾಗುವ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.

ಜಿಎಸ್‌ಐ ನಡೆಸಿದ ಸಾಮಾನ್ಯ ಪರಿಶೋಧನೆ ಜಿ-೨ ಪ್ರಕಾರ ಗುಂಡ್ಲುಪೇಟೆ ಬಳಿ ಆರ್‌ಇಇ ಮತ್ತು ಯಟ್ರಿಯಮ್ ಬ್ಲಾಕ್ ಒಟ್ಟು 314.21 ಹೆಕ್ಟೇರ್ ಪ್ರದೇಶ ಒಳಗೊಂಡಿದೆ. ಈ ಪ್ರದೇಶವನ್ನು ಗಣಿಗಾರಿಕೆ ಗುತ್ತಿಗೆಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

ಎಷ್ಟು ಖನಿಜವಿದೆ?

ಜಿಎಸ್‌ಐ ವರದಿಯ ಪ್ರಕಾರ ಈ ಬ್ಲಾಕ್‌ನಲ್ಲಿ ಎರಡು ಪ್ರಮುಖ ಖನಿಜಗಳಲ್ಲಿ ಆರ್‌ಇಇ ಅದಿರು ಶೇ.0.25 ಕಟ್-ಆಫ್‌ನಲ್ಲಿ 11.48 ಮಿಲಿಯನ್ ಟನ್ ಅದಿರು ಇದೆ. ಇದರಿಂದ ಅಂದಾಜು 55,276 ಟನ್ ಶುದ್ಧ ಆರ್‌ಇಇ ಲೋಹ ಸಿಗಬಹುದಾಗಿದೆ. ಉತ್ತಮ ಗುಣಮಟ್ಟದ ಶೇ. 0.50 ಕಟ್-ಆಫ್‌ನಲ್ಲಿ 6.35 ಮಿಲಿಯನ್ ಟನ್ ಅದಿರಿದೆ.

40,261 ಟನ್ ಲೋಹ ಲಭ್ಯದಲ್ಲಿ ಯಟ್ರಿಯಮ್ 100 ಪಿಪಿಎಂ ಕಟ್-ಆಫ್‌ನಲ್ಲಿ 7.18 ಮಿಲಿಯನ್ ಟನ್ ಅದಿರು ಇದ್ದು,1020 ಟನ್ ಶುದ್ಧ ಯಟ್ರಿಯಮ್ ಲೋಹ ಪಡೆಯುವ ಅಂದಾಜಿದೆ.ಒಟ್ಟು 44 ಬೋರ್‌ವೆಲ್‌ಗಳನ್ನು ಕೊರೆದು 6979.45 ಮೀಟರ್ ಪರಿಶೀಲನೆ ನಡೆಸಲಾಗಿದೆ. ಜೊತೆಗೆ 40 ಕಂದಕಗಳನ್ನು ತೋಡಿ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ.

ಈ ಖನಿಜದ ಪ್ರಾಮುಖ್ಯತೆ ಏನು?
ಮೊಬೈಲ್,ಕಂಪ್ಯೂಟರ್,ಎಲೆಕ್ಟ್ರಿಕ್ ವಾಹನದ ಬ್ಯಾಟರಿ, ಗಾಳಿ ವಿದ್ಯುತ್ ಟರ್ಬೈನ್,ರಕ್ಷಣಾ ಉಪಕರಣಗಳು ಮತ್ತು ಉನ್ನತ ತಂತ್ರಜ್ಞಾನ ಉದ್ಯಮಗಳಿಗೆ ಆರ್‌ಇಇ ಮತ್ತು ಯಟ್ರಿಯಮ್ ಅತ್ಯಗತ್ಯ. ದೇಶದಲ್ಲಿ ಈ ಖನಿಜಗಳ ಆಮದು ಹೆಚ್ಚಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ನಿಕ್ಷೇಪವು ಕಾರ್ಯ ತಂತ್ರಾತ್ಮಕವಾಗಿ ಮಹತ್ವ ಪಡೆದಿದೆ.

ಸಂಪರ್ಕ ಮತ್ತು ಭೂ ಸ್ವರೂಪ
ಈ ಬ್ಲಾಕ್ ಬೆಂಗಳೂರಿನಿಂದ 199 ಕಿಮೀ ನೈಋತ್ಯಕ್ಕೆ, ಮೈಸೂರಿನಿಂದ 61 ಕಿಮೀ ದಕ್ಷಿಣಕ್ಕೆ ಇದೆ. ಎನ್‌ಎಚ್-212 ಮತ್ತು ಎನ್‌ಎಚ್‌-766 ರಾಷ್ಟ್ರೀಯ ಹೆದ್ದಾರಿಗಳು ಹತ್ತಿರದಲ್ಲಿವೆ. ಹತ್ತಿರದ ರೈಲು ನಿಲ್ದಾಣ ಚಾಮರಾಜನಗರ 35 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ 850 ಮೀಟರ್‌ ಎತ್ತರದಲ್ಲಿದೆ.

ಈ ಪ್ರದೇಶವು ಸಮತಟ್ಟಾದ ಮತ್ತು ಲಘುವಾಗಿ ಉಬ್ಬು-ತಗ್ಗುಗಳನ್ನು ಹೊಂದಿದೆ. ವಾರ್ಷಿಕ ಸರಾಸರಿ ಮಳೆ 669 ಮಿಮೀ ಮತ್ತು ಉಷ್ಣತೆ 23.7°C ಇದೆ. ಈ ಪ್ರದೇಶದಲ್ಲಿ 6 ದೊಡ್ಡ ಕಾರ್ಬೊನಾಟೈಟ್ ಬಂಡೆಗಳ ಪಟ್ಟಿಗಳಿದ್ದು, ಅಲ್ಲಿಂದಲೇ ಈ ಖನಿಜಗಳು ದೊರೆತಿವೆ ಎಂದು ಜಿಎಸ್‌ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗುತ್ತಿದೆ.

ಗಣಿಗಾರಿಕೆಗೆ ಅನುಮತಿ ದೊರೆತಲ್ಲಿ ಜಿಲ್ಲೆಗೆ ಉದ್ಯೋಗ ಮತ್ತು ಕಂದಾಯದ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಂತೂ ಇದ್ದೇ ಇದೆ.

ಗುಂಡ್ಲುಪೇಟೆ (ವಿಜಯಪುರ), ಮಲ್ಲಯ್ಯನಪುರ, ಕೂತನೂರು ಬಳಿ ಜಿ-೪ ಸರ್ವೇಯನ್ನು ಭಾರತೀಯ ಭೂ ವೈಜ್ಞಾನಿಕ ಇಲಾಖೆ ನಡೆಸಿದೆ. ಕೆಲ ಮಾದರಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಸಿದೆ. ಜಿಎಸ್‌ಐ ಭಾರತ ಸರ್ಕಾರಕ್ಕೆ ವರದಿ ನೀಡಿದೆ ಎಂದು ಹಿರಿಯ ಭೂ ವಿಜ್ಞಾನಿ ರಾಜೇಶ್ ಮಾಹಿತಿ ನೀಡಿದ್ದಾರೆ.

 

Ayodhye ರಾಮ ಮಂದಿರದಲ್ಲಿ ಈವರೆಗೆ ಸುಮಾರು 2 ರಿಂದ 3 ಕೋಟಿ ರೂ. ಕಳ್ಳತನ : ಕೊನೆಗೂ ಸತ್ಯ ಬಾಯಿಬಿಟ್ಟ ಕಳ್ಳರು

TAGGED:Rare mineral discovered in Gundlupet! What's so special about it?
Share This Article
Facebook Twitter Copy Link Print
Previous Article Ayodhye ರಾಮ ಮಂದಿರದಲ್ಲಿ ಈವರೆಗೆ ಸುಮಾರು 2 ರಿಂದ 3 ಕೋಟಿ ರೂ. ಕಳ್ಳತನ : ಕೊನೆಗೂ ಸತ್ಯ ಬಾಯಿಬಿಟ್ಟ ಕಳ್ಳರು
Next Article Girl murder ನಾಪತ್ತೆಯಾಗಿದ್ದ 12 ವರ್ಷದ ಬಾಲಕಿ ಶವ ಪತ್ತೆ; ಶಂಕಿತ ಆರೋಪಿಯನ್ನು ಹೊಡೆದು ಕೊಂದ ಸ್ಥಳೀಯರು

Popular Posts

Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…

1 Min Read

Rapido ಬೈಕ್ ಸವಾರನ ವೇಗದ ಚಾಲನೆ: ಈ ಯುವತಿಗೆ 20 ದಿನಗಳಿಂದ ಆಸ್ಪತ್ರೆಯಲ್ಲಿ ಯಾತನೆ

1 Min Read

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

You Might Also Like

ಕರ್ನಾಟಕದೇಶಪ್ರಮುಖ

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read
ದೇಶಪ್ರಮುಖ

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read
ಕರ್ನಾಟಕದೇಶಪ್ರಮುಖ

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read
ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?