newsics.com| ನ್ಯೂಸಿಕ್ಸ್
ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ ದರಗಳು ಗಣನೀಯವಾಗಿ ಇಳಿಕೆಯಾಗಿರುವ ಹಿನ್ನೆಲೆ, ಅಂತರರಾಷ್ಟ್ರೀಯ ವಿಮಾನ ಟಿಕೆಟ್ ಗಳ ಮೇಲಿನ ಇಂಧನ ಚಾರ್ಜ್ ಅನ್ನು ಸಂಸ್ಥೆಯು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ಭೀತಿ ತಿಳಿಯಾಗುತ್ತಿದ್ದಂತೆ ಕಚ್ಚಾ ತೈಲ ಬೆಲೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಇದು ಇಂಧನ ಸಚಾರ್ಜ್ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.
ಏರ್ ಇಂಡಿಯಾದ ಈ ಮಹತ್ವದ ನಿರ್ಧಾರದಿಂದಾಗಿ ಭಾರತದಿಂದ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ) ನಂತಹ ದೇಶಗಳಿಗೆ ಹೋಗಿ ಬರುವ ವಿಮಾನ ಟಿಕೆಟ್ ದರಗಳು ಇನ್ಮುಂದೆ ಗಣನೀಯವಾಗಿ ಅಗ್ಗವಾಗಲಿವೆ.
ಪರಿಷ್ಕೃತ ದರಗಳ ಪ್ರಕಾರ, ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾರ್ಗದಲ್ಲಿ ಈ ಹಿಂದೆ ಇದ್ದ 280 ಡಾಲರ್ ಇಂಧನ ಸಚಾರ್ಜ್ ಅನ್ನು ಈಗ 200 ಡಾಲರ್‌ಗೆ ಇಳಿಸಲಾಗಿದೆ. ಅದೇ ರೀತಿ, ಯುರೋಪ್ ಮತ್ತು ಯುಕೆ ಮಾರ್ಗದಲ್ಲಿ ಇದ್ದ 205 ಡಾಲರ್ ಸಚಾರ್ಜ್ ಅನ್ನು ಈಗ 125 ಡಾಲರ್‌ಗೆ ಕಡಿತಗೊಳಿಸಲಾಗಿದೆ. ಈ ನೂತನ ದರ ಕಡಿತವು ಈಗಾಗಲೇ ಜುಲೈ 1 ರಿಂದಲೇ ಜಾರಿಗೆ ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Rain ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸಂಪೂರ್ಣ ಸ್ಥಗಿತ