Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crime Case ಮೂರು ಹಸುಗಳ ಮೇಲೆ ಕತ್ತಿ ಇರಿತದ ವದಂತಿ, ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ
ಪ್ರಮುಖCrimeಕರ್ನಾಟಕ

Crime Case ಮೂರು ಹಸುಗಳ ಮೇಲೆ ಕತ್ತಿ ಇರಿತದ ವದಂತಿ, ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ

Share
1 Min Read
SHARE

newsics.com | ನ್ಯೂಸಿಕ್ಸ್

ಚಿಕ್ಕಮಗಳೂರು: ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಮಾಲೀಕರಿಲ್ಲದ ಬೀಡಾಡಿ ದನಗಳ ದೇಹದ ವಿವಿಧ ಭಾಗಗಳಲ್ಲಿ ಆಳವಾದ ಗಾಯಗಳಾಗಿ ಭೀಕರ ರಕ್ತಸ್ರಾವವಾಗುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ತಂಡವೊಂದು ಕತ್ತಿಯಿಂದ ಹಸುಗಳ ಮೇಲೆ ದೌರ್ಜನ್ಯ ಎಸಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಚಂದುವಳ್ಳಿಯ ಪರಿಸರದಲ್ಲಿ ನೂರಕ್ಕೂ ಹೆಚ್ಚು ಅನಾಥ ಹಸುಗಳು ಅಲೆಯುತ್ತಿದ್ದು, ಅವುಗಳಲ್ಲಿ ಮೂರು ಹಸುಗಳ ಕಾಲು ಹಾಗೂ ತೊಡೆಯ ಭಾಗಗಳು ಸೀಳಿದಂತೆ ಗಾಯಗೊಂಡಿವೆ.

ಇವು ಮಾಲೀಕರಿಲ್ಲದ ದನಗಳಾಗಿರುವುದರಿಂದ, ಕಳ್ಳತನ ಮಾಡಲು ಸುಲಭವಾಗಲಿ ಎಂಬ ಕಾರಣಕ್ಕೆ ದನಗಳ್ಳರೇ ಹಸುಗಳ ಹಿಂಗಾಲು ಹಾಗೂ ಬಾಲವನ್ನು ಕತ್ತರಿಸಿ ಅಂಗವಿಕಲಗೊಳಿಸಲು ಯತ್ನಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಘೋರ ಕೃತ್ಯ ಎಸಗಿದವರನ್ನು ಕೂಡಲೇ ಜೈಲಿಗಟ್ಟಬೇಕೆಂದು ಮೂಡಿಗೆರೆ ವೃತ್ತ ನಿರೀಕ್ಷಕರಿಗೆ (ಸಿಐ) ದೂರು ನೀಡಿದ್ದಾರೆ.

ಸ್ಥಳಕ್ಕೆ ಪಶುವೈದ್ಯಕೀಯ ಆ್ಯಂಬುಲೆನ್ಸ್‌ನೊಂದಿಗೆ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ದಾರಾದರೂ, ಗಾಯಾಳು ಹಸುಗಳು ಭಯದಿಂದ ಕಾಫಿ ತೋಟಗಳತ್ತ ಓಡುತ್ತಿರುವುದರಿಂದ ಅವುಗಳನ್ನು ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡುವುದು ಪಶುಪಾಲನಾ ಇಲಾಖೆಗೆ ಕಷ್ಟಸಾಧ್ಯವಾಗಿದೆ.

ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯಾಮ ಅವರು ಘಟನೆಯ ಅಸಲಿಯತ್ತನ್ನು ಬಿಚ್ಚಿಟ್ಟಿದ್ದಾರೆ. “ವರದಿಗಳ ಪ್ರಕಾರ ಈ ಘಟನೆ ನಡೆದು ವಾರ ಕಳೆದಿದೆ. ಕಾಫಿ ತೋಟಗಳ ಮಧ್ಯೆ ತಿರುಗಾಡುವ ಈ ಹಸುಗಳು, ಮಳೆಯಿಂದ ಬಚಾವಾಗಲು ಒಣ ಜಾಗದ ಕಡೆಗೆ ಧಾವಿಸಿವೆ” ಎಂದು ತಿಳಿಸಿದ್ದಾರೆ.

ಈ ವೇಳೆ ತೋಟಗಳ ರಕ್ಷಣೆಗಾಗಿ ಹಾಕಲಾಗಿರುವ ಚೂಪಾದ ತಂತಿ ಬೇಲಿಗಳನ್ನು ದಾಟುವಾಗ ಅಥವಾ ದನಗಳು ಪರಸ್ಪರ ಜಗಳ ಆಡುವಾಗ ಈ ತರಹದ ಗಾಯಗಳಾಗಿವೆ. ಸ್ಥಳ ಪರಿಶೀಲನೆ ನಡೆಸಿದಾಗ ಮನುಷ್ಯರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಯಾವುದೇ ಕುರುಹುಗಳು ಲಭ್ಯವಾಗಿಲ್ಲ ಎಂದು ಹೇಳುವ ಮೂಲಕ ಎಸ್ಪಿ ಅವರು ಸಾರ್ವಜನಿಕರ ಹಲ್ಲೆಯ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Road Mishap ಸಚಿವ ಯು.ಟಿ ಖಾದರ್ ಎಸ್ಕಾರ್ಟ್ ವಾಹನಕ್ಕೆ ಸ್ಕೂಟರ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ

TAGGED:#stray cattle #police #case #Chikkamagaluru #injured
Share This Article
Facebook Twitter Copy Link Print
Previous Article Road Mishap ಸಚಿವ ಯು.ಟಿ ಖಾದರ್ ಎಸ್ಕಾರ್ಟ್ ವಾಹನಕ್ಕೆ ಸ್ಕೂಟರ್ ಡಿಕ್ಕಿ; ಸವಾರನಿಗೆ ಗಂಭೀರ ಗಾಯ
Next Article Earthquake ವೆನೆಜುವೆಲಾ ಅವಳಿ ಭೂಕಂಪಕ್ಕೆ 2,954 ಬ*ಲಿ: ಸಂತ್ರಸ್ತರ ರಕ್ಷಣೆಗೆ ಧಾವಿಸಿದ ಭಾರತ

Popular Posts

Ramacharitamanasa ರಾಮಮಂದಿರದಲ್ಲಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ ರಾಮಚರಿತಮಾನಸ ಗ್ರಂಥ ಸುರಕ್ಷಿತವಾಗಿದ್ಯಾ? ದಾನಿಯ ಆತಂಕ

1 Min Read

Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?

2 Min Read

Student robs woman ಆನ್‌ಲೈನ್ ಗೇಮ್ ಗೀಳು: ಮಹಿಳೆಯನ್ನು ಲೂಟಿ ಮಾಡಿ ಬಾವಿಗೆ ತಳ್ಳಿದ ವಿದ್ಯಾರ್ಥಿ, 21 ಗಂಟೆ ಬಾವಿಯಲ್ಲಿದ್ದು ಬದುಕುಳಿದ ಮಹಿಳೆ!

2 Min Read

Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?

1 Min Read

You Might Also Like

ಕರ್ನಾಟಕಪ್ರಮುಖ

Crime news ಹಣ, ಮೊಬೈಲ್‌ಗಾಗಿ ಪೀಡಿಸಿದ ಗೆಳೆಯನನ್ನೇ ಹತ್ಯೆಗೈದ ಯುವಕ!

1 Min Read
ದೇಶಪ್ರಮುಖ

Ketan grandfather dies ಕೇತನ್ ಸಾವಿನ ಚಿಂತೆ, ಹೃದಯಾಘಾತದಿಂದ ತಾತ ದೇವಿಚಂದ್ ಸಾವು!

2 Min Read
ಕರ್ನಾಟಕದೇಶಪ್ರಮುಖ

Gold cash plan ಮನೇಲಿರೋ ಚಿನ್ನದಿಂದಲೂ ಸಿಗಲಿದೆ‌ ಆದಾಯ! ಏನಿದು‌ ಕೇಂದ್ರ ಸರ್ಕಾರದ ಹೊಸ ಯೋಜನೆ? ಈ‌ ಸುದ್ದಿ ಓದಿ

3 Min Read
ಕರ್ನಾಟಕಪ್ರಮುಖ

Leopard attack ಮನೆಯೆದುರು ಕುಳಿತಿದ್ದ ಅಜ್ಜಿ, ಮೊಮ್ಮಗಳ‌ ಮೇಲೆ ಚಿರತೆ ಭೀಕರ ದಾಳಿ: ಬದುಕಿದ್ದೇ ಪವಾಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?