Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Udupi 70 ಲಕ್ಷ ರೂ. ಪಡೆದು ಉದ್ಯಮಿಗೆ ವಂಚನೆ : ಮುಸ್ಲಿಂ ಮಹಿಳೆಯ ಬಂಧನ
ಕರ್ನಾಟಕದೇಶಪ್ರಮುಖ

Udupi 70 ಲಕ್ಷ ರೂ. ಪಡೆದು ಉದ್ಯಮಿಗೆ ವಂಚನೆ : ಮುಸ್ಲಿಂ ಮಹಿಳೆಯ ಬಂಧನ

Share
1 Min Read
SHARE

newsics.com| ನ್ಯೂಸಿಕ್ಸ್

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನೆಪದಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ 70 ಲಕ್ಷ ರೂ. ಪಡೆದು ವಂಚಿಸಿದ ಮತ್ತು ಹಣ ವಾಪಸ್‌ ಕೇಳಿದ್ರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮುಸ್ಲಿಂ ಮಹಿಳೆಯೊಬ್ಬರನ್ನು ಉಡುಪಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯ ನಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಝೀನತ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಉಡುಪಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಈ ಮಹಿಳೆ, ಜಂಟಿಯಾಗಿ ಕಚೇರಿ ಆರಂಭಿಸಿದ್ದಳು. ಅಲ್ಲದೇ ಜಮೀನು ಖರೀದಿ ಹೆಸರಿನಲ್ಲಿ 70 ಲಕ್ಷ ರೂ. ಪಡೆದಿದ್ದಳು. ಬಳಿಕ ಆ ಹಣವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ಉದ್ಯಮಿ ನಷ್ಟದ ಕಾರಣ, ಪಾಲುದಾರಿಕೆ ವ್ಯವಹಾರ ಮುಕ್ತಾಯಗೊಳಿಸಿ ಕಚೇರಿ ಮುಚ್ಚುವ ಸಂದರ್ಭದಲ್ಲಿ ಕೆಲವು ರಹಸ್ಯ ಕಡತಗಳು ಮತ್ತು ಪೆನ್ ಡ್ರೈವ್ ಪತ್ತೆಯಾಗಿದ್ದು, ಅದನ್ನು ಪರಿಶೀಲಿಸಿದಾಗ ರಾಜ್ಯದ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು ಇರುವುದು ಕಂಡುಬಂದು ಉದ್ಯಮಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ತಾನು ಕೊಟ್ಟಿದ್ದ 70 ಲಕ್ಷ ಹಣವನ್ನು ವಾಪಸ್ ಕೇಳಿದಾಗ, ಝೀನತ್ ಅಸಲಿ ಮುಖ ತೋರಿಸಿದ್ದಾಳೆ.

ಉದ್ಯಮಿಯ ಹೊಸ ಕಚೇರಿಗೆ ನುಗ್ಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಷ್ಟೇ ಅಲ್ಲದೆ, ಉದ್ಯಮಿಯ ಅಶ್ಲೀಲ ವಿಡಿಯೋಗಳು ತನ್ನ ಬಳಿ ಇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಇಷ್ಟಕ್ಕೆ ನಿಲ್ಲದ ಈಕೆ ಉದ್ಯಮಿಯ ಪತ್ನಿ ಮತ್ತು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಪೊಲೀಸರು, ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಸಿದ 14 ವರ್ಷದ ಹುಡುಗ

Share This Article
Facebook Twitter Copy Link Print
Previous Article Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!

Popular Posts

Udupi 70 ಲಕ್ಷ ರೂ. ಪಡೆದು ಉದ್ಯಮಿಗೆ ವಂಚನೆ : ಮುಸ್ಲಿಂ ಮಹಿಳೆಯ ಬಂಧನ

1 Min Read

Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!

2 Min Read

E20 ಪೆಟ್ರೋಲ್ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುತ್ತಾ? ಸರ್ಕಾರ ಹೇಳಿದ್ದೇನು

2 Min Read

Actress Rambha ನಡೆದಾಡಲೂ ಕಷ್ಟಪಡ್ತಿರೋ ರವಿಚಂದ್ರನ್ ಸಿನಿಮಾ ನಾಯಕಿ! ಏನಾಯ್ತು ರಂಭಾಗೆ? ವಿಡಿಯೋ ನೋಡಿ

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

Vaibhav ಮ್ಯಾಂಚೆಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!

3 Min Read
ಕರ್ನಾಟಕಪ್ರಮುಖ

Chikkamagaluru ಪ್ರೀತಿ ನಿರಾಕರಿಸಿದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಯುವಕ ಪೊಲೀಸ್ ವಶಕ್ಕೆ

2 Min Read
ಕರ್ನಾಟಕಪ್ರಮುಖ

Mass loss of life ಜ್ಯುವೆಲರಿ ಮಳಿಗೆ ಮಾಲೀಕನಿಗೆ ಆರ್ಥಿಕ ಸಂಕಷ್ಟ: ಮೂವರ ಸಾಮೂಹಿಕ ಆತ್ಮ*ಹ*ತ್ಯೆ

2 Min Read
Crimeದೇಶಪ್ರಮುಖ

SHOCKING| ಪತಿಯನ್ನು ಕೊಂದು ಮನೆಯೊಳಗಿನ ಬಾತ್‌ರೂಂ ನೆಲದಡಿ ಹೂತ ಪತ್ನಿ – 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?