Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Actress Rambha ನಡೆದಾಡಲೂ ಕಷ್ಟಪಡ್ತಿರೋ ರವಿಚಂದ್ರನ್ ಸಿನಿಮಾ ನಾಯಕಿ! ಏನಾಯ್ತು ರಂಭಾಗೆ? ವಿಡಿಯೋ ನೋಡಿ
ಕರ್ನಾಟಕದೇಶಪ್ರಮುಖಮನರಂಜನೆ

Actress Rambha ನಡೆದಾಡಲೂ ಕಷ್ಟಪಡ್ತಿರೋ ರವಿಚಂದ್ರನ್ ಸಿನಿಮಾ ನಾಯಕಿ! ಏನಾಯ್ತು ರಂಭಾಗೆ? ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಂಭಾ (Rambha) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಿಂದ ಅವರು ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

ವಿಡಿಯೋದಲ್ಲಿ ನಟಿ ರಂಭಾ ನಡೆದಾಡಲು ಪರದಾಡುತ್ತಿರುವಂತೆ ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ ನಟಿ ರಂಭಾ ನಿಧಾನವಾಗಿ ನಡೆಯುತ್ತಿರುವುದು ಹಾಗೂ ಹೆಜ್ಜೆ ಇಡುವುದಕ್ಕೂ ಕಷ್ಟಪಡುತ್ತಿರುವಂತೆ ಕಾಣಿಸುತ್ತಿದೆ. ಈ ದೃಶ್ಯವನ್ನು ಕಂಡ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದು, ಹಲವು ಮಂದಿ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಅದರ ಹಿಂದಿನ ಕಾರಣವೇನು ಎಂಬ ಬಗ್ಗೆ ವಿವಿಧ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ

ಮಾಹಿತಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಸಂಭವಿಸಿದ್ದ ಕಾರು ಅಪಘಾತದ ಪರಿಣಾಮವಾಗಿ ನಟಿ ರಂಭಾ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣದಿಂದ ಅವರು ನಡೆದಾಡಲು ತೊಂದರೆ ಅನುಭವಿಸುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ನಟಿ ರಂಭಾ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.

1990ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ರಂಭಾ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. ತಮ್ಮ ಅದ್ಭುತ ಸೌಂದರ್ಯ, ನಟನೆ ಹಾಗೂ ಮನಮೋಹಕ ನೃತ್ಯದ ಮೂಲಕ ಅವರು ಕೋಟ್ಯಂತರ ಸಿನಿಪ್ರಿಯರ ಮನ ಗೆದ್ದಿದ್ದರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದರು. ಆ ಕಾಲದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಅವರು ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು.

ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ 2010ರಲ್ಲಿ ಉದ್ಯಮಿ ಇಂದ್ರಕುಮಾರ್ ಅವರನ್ನು ರಂಭಾ ವಿವಾಹವಾದರು. ವಿವಾಹದ ಬಳಿಕ ಅವರು ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಪ್ರಸ್ತುತ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ರಂಭಾ ಅಪರೂಪಕ್ಕೆ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ರಂಭಾ ಕನ್ನಡ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರ್ವರ್ ಸೋಮಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ ಹಲವು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿದರು. ಓ ಪ್ರೇಮವೇ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ಅವರು ಭಾವ ಭಾಮೈದ, ಸಾಹುಕಾರ, ಪಾಂಡುರಂಗ ವಿಠ್ಠಲ ಹಾಗೂ ಗಂಡುಗಲಿ ಕುಮಾರರಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿಪ್ರಿಯರ ಮೆಚ್ಚುಗೆ ಗಳಿಸಿದರು.

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ

ರಂಭಾ ತಮ್ಮ ಸಿನಿ ಬದುಕಿನಲ್ಲಿ ಎಂಟುಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1993ರಿಂದಲೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಅವರು ನಂತರ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲೂ ಯಶಸ್ಸು ಗಳಿಸಿದರು. ಜೊತೆಗೆ ಕೆಲ ಬೆಂಗಾಲಿ ಹಾಗೂ ಭೋಜ್‌ಪುರಿ ಸಿನಿಮಾಗಳಲ್ಲಿಯೂ ಅಭಿನಯಿಸಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

டீக்கடையார் பார்த்தா மனச விட்ருவார் pic.twitter.com/6OhQtiZuZX

— விமலிசம் (@withkaran) July 1, 2026

Tragedy: ಬ್ರೈನ್ ಟ್ಯೂಮರ್‌ಗೆ ಬಲಿಯಾದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಪದ್ದು ಗೌಡ!

Telegram| ಚಲನಚಿತ್ರ, ಒಟಿಟಿ ಪೈರಸಿ : ಟೆಲಿಗ್ರಾಂ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ನೋಟಿಸ್! 15ದಿನದೊಳಗೆ ಆ್ಯಕ್ಷನ್ ಟೇಕನ್ ರಿಪೋರ್ಟ್ ಸಲ್ಲಿಸುವಂತೆ ಗಡುವು

TAGGED:#actress #rambha #ravichandran #entertainment #struggle #walking #health #news #newsics
Share This Article
Facebook Twitter Copy Link Print
Previous Article Vaibhav ಮ್ಯಾಂಚೆಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!
Next Article E20 ಪೆಟ್ರೋಲ್ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುತ್ತಾ? ಸರ್ಕಾರ ಹೇಳಿದ್ದೇನು

Popular Posts

Udupi 70 ಲಕ್ಷ ರೂ. ಪಡೆದು ಉದ್ಯಮಿಗೆ ವಂಚನೆ : ಮುಸ್ಲಿಂ ಮಹಿಳೆಯ ಬಂಧನ

1 Min Read

Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!

2 Min Read

E20 ಪೆಟ್ರೋಲ್ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುತ್ತಾ? ಸರ್ಕಾರ ಹೇಳಿದ್ದೇನು

2 Min Read

Actress Rambha ನಡೆದಾಡಲೂ ಕಷ್ಟಪಡ್ತಿರೋ ರವಿಚಂದ್ರನ್ ಸಿನಿಮಾ ನಾಯಕಿ! ಏನಾಯ್ತು ರಂಭಾಗೆ? ವಿಡಿಯೋ ನೋಡಿ

2 Min Read

You Might Also Like

ದೇಶಪ್ರಮುಖಮನರಂಜನೆವಿದೇಶ

Vaibhav ಮ್ಯಾಂಚೆಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!

3 Min Read
ಕರ್ನಾಟಕಪ್ರಮುಖ

Chikkamagaluru ಪ್ರೀತಿ ನಿರಾಕರಿಸಿದ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಯುವಕ ಪೊಲೀಸ್ ವಶಕ್ಕೆ

2 Min Read
ಕರ್ನಾಟಕಪ್ರಮುಖ

Mass loss of life ಜ್ಯುವೆಲರಿ ಮಳಿಗೆ ಮಾಲೀಕನಿಗೆ ಆರ್ಥಿಕ ಸಂಕಷ್ಟ: ಮೂವರ ಸಾಮೂಹಿಕ ಆತ್ಮ*ಹ*ತ್ಯೆ

2 Min Read
Crimeದೇಶಪ್ರಮುಖ

SHOCKING| ಪತಿಯನ್ನು ಕೊಂದು ಮನೆಯೊಳಗಿನ ಬಾತ್‌ರೂಂ ನೆಲದಡಿ ಹೂತ ಪತ್ನಿ – 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?