newsics.com | ನ್ಯೂಸಿಕ್ಸ್
ಬೆಂಗಳೂರು: ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರನ್ನು ರಂಜಿಸಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಸೀಸನ್ 2ರ ಜನಪ್ರಿಯ ಸ್ಪರ್ಧಿ ಪದ್ದು ಗೌಡ ಎಂದೇ ಪರಿಚಿತರಾಗಿದ್ದ ಪದ್ಮನಾಭ್ (44) ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಮಿದುಳಿನ ಗೆಡ್ಡೆ (Brain Tumor) ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನಗರದ ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಬಹುಮುಖ ಪ್ರತಿಭೆಯ ಕಿರುತೆರೆ ಪಯಣ
ರಿಯಾಲಿಟಿ ಶೋ ಮಾತ್ರವಲ್ಲದೆ ಗ್ಲಾಮರ್ ಪ್ರಪಂಚದಲ್ಲೂ ಪದ್ದು ಗೌಡ ಸಕ್ರಿಯರಾಗಿದ್ದರು. ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಇದರೊಂದಿಗೆ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕರಾಗಿಯೂ ಜವಾಬ್ದಾರಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಇತ್ತೀಚೆಗಷ್ಟೇ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.
ಕೇವಲ 44 ವರ್ಷ ವಯಸ್ಸಿಗೆ ಪದ್ದು ಗೌಡ ಅವರು ಇಹಲೋಕ ತ್ಯಜಿಸಿರುವುದು ಇಡೀ ಕಿರುತೆರೆಗೆ ಹಾಗೂ ಅವರ ಆಪ್ತ ವಲಯಕ್ಕೆ ತೀವ್ರ ಆಘಾತ ತಂದಿದೆ. ಮೃತರು ಪತ್ನಿ ಅಶ್ವಿನಿ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಅಭಿಮಾನಿಗಳು ಹಾಗೂ ಕಿರುತೆರೆಯ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.
Crime Case: ಪಾರ್ಟಿ ನೆಪದಲ್ಲಿ ಪೈಶಾಚಿಕ ಕೃತ್ಯ: ಯುವತಿ ಮೇಲೆ ಅತ್ಯಾಚಾ*ರ; ಸ್ನೇಹಿತ ಸೇರಿ ಐವರು ಕಾಮುಕರು ಅರೆಸ್ಟ್!