Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Badrinath Temple: ಬದರಿನಾಥ ಕ್ಷೇತ್ರದಲ್ಲಿ ಭಕ್ತರ ಹಣ ಲೂಟಿ?: ಉನ್ನತ ಮಟ್ಟದ ತನಿಖೆಗೆ ಮಂಡಳಿ ನಿರ್ಧಾರ!
ಪ್ರಮುಖದೇಶ

Badrinath Temple: ಬದರಿನಾಥ ಕ್ಷೇತ್ರದಲ್ಲಿ ಭಕ್ತರ ಹಣ ಲೂಟಿ?: ಉನ್ನತ ಮಟ್ಟದ ತನಿಖೆಗೆ ಮಂಡಳಿ ನಿರ್ಧಾರ!

Share
2 Min Read
SHARE

newsics.com | ನ್ಯೂಸಿಕ್ಸ್

Contents
ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್; ಉದ್ಯೋಗಿಗೆ ನೋಟಿಸ್ ಜಾರಿತಪ್ಪು ಸಾಬೀತಾದರೆ ಜೈಲು ಫಿಕ್ಸ್

ಡೆಹ್ರಾಡೂನ್: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ದೇಣಿಗೆ ವಿವಾದದ ಬೆನ್ನಲ್ಲೇ, ಇದೀಗ ಉತ್ತರ ಭಾರತದ ಬದರಿನಾಥ ಧಾಮದಲ್ಲೂ ಕಾಣಿಕೆ ಹಗರಣದ ಕರಿನೆರಳು ಬಿದ್ದಿದೆ. ದೇವಸ್ಥಾನದ ಆವರಣದಲ್ಲಿ ಭಕ್ತರು ಸಮರ್ಪಿಸಿದ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಈ ಕುರಿತು ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಮುಖ್ಯಸ್ಥರಾದ ಹೇಮಂತ್ ದ್ವಿವೇದಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕರ ಆಕ್ರೋಶ ಮತ್ತು ಭ್ರಷ್ಟಾಚಾರದ ದೂರುಗಳನ್ನು ಮಂಡಳಿ ಹಗುರವಾಗಿ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.

ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್; ಉದ್ಯೋಗಿಗೆ ನೋಟಿಸ್ ಜಾರಿ

ಕಾಣಿಕೆ ಹಣದ ಕೈಚಳಕದಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿ ದೇವಸ್ಥಾನ ಸಮಿತಿಯ ಅಧ್ಯಕ್ಷರ ವೈಯಕ್ತಿಕ ಕಾರ್ಯದರ್ಶಿ (ಪಿಎ) ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದನ್ನು ಬಲವಾಗಿ ನಿರಾಕರಿಸಿರುವ ಹೇಮಂತ್ ದ್ವಿವೇದಿ, “ಆರೋಪ ಎದುರಿಸುತ್ತಿರುವ ನೌಕರ ನನ್ನ ವೈಯಕ್ತಿಕ ಸಹಾಯಕನಲ್ಲ, ಆತ ದೇವಸ್ಥಾನದ ಆಡಳಿತ ವಿಭಾಗದ ಸಾಮಾನ್ಯ ನೌಕರ,” ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸದರಿ ನೌಕರನಿಗೆ ಇಲಾಖಾ ನೋಟಿಸ್ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಲಿಖಿತ ವಿವರಣೆ ನೀಡಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

ತಪ್ಪು ಸಾಬೀತಾದರೆ ಜೈಲು ಫಿಕ್ಸ್

ಇಡೀ ಹಗರಣದ ಕುರಿತು ತನಿಖೆಯ ಮುಂದಾಳತ್ವ ವಹಿಸಿರುವ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗದ್ ಮಾತನಾಡಿ, “ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವ ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಗರ್ಭಗುಡಿ ಹಾಗೂ ಕೌಂಟರ್‌ಗಳ ಸುತ್ತಮುತ್ತಲಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ಇಂಚಿಂಚು ದೃಶ್ಯಾವಳಿಗಳನ್ನು ತಾಂತ್ರಿಕ ತಂಡದ ನೆರವಿನಿಂದ ಪರಿಶೀಲಿಸಲಾಗುತ್ತಿದೆ,” ಎಂದಿದ್ದಾರೆ. ಸಾಕ್ಷ್ಯಗಳು ಲಭ್ಯವಾದ ತಕ್ಷಣವೇ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.

ದೇವಸ್ಥಾನದ ಆಂತರಿಕ ನಿಯಮಾವಳಿಗಳ ಪ್ರಕಾರ, ಆರ್ಥಿಕ ವಂಚನೆ ಎಸಗಿರುವ ಸಿಬ್ಬಂದಿಯ ವಿರುದ್ಧ ಇಲಾಖಾ ತನಿಖೆಯ ಜೊತೆಗೆ ‘ಶ್ರೀ ಬದರಿನಾಥ-ಕೇದರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939ರ ಅಡಿಯಲ್ಲಿ ಕಠಿಣ ಸೆಕ್ಷನ್‌ಗಳನ್ನು ಜಡಿಯಲು ತೀರ್ಮಾನಿಸಲಾಗಿದೆ. ಪ್ರಕರಣದ ಅಂತಿಮ ವರದಿ ಹೊರಬೀಳುವವರೆಗೂ ಭಕ್ತಾದಿಗಳು ಯಾವುದೇ ರೀತಿಯ ಆಧಾರರಹಿತ ಸುಳ್ಳು ಸುದ್ದಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಬಾರದು ಎಂದು ಆಡಳಿತ ಮಂಡಳಿ ವಿನಂತಿಸಿದೆ.

Rain Alert: ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಅಬ್ಬರ; ಮೂರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ!

TAGGED:#badrinath #temple #donation #bktc #uttar pradesh
Share This Article
Facebook Twitter Copy Link Print
Previous Article Rain Alert: ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಅಬ್ಬರ; ಮೂರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ!
Next Article Aadhaar Update: ಪೋಷಕರ ಗಮನಕ್ಕೆ: ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ; ಸೆಪ್ಟೆಂಬರ್ 30 ರವರೆಗೆ ಉಚಿತ ಸೇವೆ!

Popular Posts

Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?

2 Min Read

Student robs woman ಆನ್‌ಲೈನ್ ಗೇಮ್ ಗೀಳು: ಮಹಿಳೆಯನ್ನು ಲೂಟಿ ಮಾಡಿ ಬಾವಿಗೆ ತಳ್ಳಿದ ವಿದ್ಯಾರ್ಥಿ, 21 ಗಂಟೆ ಬಾವಿಯಲ್ಲಿದ್ದು ಬದುಕುಳಿದ ಮಹಿಳೆ!

2 Min Read

Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?

1 Min Read

Crime news ಹಣ, ಮೊಬೈಲ್‌ಗಾಗಿ ಪೀಡಿಸಿದ ಗೆಳೆಯನನ್ನೇ ಹತ್ಯೆಗೈದ ಯುವಕ!

1 Min Read

You Might Also Like

ದೇಶಪ್ರಮುಖ

Ketan grandfather dies ಕೇತನ್ ಸಾವಿನ ಚಿಂತೆ, ಹೃದಯಾಘಾತದಿಂದ ತಾತ ದೇವಿಚಂದ್ ಸಾವು!

2 Min Read
ಕರ್ನಾಟಕದೇಶಪ್ರಮುಖ

Gold cash plan ಮನೇಲಿರೋ ಚಿನ್ನದಿಂದಲೂ ಸಿಗಲಿದೆ‌ ಆದಾಯ! ಏನಿದು‌ ಕೇಂದ್ರ ಸರ್ಕಾರದ ಹೊಸ ಯೋಜನೆ? ಈ‌ ಸುದ್ದಿ ಓದಿ

3 Min Read
ಕರ್ನಾಟಕಪ್ರಮುಖ

Leopard attack ಮನೆಯೆದುರು ಕುಳಿತಿದ್ದ ಅಜ್ಜಿ, ಮೊಮ್ಮಗಳ‌ ಮೇಲೆ ಚಿರತೆ ಭೀಕರ ದಾಳಿ: ಬದುಕಿದ್ದೇ ಪವಾಡ

1 Min Read
ಪ್ರಮುಖದೇಶ

Bollywood ಬೆಂಗಳೂರು ಬೆಡಗಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ‘ಮಿಸ್ಟರ್ ಪರ್ಫೆಕ್ಟ್’ ಅಮೀರ್ ಖಾನ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?