Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > Realityshow| ಈ ಬಾರಿಯಾದರೂ ಬಿಗ್‌ ಬಾಸ್‌ ಮನೆಗೆ ಕಾಲಿಡುತ್ತಾರ ಮೇಘಾ ಶೆಟ್ಟಿ??ಇಲ್ಲಿದೆ ನೋಡಿ ಉತ್ತರ
filmಕರ್ನಾಟಕಪ್ರಮುಖಮನರಂಜನೆ

Realityshow| ಈ ಬಾರಿಯಾದರೂ ಬಿಗ್‌ ಬಾಸ್‌ ಮನೆಗೆ ಕಾಲಿಡುತ್ತಾರ ಮೇಘಾ ಶೆಟ್ಟಿ??ಇಲ್ಲಿದೆ ನೋಡಿ ಉತ್ತರ

Share
2 Min Read
SHARE

newsics.com| ನ್ಯೂಸಿಕ್ಸ್

‘ಜೊತೆ ಜೊತೆಯಲಿ’ ಧಾರಾವಾಹಿಯ ಖ್ಯಾತ ನಟಿ ಮೇಘಾ ಶೆಟ್ಟಿ ‘ಬಿಗ್ ಬಾಸ್’ ರಿಯಾಲಿಟಿ ಶೋಗೆ ಹೋಗಲಿದ್ದಾರೆಂಬ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ, ಬಿಡುವಿಲ್ಲದ ಚಿತ್ರೀಕರಣ ಹಾಗೂ ಸಿನಿಮಾ ಡೇಟ್ಸ್ ಸಮಸ್ಯೆಯಿಂದಾಗಿ ಶೋ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ‘ಅನು ಸಿರಿಮನೆ’ ಪಾತ್ರದ ಮೂಲಕ ನಾಡಿನ ಮನೆಮಾತಾಗಿದ್ದ ನಟಿ ಮೇಘಾ ಶೆಟ್ಟಿ, ಆನಂತರ ಬೆಳ್ಳಿಪರದೆಯತ್ತ ಮುಖ ಮಾಡಿದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಮೇಘಾ ಶೆಟ್ಟಿ. ಇತ್ತೀಚೆಗೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಆರಂಭದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಮೇಘಾ ಶೆಟ್ಟಿ ಹೆಸರು ಭಾರಿ ಸದ್ದು ಮಾಡುತ್ತಿದೆ. ಹಾಗಾದರೆ, ಈ ಬಾರಿಯಾದರೂ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರಾ? ಈ ಕುರಿತು ಸ್ವತಃ ಮೇಘಾ ಶೆಟ್ಟಿ ಅವರೇ ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ಸೀಸನ್ ಆರಂಭವಾಗುವಾಗಲೂ ಮೇಘಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಸಹಜವಾಗಿದೆ. ಆದರೆ, ಅವರು ಮಾತ್ರ ಇದುವರೆಗೂ ಯಾವುದೇ ಸೀಸನ್‌ಗೆ ಹೋಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾ, “ಈ ಬಾರಿ ನನ್ನ ಹೆಸರು ಕೇಳಿಬರುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಪ್ರತಿ ವರ್ಷವೂ ನನ್ನ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ಸದ್ಯಕ್ಕೆ ನಾನು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗಲಿದೆಯೋ ನೋಡೋಣ” ಎಂದು ಹೇಳುವ ಮೂಲಕ ಸದ್ಯಕ್ಕಂತೂ ತಾವು ಶೋಗೆ ಹೋಗುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಪ್ರತಿ ಬಾರಿಯೂ ಬಿಗ್ ಬಾಸ್ ಕಡೆಯಿಂದ ಆಫರ್ ಬಂದರೂ ಅವರು ಒಪ್ಪಿಕೊಳ್ಳದಿರಲು ಮುಖ್ಯ ಕಾರಣ ಸಿನಿಮಾ ಡೇಟ್ಸ್‌ ಅಭಾವವಂತೆ! ಈ ಬಗ್ಗೆ ಮಾತನಾಡಿದ ಅವರು, “ಕಳೆದ ಬಾರಿ ‘ಕೈವ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಬಿಗ್ ಬಾಸ್ ಆಫರ್ ಬಂದಿತ್ತು. ಈಗ ‘ಗ್ರಾಮಾಯಣ’ ಚಿತ್ರದ ಬಿಡುಗಡೆಯ ಕೆಲಸಗಳಿವೆ. ಇದಕ್ಕೂ ಮುನ್ನ ಧಾರಾವಾಹಿಯ ಚಿತ್ರೀಕರಣ ಇರುತ್ತಿತ್ತು. ಹೀಗೆ ಸತತವಾಗಿ ಸಿನಿಮಾಗಳ ಕೆಲಸಗಳು ಇರುವುದರಿಂದ ಬಿಗ್ ಬಾಸ್‌ಗೆ ದಿನಾಂಕಗಳನ್ನು ಹೊಂದಿಸುವುದು ಕೊಂಚ ಕಷ್ಟವಾಗುತ್ತದೆ” ಎಂದು ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.

ಸದ್ಯ ವಿನಯ್‌ ರಾಜ್‌ಕುಮಾರ್‌ ನಾಯಕತ್ವದ ʻಗ್ರಾಮಾಯಣʼ ಸಿನಿಮಾದಲ್ಲಿ ನಟಿ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Share This Article
Facebook Twitter Copy Link Print
Previous Article Actor ದರ್ಶನ್‌ಗೆ ಸುಪ್ರೀಂ ಕೋರ್ಟ್ ಮತ್ತೆ ಶಾಕ್‌ – 1 ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸದ ಹಾಗೆ ತಡೆ
Next Article Koppala ಅಂಜನಾದ್ರಿ ಬೆಟ್ಟಕ್ಕೆ ರಾಹುಲ್​ ದ್ರಾವಿಡ್​​ ದಂಪತಿ ಭೇಟಿ – ವಿಶೇಷ ಪೂಜೆ ಸಲ್ಲಿಕೆ

Popular Posts

Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್

2 Min Read

Instagram ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್

1 Min Read

High court| ಆದಾಯ ಮೀರಿ ಆಸ್ತಿ ಗಳಿಕೆ ಆರೋಪ – ಎಸ್.ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್

1 Min Read

Koppala ಅಂಜನಾದ್ರಿ ಬೆಟ್ಟಕ್ಕೆ ರಾಹುಲ್​ ದ್ರಾವಿಡ್​​ ದಂಪತಿ ಭೇಟಿ – ವಿಶೇಷ ಪೂಜೆ ಸಲ್ಲಿಕೆ

0 Min Read

You Might Also Like

Crimeಕರ್ನಾಟಕಪ್ರಮುಖ

Actor ದರ್ಶನ್‌ಗೆ ಸುಪ್ರೀಂ ಕೋರ್ಟ್ ಮತ್ತೆ ಶಾಕ್‌ – 1 ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸದ ಹಾಗೆ ತಡೆ

1 Min Read
ದೇಶಪ್ರಮುಖ

Tamilnadu| ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ರಾಧಾಕೃಷ್ಣನ್ ಬಂಧನ

2 Min Read
ದೇಶಪ್ರಮುಖಮನರಂಜನೆವೈರಲ್

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read
ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?