newsics.com | ನ್ಯೂಸಿಕ್ಸ್
ನವದೆಹಲಿ: ಯೂಸರ್ ನೇಮ್ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸಂಸ್ಥೆಗೆ ಬುಧವಾರವಷ್ಟೇ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್‌ಗೂ ನೋಟಿಸ್ ಜಾರಿ ಮಾಡಿದೆ. ಆನ್‌ಲೈನ್ ವಂಚನೆ ಹಾಗೂ ಸೈಬರ್ ಕ್ರೈಂ ತಡೆಯುವ ನಿಟ್ಟಿನಲ್ಲಿ ಕೇಂದ್ರ ಐಟಿ ಸಚಿವಾಲಯ ಈ ಮಹತ್ವದ ಕ್ರಮ ಕೈಗೊಂಡಿದೆ.
ಖಾತೆದಾರರ ಸುರಕ್ಷತೆ ಬಗ್ಗೆ ಸರ್ಕಾರದ ಪ್ರಶ್ನೆ
ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್‌ಗಳಲ್ಲಿ ಇರುವ ಯೂಸರ್ ನೇಮ್ ಫೀಚರ್ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಕೇವಲ ಯೂಸರ್ ನೇಮ್ ಬಳಸಿ ಚಾಟ್ ಮಾಡುವ ಈ ವ್ಯವಸ್ಥೆಯಿಂದಾಗಿ, ಸಾರ್ವಜನಿಕರನ್ನು ಸುಲಭವಾಗಿ ನಕಲು ಮಾಡುವ ಮತ್ತು ವಂಚಿಸುವ ಜಾಲಗಳು ಸಕ್ರಿಯವಾಗಬಹುದು ಎಂದು ಸರ್ಕಾರ ಆತಂಕ ಪಟ್ಟಿದೆ. ಈ ರೀತಿಯ ಸೈಬರ್ ಬೆದರಿಕೆಗಳನ್ನು ನಿಮ್ಮ ಪ್ಲಾಟ್‌ಫಾರ್ಮ್‌ಗಳು ಹೇಗೆ ಎದುರಿಸುತ್ತವೆ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.
ಟೆಲಿಗ್ರಾಂಗೆ ನೇರ ಪ್ರಶ್ನೆ ಹಾಕಿದ ಸಚಿವಾಲಯ
ಪಿಟಿಐ ಸುದ್ದಿ ಸಂಸ್ಥೆಯ ವರದಿಗಳ ಪ್ರಕಾರ, ‘ನಿಮ್ಮ ಆ್ಯಪ್‌ನಲ್ಲಿ ಈ ಯೂಸರ್ ನೇಮ್ ಫೀಚರ್ ಹೊಂದುವ ಅಗತ್ಯವಾದರೂ ಏನಿದೆ?’ ಎಂದು ಕೇಂದ್ರ ಸರ್ಕಾರ ಟೆಲಿಗ್ರಾಂ ಸಂಸ್ಥೆಯನ್ನು ನೇರವಾಗಿ ಪ್ರಶ್ನಿಸಿದೆ. ಮೆಟಾ ಒಡೆತನದ ವಾಟ್ಸಾಪ್ ಹೊಸದಾಗಿ ಈ ವೈಶಿಷ್ಟ್ಯವನ್ನು ತರಲು ಮುಂದಾದಾಗ, ಇದರಿಂದ ಡಿಜಿಟಲ್ ಅರೆಸ್ಟ್, ಫಿಶಿಂಗ್ ಮತ್ತು ಆನ್‌ಲೈನ್ ದೋಖಾಗಳು ಹೆಚ್ಚಾಗಬಹುದು ಎಂದು ಬುಧವಾರವೇ ಅದಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಈಗಾಗಲೇ ಈ ಫೀಚರ್ ಹೊಂದಿರುವ ಇತರೆ ಆ್ಯಪ್‌ಗಳಿಗೂ ನೋಟಿಸ್ ನೀಡಿರುವುದರಿಂದ ಸೈಬರ್ ಲೋಕದಲ್ಲಿ ಭಾರಿ ಸಂಚಲನ ಮೂಡಿದೆ.
Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!