newsics.com | ನ್ಯೂಸಿಕ್ಸ್
ಕ್ವೆಟ್ಟಾ: ಇಂದು ಮುಂಜಾನೆ ಬಸ್ಸೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಘಟನೆಯಲ್ಲಿ 40 ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಚಾಲಕನ ಅತಿ ವೇಗ ಹಾಗೂ ಮಿತಿಮೀರಿದ ಪ್ರಯಾಣಿಕರನ್ನು ತುಂಬಿದ್ದೇ ಈ ಘೋರ ದುರಂತಕ್ಕೆ ಕಾರಣ ಎನ್ನಲಾಗಿದೆ.
ಬಲೂಚಿಸ್ತಾನ್ ಹಾಗೂ ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳ ಗಡಿ ಭಾಗದ ಅತ್ಯಂತ ದುರ್ಗಮ ಪ್ರದೇಶವಾದ ಡಾನಾ ಸಾರ್ ಎಂಬ ಹಳ್ಳಿಯ ತಿರುವಿನಲ್ಲಿ ಈ ಘಟನೆ ನಡೆದಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಸ್ಪಷ್ಟಪಡಿಸಿದ್ದಾರೆ. ಅಪಘಾತಕ್ಕೀಡಾದ ಬಸ್ಸು ನಿಗದಿತ ಪ್ರಯಾಣಿಕರ ಜೊತೆಗೆ, ಮಾರ್ಗಮಧ್ಯೆ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಮತ್ತೊಂದು ಬಸ್ಸಿನಲ್ಲಿದ್ದ ಎಲ್ಲ ಜನರನ್ನು ಹತ್ತಿಸಿಕೊಂಡಿತ್ತು. ಸಾಮರ್ಥ್ಯಕ್ಕಿಂತ ಅಧಿಕ ಜನರನ್ನು ತುಂಬಿಕೊಂಡು ಅತಿ ವೇಗವಾಗಿ ಚಲಿಸುತ್ತಿದ್ದ ವಾಹನವು ಅಪಾಯಕಾರಿ ತಿರುವಿನಲ್ಲಿ ಹತೋಟಿ ಸಿಗದೆ ನೇರವಾಗಿ ಕಂದಕಕ್ಕೆ ಜಾರಿ ಬಿದ್ದಿದೆ.
ಭೀಕರ ಅಪಘಾತದ ತೀವ್ರತೆಗೆ ಮೃತಪಟ್ಟವರ ಶವಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಶವಗಳ ಗುರುತು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಈ ಮಹಾ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅತ್ಯುನ್ನತ ತುರ್ತು ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
Heartbreaking news from Balochistan: 🚌 🚨 🚨
A passenger bus met with a tragic accident after plunging into a deep ravine in the Danasar area. 40 people lost their lives, while 8 others sustained injuries. pic.twitter.com/C0b0vfjBhQ— Ayesha Ufaq (@Ufaq_RM) July 3, 2026
Fire Mishap; LPG ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿಯಾಗಿ ಸ್ಫೋಟ, ನಾಲ್ವರು ಸಜೀವ ದಹನ- ವಿಡಿಯೋ ನೋಡಿ