newsics.com| ನ್ಯೂಸಿಕ್ಸ್
ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಮೂಲ ವೇತನದಲ್ಲಿ ಶೇ.12.5ರಷ್ಟು ಹೆಚ್ಚಾಗಿದೆ. ಸಾರಿಗೆ ನೌಕರರ ಮೂಲ ವೇತನ ಈ ತಿಂಗಳಿನಿಂದ ಹೆಚ್ಚಾಗಿರುತ್ತದೆ, 2025 ಮಾರ್ಚ್ 31 ರ ಮೂಲ ವೇತನದ ಮೇಲೆ ಅನ್ವಯವಾಗುತ್ತದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಹಾಗೂ ಕೆಕೆಆರ್‌ಟಿಸಿ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1.05 ಲಕ್ಷಕ್ಕೂ ಹೆಚ್ಚು ನೌಕರರಿಗೆ ಈ ವೇತನದ ಹೆಚ್ಚಿನ ಪ್ರಯೋಜನ ಸಿಗಲಿದೆ.
ನೌಕರರಿಗೆ ಬಾಕಿಯಾಗಿದ್ದ ಹಿಂಬಾಕಿ ಮೊತ್ತದ ಮೊದಲ ಕಂತನ್ನು ಬಿಡುಗಡೆ ಮಾಡಲಾಗಿಲ್ಲ, ಉಳಿದ ಮೊತ್ತವನ್ನು ಮುಂದಿನ ತಿಂಗಳುಗಳಲ್ಲಿ ಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕರು, ನಿರ್ವಾಹಕರು, ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲಾ ವಿಭಾಗದ ನೌಕರರಿಗೆ ಈ ಪರಿಷ್ಕರಣೆ ಅನ್ವಯ ಮಾಹಿತಿ ತಿಳಿಸಲಾಗಿದೆ.