Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ayodhye scam ರಾಮಮಂದಿರದ ಹುಂಡಿ ಮೇಲೆ ಕ್ಯುಆರ್ ಕೋಡ್! ದಾನಿಗಳ ದುಡ್ಡಿಂದ ಪತ್ನಿ ಹೆಸರಲ್ಲಿ ಮನೆ ಕಟ್ಟಿದ್ನಾ ಆರೋಪಿ?
ಕರ್ನಾಟಕದೇಶಪ್ರಮುಖ

Ayodhye scam ರಾಮಮಂದಿರದ ಹುಂಡಿ ಮೇಲೆ ಕ್ಯುಆರ್ ಕೋಡ್! ದಾನಿಗಳ ದುಡ್ಡಿಂದ ಪತ್ನಿ ಹೆಸರಲ್ಲಿ ಮನೆ ಕಟ್ಟಿದ್ನಾ ಆರೋಪಿ?

Share
2 Min Read
SHARE

newsics.com| ನ್ಯೂಸಿಕ್ಸ್
ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಂತೆ ಅಕ್ರಮದ ಹಲವು ಸಂಗತಿಗಳು ಹೊರಬರುತ್ತಿವೆ. ಪ್ರಕರಣದ ಆರೋಪಿ ಲವಕುಶ್ ಮಿಶ್ರಾ ಅವರ ಪತ್ನಿ ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಕಟ್ಟವೊಂದನ್ನು ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಅವರಿಗೆ ನೋಟಿಸ್ ನೀಡಿದೆ.

ಸೋಹಾವಾಲ್ ತಹಸೀಲ್‌ನ ಬನ್ವೀರ್‌ಪುರ ಹಳ್ಳಿಯಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಲವಕುಶ್ ಪತ್ನಿ ಸುಪ್ರಿಯಾ ಮಿಶ್ರಾ ಅವರ ಹೆಸರಿನಲ್ಲಿ ನಿವೇಶನ ಖರೀದಿಸಲಾಗಿದ್ದು, ಅಗತ್ಯ ಕಡ್ಡಾಯ ಅನುಮತಿಯನ್ನು ಪಡೆದಿಲ್ಲ ಎಂದು ಎಡಿಎ ತಿಳಿಸಿದೆ.
ಲವಕುಶ್ ಅವರ ಮನೆಗೂ ತೆರಳಿದ್ದ ಪೊಲೀಸರು, ಅವರ ಕುಟುಂಬ ಸದಸ್ಯರ ವಿಚಾರಣೆಯನ್ನೂ ನಡೆಸಿದ್ದಾರೆ.

ಈ ನಡುವೆ ಅಕ್ರಮದಲ್ಲಿ ಅವಿನಾಶ್ ಶುಕ್ಲಾ ಅವರ ಪಾತ್ರ ದೊಡ್ಡದಿದ್ದು, ಅವರ ಬಳಿಯೇ ಈವರೆಗೆ ಅತ್ಯಧಿಕ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ಪೊಲೀಸರು ತೀವ್ರಗೊಳಿಸುವ ಸಾಧ್ಯತೆ ಇದೆ.

ತನಿಖೆ ಸಂದರ್ಭದಲ್ಲಿ ಅವಿನಾಶ್ ಶುಕ್ಲಾ ಬಳಿ ₹20.39 ಲಕ್ಷ, ಕರುಣೇಶ್ ಪಾಂಡೆ ಬಳಿ ₹18.07 ಲಕ್ಷ, ಅನುಕಲ್ಪ ಮಿಶ್ರಾ ಬಳಿ ₹16.82 ಲಕ್ಷ, ಲವಕುಶ್ ಮಿಶ್ರಾ ಬಳಿ ₹14.25 ಲಕ್ಷ ಮತ್ತು ರಾಮಶಂಖರ್ ಮಿಶ್ರಾ ಬಳಿ ₹7.32 ಲಕ್ಷ, ರಾಮಶಂಕರ್ ಯಾದವ್ ಬಳಿ ₹1 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, 11 ಗ್ರಾಂ ಚಿನ್ನ, 375 ಗ್ರಾಂ ಬೆಳ್ಳಿ ಮತ್ತು 1,121 ಅಮೆರಿಕ ಡಾಲರ್ ಅನ್ನೂ ಪೊಲಿಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ದಾಳಿ ವೇಳೆ ಕಂಡುಬಂದ ಕುತೂಹಲಕಾರಿ ವಿಷಯವೆಂದರೆ, ಅಯೋಧ್ಯೆ ರಾಮ ಮಂದಿರದಲ್ಲಿ ಹುಂಡಿ ಮೇಲಿನ ಕ್ಯೂ ಆರ್ ಕೋಡ್. ದೇಗುಲದಿಂದ ಪೊಲೀಸರು ಒಂದು ಕಾಣಿಕೆ ಹುಂಡಿಯನ್ನು ವಶಪಡಿಸಿಕೊಂಡಿದ್ದರು. ಅದರ ಮೇಲೆ ರಾಮ ರಾಜ್ಯ ಕೋಶ ಎಂದು ಬರೆಯಲಾಗಿತ್ತು. ಅದಕ್ಕೆ ಅಯೋಧ್ಯೆ ಯೋಗ ಕೇಂದ್ರದ ಕ್ಯೂಆರ್ ಕೋಡ್ ಅಂಟಿಸಲಾಗಿತ್ತು. ಈ ಯೋಗಕೇಂದ್ರದಲ್ಲಿ ಅವಿನಾಶ್‌ ಶುಕ್ಲಾ ದಶಕಕ್ಕೂ ಹೆಚ್ಚು ಸಮಯದಿಂದ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣ ಜೂನ್ 7ರಂದು ಬೆಳಕಿಗೆ ಬಂದಿದ್ದು, ತನಿಖೆಗ ಸರ್ಕಾರ ಎಸ್‌ಐಟಿ ರಚಿಸಿದೆ. ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

Share This Article
Facebook Twitter Copy Link Print
Previous Article 8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ – ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆ
Next Article KSRTC: ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ – ಶೇ12.5ರಷ್ಟು ವೇತನ ಹೆಚ್ಚಿಸಿದ ಸರ್ಕಾರ

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?