Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Rainy season ಮಳೆಗಾಲದಲ್ಲಿ ಕಾರ್‌ ಡ್ರೈವಿಂಗ್‌ ಮಾಡೋವಾಗ ಆಲೂಗಡ್ಡೆ ಇಟ್ಕೊಂಡಿರಿ: ಯಾಕೆ ಗೊತ್ತಾ? ಇಲ್ಲಿದೆ ನೋಡಿ
ಕರ್ನಾಟಕಪ್ರಮುಖ

Rainy season ಮಳೆಗಾಲದಲ್ಲಿ ಕಾರ್‌ ಡ್ರೈವಿಂಗ್‌ ಮಾಡೋವಾಗ ಆಲೂಗಡ್ಡೆ ಇಟ್ಕೊಂಡಿರಿ: ಯಾಕೆ ಗೊತ್ತಾ? ಇಲ್ಲಿದೆ ನೋಡಿ

Share
1 Min Read
SHARE

newsics.com| ನ್ಯೂಸಿಕ್ಸ್
ಮಳೆಗಾಲದಲ್ಲಿ ಕಾರ್ ಓಡಿಸುವಾಗ ಡ್ರೈವರ್‌ಗಳು ಎದುರಿಸೋ ದೊಡ್ಡ ಸಮಸ್ಯೆ ಅಂದ್ರೆ ವಿಂಡ್‌ಶೀಲ್ಡ್ ಮೇಲೆ ನೀರು ನಿಲ್ಲೋದು. ಇದರಿಂದ ಮುಂದೆ ರಸ್ತೆ ಸರಿಯಾಗಿ ಕಾಣಿಸದೆ ಕಿರಿಕಿರಿ ಆಗುತ್ತೆ. ಆದ್ರೆ, ಮನೆಯಲ್ಲಿರೋ ಆಲೂಗಡ್ಡೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹಸಿ ಆಲೂಗಡ್ಡೆಯನ್ನು ಎರಡಾಗಿ ಕತ್ತರಿಸಿ. ಅದರ ಒಳಭಾಗವನ್ನು ಕಾರಿನ ವಿಂಡ್‌ಶೀಲ್ಡ್‌ಗೆ ಚೆನ್ನಾಗಿ ಉಜ್ಜಿ. ಆಲೂಗಡ್ಡೆಯಲ್ಲಿರುವ ಸ್ಟಾರ್ಚ್ ಗ್ಲಾಸ್ ಮೇಲೆ ತೆಳುವಾದ ಪದರವಾಗಿ ರೂಪುಗೊಳ್ಳುತ್ತದೆ. ಈ ಪದರವು ನೀರು ಹೆಚ್ಚು ಹೊತ್ತು ನಿಲ್ಲದಂತೆ ತಡೆಯುತ್ತದೆ. ಮಳೆನೀರಿನ ಹನಿಗಳು ಗಾಜಿನ ಮೇಲೆ ಸಂಗ್ರಹವಾಗದೆ ಜಾರಿಹೋಗುತ್ತವೆ. ಇದರಿಂದ ಡ್ರೈವಿಂಗ್ ವೇಳೆ ದಾರಿ ಸ್ಪಷ್ಟವಾಗಿ ಕಾಣಿಸುತ್ತದೆ.

ಈ ಟ್ರಿಕ್ ‘ಸರ್ಫೇಸ್ ಟೆನ್ಷನ್’ ಅಥವಾ ಮೇಲ್ಮೈ ಸೆಳೆತದ ತತ್ವದ ಮೇಲೆ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ, ಮಳೆಹನಿಗಳು ಗ್ಲಾಸ್ ಮೇಲೆ ಬಿದ್ದಾಗ, ಅವು ಒಂದೆಡೆ ಸೇರಿ ನೀರಿನ ಪದರವನ್ನು ರೂಪಿಸುತ್ತವೆ. ಇದರಿಂದ ರಸ್ತೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ, ಗ್ಲಾಸ್ ಮೇಲೆ ಸ್ಟಾರ್ಚ್ ಪದರ ಇದ್ದಾಗ, ನೀರಿನ ಹನಿಗಳು ದೊಡ್ಡದಾಗಿ ಹರಡದೆ ಸಣ್ಣ ಬಿಂದುಗಳಾಗಿ ಉಳಿಯುತ್ತವೆ. ಗಾಳಿಯ ಒತ್ತಡ ಅಥವಾ ವಾಹನದ ಚಲನೆಯಿಂದ ಅವು ಸುಲಭವಾಗಿ ಕೆಳಗೆ ಜಾರಿಹೋಗುತ್ತವೆ.

ಮೊದಲು, ಕಾರಿನ ಗ್ಲಾಸ್‌ಗಳನ್ನು ಕ್ಲೀನ್ ಬಟ್ಟೆಯಿಂದ ಒರೆಸಿ. ನಂತರ ಹಸಿ ಆಲೂಗಡ್ಡೆಯನ್ನು ಎರಡು ತುಂಡು ಮಾಡಿ, ಅದರ ಒಳಭಾಗವನ್ನು ವಿಂಡ್‌ಶೀಲ್ಡ್, ಸೈಡ್ ಮಿರರ್‌ ಮತ್ತು ಹಿಂದಿನ ಗ್ಲಾಸ್‌ಗೆ ನಿಧಾನವಾಗಿ ಉಜ್ಜಿ. ಕೆಲವು ನಿಮಿಷ ಒಣಗಲು ಬಿಡಿ. ನಂತರ, ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಒರೆಸಿದರೆ, ಕಲೆಗಳು ಕಾಣಿಸದೆ ಗ್ಲಾಸ್ ಕ್ಲೀನ್ ಆಗಿರುತ್ತದೆ.

ಇದು ತುಂಬಾ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದಾದ ಸುಲಭ ಉಪಾಯ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಇದರ ಪರಿಣಾಮ ಸ್ವಲ್ಪ ಸಮಯ ಮಾತ್ರ ಇರುತ್ತದೆ.

Share This Article
Facebook Twitter Copy Link Print
Previous Article Terrorist ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ‌ ನಾಲ್ವರ ಬಂಧನ – ವಿದೇಶಿ ಪಿಸ್ತೂಲ್, ಜೀವಂತ ಗುಂಡುಗಳು ವಶಕ್ಕೆ
Next Article Iphone ಇದು ಮಡಚಬಹುದಾದ ಅತಿ ದುಬಾರಿ ‘ಐಫೋನ್ ಅಲ್ಟ್ರಾ’! ಇತಿಹಾಸದಲ್ಲೇ ಮೊದಲು…

Popular Posts

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read

You Might Also Like

ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read
ಕರ್ನಾಟಕಪ್ರಮುಖ

High court styas 52 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

2 Min Read
ದೇಶಪ್ರಮುಖರಿಲೇಷನ್‌ಶಿಪ್ವೈರಲ್

Insta Love Story: 3 ವರ್ಷ ಲವ್ ಮಾಡಿ ಮದುವೆ, ಫಸ್ಟ್​ ನೈಟ್ ಮುನ್ನ ಗೊತ್ತಾಯ್ತು ಅವಳಲ್ಲ ಅವನು’!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?