ಮಂಗಳವಾರ ಸಂಜೆ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭವೊಂದರಲ್ಲಿ ನೇಹಾ ಧೂಪಿಯಾ ಪಾಲ್ಗೊಂಡಿದ್ದರು. ಈ ವೇಳೆ ಕೆಲ ಫೋಟೋಗ್ರಾಫರ್‌ಗಳು ಅವರ ಹಿಂಬದಿಯಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದನ್ನು ನಟಿ ಗಮನಿಸಿದ್ದಾರೆ. ಇದರಿಂದ ತೀವ್ರ ಬೇಸರ ಹಾಗೂ ಕೋಪಗೊಂಡ ನೇಹಾ, ಇದು ತಾರೆಯರಿಗೆ ತೋರುವ ಅತ್ಯಂತ ‘ಅಗೌರವದ ವರ್ತನೆ’ ಎಂದು ಹೇಳಿ ಸ್ಥಳದಲ್ಲೇ ಗರಂ ಆಗಿದ್ದಾರೆ. ಇಂತಹ ಅಸಭ್ಯ ಫೋಟೋಗಳನ್ನು ತೆಗೆಯುವುದನ್ನು ನಿಲ್ಲಿಸಬೇಕೆಂದು ನಟ-ನಟಿಯರು ಪದೇ ಪದೇ ವಿನಂತಿಸುತ್ತಿದ್ದರೂ ಈ ಚಾಳಿ ಮುಂದುವರಿದಿರುವುದಕ್ಕೆ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇಂಟರ್‌ನೆಟ್‌ನಲ್ಲಿ ವಿಡಿಯೋ ವೈರಲ್
ನಟಿ ನೇಹಾ ಧೂಪಿಯಾ ಅವರು ಫೋಟೋಗ್ರಾಫರ್‌ಗಳನ್ನು ತರಾಟೆಗೆ ತೆಗೆದುಕೊಂಡಿರುವ ಈ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಪಾಪರಾಜಿಗಳನ್ನು ನೇರವಾಗಿ ಉದ್ದೇಶಿಸಿ ಮಾತನಾಡಿರುವ ನೇಹಾ, “ನಿಮ್ಮಲ್ಲಿ ಯಾರು ಈ ರೀತಿ ಅಸಭ್ಯವಾಗಿ ಬ್ಯಾಕ್ ಶಾಟ್ ತೆಗೆದುಕೊಳ್ಳುತ್ತಿರುವುದು? ಯಾರು ಆ ಕೆಲಸ ಮಾಡುತ್ತಿರುವುದು? ಮೊದಲು ಅದನ್ನು ನಿಲ್ಲಿಸಿ” ಎಂದು ಅತ್ಯಂತ ಕಠಿಣ ಧ್ವನಿಯಲ್ಲಿ ಗದರಿದ್ದಾರೆ.
#NehaDhupia – ACTRESS SERIOUS ON PAPARAZZI FOR TAKING BACKSHOTS OF HER 😳😳💥💥
Next #Hindi Film Arriving From Her.
— GetsCinema (@GetsCinema) July 1, 2026
ಹೇಳಿ ಹೇಳಿ ಸಾಕಾಗಿದೆ, ಇದೆಲ್ಲಾ ಇನ್ಮುಂದೆ ನಡೆಯಲ್ಲ!
ತಮ್ಮ ಆಕ್ರೋಶವನ್ನು ಮುಂದುವರಿಸಿದ ನಟಿ, “ಕೇವಲ ನನ್ನ ಫೋಟೋ ಮಾತ್ರವಲ್ಲ, ಇನ್ಮುಂದೆ ಯಾವುದೇ ನಟಿಯರ ಫೋಟೋಗಳನ್ನು ಈ ರೀತಿ ಹಿಂದಿನಿಂದ ಅಸಭ್ಯವಾಗಿ ಕ್ಲಿಕ್ಕಿಸಬೇಡಿ. ನಿಮಗೆ ಹೇಳಿ ಹೇಳಿ ಸಾಕಾಗಿದೆ. ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಬ್ಯಾಗ್ ಅಥವಾ ಪುಸ್ತಕಗಳನ್ನು ಹಿಡಿದುಕೊಂಡು, ಹಿಂದಕ್ಕೆ ಮುಖ ಮಾಡಿ ನಡೆದುಕೊಂಡು ಹೋಗುವ ಪರಿಸ್ಥಿತಿಯನ್ನು ತರಬೇಡಿ. ಇದೆಲ್ಲವನ್ನೂ ಇಂದಿಗೇ ನಿಲ್ಲಿಸಿ. ನಾವು ನಿಮ್ಮನ್ನು ಎಷ್ಟು ಗೌರವದಿಂದ ನಡೆಸಿಕೊಳ್ಳುತ್ತೇವೆಯೋ, ನೀವೂ ನಮಗೆ ಅಷ್ಟೇ ಗೌರವವನ್ನು ನೀಡಬೇಕು” ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ನಟಿಯ ಈ ಧೈರ್ಯದ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್ ಏನ್ ಹೇಳ್ತಿದೆ?