Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು
Crimeಕರ್ನಾಟಕಪ್ರಮುಖ

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

Share
1 Min Read
SHARE

newsics.com| ನ್ಯೂಸಿಕ್ಸ್

ಬೆಂಗಳೂರು ನಗರದ ಐಟಿ ಕಂಪನಿಯೊಂದರ ಆವರಣದಲ್ಲಿರುವ ಡೇ-ಕೇರ್ ಕೇಂದ್ರದಲ್ಲಿ (Baby care center) ಎರಡು ವರ್ಷದ ಪುಟ್ಟ ಮಕ್ಕಳಿಗೆ ದೈಹಿಕ ಹಿಂಸೆ, ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳಿಗೆ ದೈಹಿಕ ಹಿಂಸೆ ನೀಡುವ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಆ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ದೂರು ಬಂದಿದೆ. ಸದ್ಯ ಡೇ-ಕೇರ್​ ಕೇಂದ್ರದ ಐವರು ಆಯಾಗಳ ವಿರುದ್ಧ ಹೆಚ್​ಎಎಲ್​ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆಯಾಗಳಿಂದ ಮಕ್ಕಳಿಗೆ ದೈಹಿಕ ಹಿಂಸೆ:

ಹೆಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್​ಫೀಲ್ಡ್​​ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್​ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಈ ಸೆಂಟರ್​ನಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಅಲ್ಲಿನ ಆಯಾಗಳು ಮಾತ್ರ ಮಕ್ಕಳ ಮೇಲೆ ಕ್ರೂರ ವರ್ತನೆ ತೋರಿದ್ದಾರೆ. ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕುವ ಸಿಬ್ಬಂದಿ:

ಇನ್ನು ವೈರಲ್ ಆಗಿರುವ ವಿಡಿಯೋ ಮತ್ತಷ್ಟು ಭಯಾನಕವಾಗಿವೆ. ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕಿರುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್​​ ಮೂಲಕ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವ ಮೂಲಕ ಅತ್ಯಂತ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯದೊಳಗೆ ಕೂಡಿ ಹಾಕುವುದಲ್ಲದೆ ಕಿರುಚಾಡದಂತೆ ಹೆದರಿಸಿದ್ದಾರೆ. ಆಯಾಗಳ ಈ ಕ್ರೂರ ಕೃತ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮಕ್ಕಳು ಭಯದಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ವಿಡಿಯೋಗಳು ವೈರಲ್​ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಚೈಲ್ಡ್ ಹೆಲ್ಪ್‌ಲೈನ್ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ಐವರು ಆಯಾಗಳ ವಿರುದ್ಧ ಬಿಎನ್​​ಎಸ್​ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಹೆಚ್​ಎಎಲ್ ಪೊಲೀಸರು ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Share This Article
Facebook Twitter Copy Link Print
Previous Article Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?
Next Article Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

Popular Posts

Golden MP ಸಂಸದೆ ಮನೆಯಲ್ಲಿ ಬೆಟ್ಟದಷ್ಟು ಬಂಗಾರ, ರಾಶಿ ರಾಶಿ ಹಣ! ಚಿನ್ನದ ಒಳ ಉಡುಪೂ ಸಿಕ್ತಾ?

2 Min Read

Whatsapp Username ವಾಟ್ಸ್ಯಾಪ್‌ನ ಹೊಸ ‘ಯೂಸರ್‌ನೇಮ್’ ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್

2 Min Read

Banglore ಬೇಬಿ ಕೇರ್ ಸೆಂಟರ್​ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ – FIR ದಾಖಲು

1 Min Read

Yash toxic ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್‌ನಲ್ಲಿ ಅಬ್ಬರಿಸಿದ ಪಂಚಕನ್ಯೆಯರು! ಸ್ಟೋರಿ ಲೈನ್‌ ಏನ್ ಹೇಳ್ತಿದೆ?

2 Min Read

You Might Also Like

ದೇಶಪ್ರಮುಖವೈರಲ್

Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

1 Min Read
ಕರ್ನಾಟಕದೇಶಪ್ರಮುಖ

Cabinet Expansion: ಯಂಗ್ ಶಾಸಕರ ಪಟ್ಟಿಯೊಂದಿಗೆ ನಾಳೆ ಸಿಎಂ ದೆಹಲಿಗೆ – ಜುಲೈ 8ಕ್ಕೆ ಆಗಲಿದೆಯಾ ಸಚಿವ ಸಂಪುಟ ವಿಸ್ತರಣೆ?

3 Min Read
Crimeದೇಶಪ್ರಮುಖ

Mumbai ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

3 Min Read
Crimeಕರ್ನಾಟಕ

Old video ಡೇಟ್‌ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್‌ಲೈನ್‌ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?