newsics.com
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಸಂಚುಕೋರ ಎನ್ನಲಾದ ಪಾಕಿಸ್ತಾನ ಮೂಲದ ಭಯೋತ್ಪಾದಕ ಫರ್ಹತ್ತುಲ್ಲಾ ಗೋರಿ ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ರೈಲು ಹಳಿ ತಪ್ಪಿಸುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದ್ದಾನೆ.
ಟೆಲಿಗ್ರಾಮ್‌ನಲ್ಲಿ ಬಿಡುಗಡೆಯಾದ ಮೂರು ನಿಮಿಷಗಳ ವಿಡಿಯೋದಲ್ಲಿ ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಭಾರತೀಯ ನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ರೈಲು ಹಳಿ ತಪ್ಪಿಸುವಂತೆ ಸೂಚಿಸಿದ್ದಾನೆ.
ಗೋರಿಯ ಕರೆಯಿಂದ ಭಾರತೀಯ ರೈಲ್ವೇಗಳ ಮೇಲಿನ ಸಂಭಾವ್ಯ ದಾಳಿ ನಡೆಯದಂತೆ ಗುಪ್ತಚರ ಸಂಸ್ಥೆ ಪರಿಶೀಲಿಸುತ್ತಿದೆ. ಪ್ರಸ್ತುತ ಭಾರತಕ್ಕೆ ಬೇಜಾಗಿರುವ ಉಗ್ರರ ಪಟ್ಟಿಯಲ್ಲಿ ಫರ್ಹತ್ತುಲ್ಲಾ ಗೋರಿ ಟಾಪ್ ನಲ್ಲಿದ್ದಾನೆ. ತನ್ನ ಅನುಯಾಯಿಗಳಿಗೆ ಬಂದೂಕುಗಳ ಬಳಕೆಯನ್ನು ಮೀರಿ ಅಡಚಣೆಗಳನ್ನು ಉಂಟು ಮಾಡುವ ವಿವಿಧ ವಿಧಾನಗಳನ್ನು ತನ್ನ ಅನುಯಾಯಿಗಳಿಗೆ ವಿವರಿಸಿದ್ದಾನೆ.
ದೇಶದಲ್ಲಿ “ಅವ್ಯವಸ್ಥೆಯನ್ನು ಉಂಟುಮಾಡುವ” ಗುರಿಯೊಂದಿಗೆ ರೈಲು ಮಾರ್ಗಗಳು, ಪೆಟ್ರೋಲ್ ಪೈಪ್‌ಲೈನ್‌ಗಳು ಮತ್ತು ಲಾಜಿಸ್ಟಿಕಲ್ ಸರಪಣಿಗಳ ಮೇಲೆ ದಾಳಿ ಮಾಡುವಂತೆ ಆತ ಕರೆ ನೀಡಿರುವುದು ವಿಡಿಯೋದಲ್ಲಿ ಕಾಣುತ್ತಿದೆ.
ಪೆಟ್ರೋಲ್ ಪೈಪ್‌ಲೈನ್‌ಗಳು, ಅವುಗಳ ಲಾಜಿಸ್ಟಿಕ್ಸ್ ಸರಪಳಿ ಮತ್ತು ಸಹಯೋಗಗಳನ್ನು ಗುರಿಯಾಗಿಸಿಕೊಳ್ಳಿ. ರೈಲು ಮಾರ್ಗಗಳು, ಅವುಗಳ ಸಾರಿಗೆ ವ್ಯವಸ್ಥೆಯನ್ನು ಅಡ್ಡಿಪಡಿಸಿ. ಇವು ಅವ್ಯವಸ್ಥೆಯನ್ನು ಉಂಟುಮಾಡುತ್ತವೆ” ಎಂದು ಗೋರಿ ಘೋಷಿಸಿದ್ದಾನೆ.
ಭಾರತ ಸರ್ಕಾರವು ED ಮತ್ತು NIA ಮೂಲಕ ನಮ್ಮ ಆಸ್ತಿತ್ವವನ್ನು ಗುರಿಯಾಗಿಸುತ್ತಿದೆ, ಆದರೆ ದೃಢವಾಗಿರಿ, ನಾವು ಬೇಗ ಅಥವಾ ನಿಧಾನವಾಗಿಯಾದರು ಅಧಿಕಾರವನ್ನು ಕಸಿದುಕೊಳ್ಳುತ್ತೇವೆ” ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಪಟ್ಟಿಯಲ್ಲಿರುವ ಭಯೋತ್ಪಾದಕ ಹೇಳಿದ್ದಾನೆ.
ಗೋರಿಯ ವಿಡಿಯೋ ಭಾಷಣದ ರೈಲು ಹಳಿ ತಪ್ಪಿಸುವ ಹೇಳಿಕೆಯು ಭಾರತೀಯ ಭದ್ರತಾ ಸಂಸ್ಥೆಗಳನ್ನು ಎಚ್ಚರಿಸಿದೆ, ಆಗಸ್ಟ್ 23 ಮತ್ತು 24 ರಂದು, ವಂದೇ ಭಾರತ್ ರೈಲನ್ನು ಹಳಿತಪ್ಪಿಸುವ ಪ್ರಯತ್ನ ನಡೆದಿತ್ತು. ಸಿಮೆಂಟ್ ಬ್ಲಾಕ್‌ಗಳನ್ನು ಹಳಿಗಳ ಮೇಲೆ ಇರಿಸಲಾಗಿತ್ತು ಎಂದು ವರದಿಯಾಗಿದೆ,
ಮೂರು ನಿಮಿಷಗಳ ವೀಡಿಯೊದಲ್ಲಿ, ಗೋರಿ “ಫಿಡಾಯೀನ್ ಯುದ್ಧ” ಅಥವಾ ಆತ್ಮಹತ್ಯಾ ದಾಳಿಗೆ ಕರೆ ನೀಡಿದ್ದಾನೆ. ಅತನ ಅನುಯಾಯಿಗಳು ಹಿಂದೂ ಮುಖಂಡರು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಳ್ಳುವಂತೆ ಹೇಳಿದ್ದಾನೆ.
ಮೂಲತಃ ಹೈದರಾಬಾದ್‌ನವನಾದ ಗೋರಿಯನ್ನು 2022 ರಲ್ಲಿ ಭಾರತೀಯ ಗೃಹ ಸಚಿವಾಲಯವು ಭಯೋತ್ಪಾದಕ ಎಂದು ಗೊತ್ತುಪಡಿಸಿತು. ಆತ ಪಾಕಿಸ್ತಾನದ ಲಾಹೋರ್‌ನಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಯಾವುದೇ ಡ್ರೆಸ್ ತೊಟ್ಟರೂ ಹೆಣ್ಮಕ್ಕಳತ್ತ ಕೆಟ್ಟ ನೋಟ: ಪುರುಷರಿಗೆ ಯಾಕಿಂಥ ಮನಸ್ಥಿತಿ?
ಕೋಲಾರ, ಹೊಸೂರು ಟಾಟಾ ಪ್ಲ್ಯಾಂಟ್‌ಗಳಲ್ಲಿ ಉತ್ತರಾಖಂಡದ 4 ಸಾವಿರ ಮಹಿಳೆಯರಿಗೆ ಉದ್ಯೋಗ