Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Nasal drops ವೈದ್ಯರು ಮಾಡಿದ ಎಡವಟ್ಟು : ದೃಷ್ಟಿ ಕಳೆದುಕೊಂಡ 19 ತಿಂಗಳ ಮಗು!
ಕರ್ನಾಟಕದೇಶಪ್ರಮುಖ

Nasal drops ವೈದ್ಯರು ಮಾಡಿದ ಎಡವಟ್ಟು : ದೃಷ್ಟಿ ಕಳೆದುಕೊಂಡ 19 ತಿಂಗಳ ಮಗು!

Share
1 Min Read
SHARE

newsics. com| ನ್ಯೂಸಿಕ್ಸ್

ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ 19 ತಿಂಗಳ ಗಂಡು ಮಗು ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಈ ಕುರಿತು ಮಗುವಿನ ತಂದೆ ಇಂದ್ರಾಜ್ ವಿಶ್ವಕರ್ಮಾ ವೈದ್ಯರ ಮೇಲೆ ದೂರು ನೀಡಿದ್ದಾರೆ. ಅವರ ದೂರಿನ ಪ್ರಕಾರ, ಮೇ 29, 2026ರಂದು ತಮ್ಮ ಪುತ್ರ ವಿನಯ್ ವಿಶ್ವಕರ್ಮಾಗೆ ಜ್ವರ, ಶೀತ ಹಾಗೂ ಕಣ್ಣು ಕೆಂಪಾಗಿದ್ದ ಕಾರಣ ಸಾಗರ್ ಜಿಲ್ಲೆಯ ಬಾಂದಾ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕರ್ತವ್ಯದಲ್ಲಿದ್ದ ಸರ್ಕಾರಿ ವೈದ್ಯರು ಮಗುವನ್ನು ಪರೀಕ್ಷಿಸಿದರು. ಈ ವೇಳೆ, ಮೂಗಿಗೆ ಬಳಸಬೇಕಾದ ಸಾಲೈನ್ ನಾಸಲ್ ಡ್ರಾಪ್ಸ್‌ನ್ನು ತಪ್ಪಾಗಿ ಮಗುವಿನ ಕಣ್ಣಿಗೆ ಹಾಕಿದರು ಎಂದು ಕುಟುಂಬ ಆರೋಪಿಸಿದೆ.

ಜೊತೆಗೆ ಪ್ಯಾರಾಸಿಟಮಾಲ್ ಸಿರಪ್, ಒಂದು ಇಂಜೆಕ್ಷನ್ ಹಾಗೂ ಇತರೆ ಔಷಧಿಗಳನ್ನೂ ನೀಡಲಾಗಿದೆ. ಚಿಕಿತ್ಸೆಯ ಕೆಲವೇ ಗಂಟೆಗಳಲ್ಲಿ ಮಗುವಿನ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಹಲವು ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ ಯಾವುದೇ ಸುಧಾರಣೆ ಕಾಣಲಿಲ್ಲ. ಬಳಿಕ ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಯಿತು. ನಂತರ ಮಗುವನ್ನು ಭೋಪಾಲ್ AIIMS ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ತಜ್ಞ ವೈದ್ಯರು ಪರೀಕ್ಷಿಸಿದ ಬಳಿಕ, ಮಗುವಿನ ಎರಡೂ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ಕಳೆದುಹೋಗಿದೆ ಎಂದು ತಿಳಿಸಿದ್ದಾಗಿ ತಂದೆ ಆರೋಪಿಸಿದ್ದಾರೆ.

ತಪ್ಪಾದ ಚಿಕಿತ್ಸೆ ಅಥವಾ ವೈದ್ಯಕೀಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಕುಟುಂಬ ಹೇಳಿದೆ. ಈ ಘಟನೆ ಬಳಿಕ ತಂದೆ ಬಾಂದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಂಬಂಧಪಟ್ಟ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 

Share This Article
Facebook Twitter Copy Link Print
Previous Article BYV- Sadananda Gowda ವಿಜಯೇಂದ್ರ ಕೆಳಗಿಳಿಸಲು ಪ್ಲ್ಯಾನ್ ಮಾಡಿದ್ರಾ ಸದಾನಂದಗೌಡ? ಆಡಿಯೋ ವೈರಲ್, ಬಿಜೆಪಿಯಲ್ಲಿ ಸಂಚಲನ
Next Article Deep Kissing… ಶೂಟಿಂಗ್ ವೇಳೆ ನಟಿ ಕಂಗನಾ ನಟ ವೀರ್ ದಾಸ್ ತುಟಿ ಕಚ್ಚಿ ಗಾಯಗೊಳಿಸಿದ್ದೇಕೆ? ವಿಡಿಯೋ ಮತ್ತೆ ವೈರಲ್!

Popular Posts

Mysterious disease ನಿಗೂಢ ಕಾಯಿಲೆಗೆ ಹತ್ತೇ ದಿನದಲ್ಲಿ ಒಂದೇ ಕುಟುಂಬದ ಐವರ ಬಲಿ! ಎಲ್ಲೆಲ್ಲೂ ಆತಂಕ

3 Min Read

Gruhajyoti scheme ಗೃಹಜ್ಯೋತಿ ದುರ್ಬಳಕೆಗೆ ಬ್ರೇಕ್: ಮನೆ ಮನೆಗೂ ಬರಲಿದೆ ಹೊಸ ಅರ್ಜಿ!

2 Min Read

Wanted… ಪ್ರೇಮಿಗಳನ್ನು ಬೇರೆ ಬೇರೆ ಮಾಡಲು ಬೇಕಾಗಿದ್ದಾರೆ ಚೀಫ್ ಬ್ರೇಕಪ್ ಆಫಿಸರ್! ತಿಂಗಳ ಸಂಬಳ 2.8 ಲಕ್ಷ ರೂ.!

3 Min Read

Fuel ಜುಲೈ 1ರಿಂದ ಪೆಟ್ರೋಲ್, ಡೀಸೆಲ್ ಮೇಲಿನ ನಿರ್ಬಂಧ ತೆರವು – ಕೇಂದ್ರದಿಂದ ಮಹತ್ವದ ನಿರ್ಧಾರ

1 Min Read

You Might Also Like

Crimeಕರ್ನಾಟಕದೇಶಪ್ರಮುಖ

Sucide case ಪತ್ನಿಯ ಕಿರುಕುಳ, ದೌರ್ಜನ್ಯಕ್ಕೆ ಬೇಸತ್ತು ನೇಣಿಗೆ ಶರಣಾದ ಪತಿ

2 Min Read
ದೇಶಪ್ರಮುಖ

Jewellery ಚಿನ್ನದ ಬೆಲೆ ಕುಸಿತದ ಭೀತಿ: ಹಳೆ ಒಡವೆ ಮಾರಲು ಮುಗಿಬಿದ್ದ ಭಾರತೀಯರು

1 Min Read
ಕರ್ನಾಟಕದೇಶಪ್ರಮುಖವೈರಲ್

Droupadi Murmu ರಾಷ್ಟ್ರಪತಿಯ ಅಂಗರಕ್ಷಕನಿಗೆ ಯುವತಿಯರ ಕಾಟ- ಬಾಡಿಗಾರ್ಡ್​ಗೇ ಬೇಕಿದೆ ಬಾಡಿಗಾರ್ಡ್

1 Min Read
ಕರ್ನಾಟಕದೇಶಪ್ರಮುಖ

Highcourt order ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ : ಹೈಕೋರ್ಟ್‌

1 Min Read

Social Networks

Facebook-f Instagram Twitter
Welcome Back!

Sign in to your account

Lost your password?