newsics.com | ನ್ಯೂಸಿಕ್ಸ್
ಮುಂಬೈ: ಕಿರುತೆರೆಯ ಜನಪ್ರಿಯ ಜೋಡಿಗಳಲ್ಲೊಂದಾದ ನಟ ಗೌರವ್ ಖನ್ನಾ (Gaurav Khanna) ಮತ್ತು ನಟಿ ಆಕಾಂಕ್ಷಾ ಚಮೋಲಾ (Akanksha Chamola) ಅವರ ದಾಂಪತ್ಯ ಜೀವನ ಅಧಿಕೃತವಾಗಿ ಮುರಿದುಬಿದ್ದಿದೆ.
ಈ ಬಗ್ಗೆ ನಟಿಯೇ ರಿಯಾಲಿಟಿ ಶೋವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ತಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಮತ್ತು ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಆಕಾಂಕ್ಷಾ ಚಮೋಲಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ತಮಗೆ ವಿಚ್ಛೇದನವಾಗುತ್ತಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದ ಆಕಾಂಕ್ಷಾ, ಇದೀಗ ರಿಯಾಲಿಟಿ ಶೋ ವೇದಿಕೆಯಲ್ಲೇ ಈ ಶಾಕಿಂಗ್ ನ್ಯೂಸ್ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿದ್ದಾರೆ.
‘ಲಾಕ್ ಅಪ್ ಸೀಸನ್ 2’ ವೇದಿಕೆಯಲ್ಲಿ ಸತ್ಯ ಒಪ್ಪಿಕೊಂಡ ನಟಿ:
ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 27 ರಿಂದ ಆರಂಭವಾಗಿರುವ ಪ್ರಸಿದ್ಧ ರಿಯಾಲಿಟಿ ಶೋ ‘ಲಾಕ್ ಅಪ್ ಸೀಸನ್ 2’ (Lock Upp Season 2) ರ ಮೊದಲ ಸಂಚಿಕೆಯಲ್ಲಿ ಆಕಾಂಕ್ಷಾ ಚಮೋಲಾ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಶೋನ ನಿಯಮದಂತೆ ತಮ್ಮ ಜೀವನದ ರಹಸ್ಯವೊಂದನ್ನು ಬಿಚ್ಚಿಡಬೇಕಾದ ಸಂದರ್ಭದಲ್ಲಿ ಆಕಾಂಕ್ಷಾ ಈ ಕಹಿ ಸತ್ಯವನ್ನು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಶೋನ ನಿರೂಪಕರಾದ ಫರಾ ಖಾನ್, ರಿತೇಶ್ ದೇಶ್‌ಮುಖ್ ಮತ್ತು ಅಲ್ಲಿದ್ದ ಪ್ರೇಕ್ಷಕರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ.
“ನಾನು ಮತ್ತು ಗೌರವ್ ವಿಚ್ಛೇದನ ಪಡೆಯುತ್ತಿದ್ದೇವೆ. ನಾವು ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಆದರೆ ಈ ವಿಷಯವನ್ನು ನಾವು ಎಲ್ಲಿಯೂ ಸಾರ್ವಜನಿಕವಾಗಿ ಹಂಚಿಕೊಂಡಿರಲಿಲ್ಲ,” ಎಂದು ಹೇಳಿದ್ದಾರೆ.
ನಮ್ಮ ನಡುವೆ ಯಾವುದೇ ಕಹಿ ಭಾವನೆಗಳಿಲ್ಲ:
ವಿಚ್ಛೇದನದ ನಿರ್ಧಾರದ ಹೊರತಾಗಿಯೂ ಇಬ್ಬರ ನಡುವೆ ಯಾವುದೇ ದ್ವೇಷ ಅಥವಾ ಕಹಿ ಭಾವನೆಗಳಿಲ್ಲ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದ್ದಾರೆ. “ನನ್ನ ಮತ್ತು ಗೌರವ್ ನಡುವೆ ಸಂಬಂಧ ಕೆಟ್ಟಿಲ್ಲ. ನಾವು ಇಂದಿಗೂ ಮಾತನಾಡುತ್ತೇವೆ. ಆದರೆ ನಾವಿಬ್ಬರೂ ಪರಸ್ಪರ ಹೊಂದಾಣಿಕೆಯಾಗುವ ಜೀವನ ಜೊತೆಗಾರರಲ್ಲ ಎಂದು ನಮಗೆ ಅರಿವಾಗಿದೆ. ಏಕೆಂದರೆ ನಮ್ಮಿಬ್ಬರ ಭವಿಷ್ಯದ ಆಲೋಚನೆಗಳು ಮತ್ತು ದೃಷ್ಟಿಕೋನಗಳು ಸಂಪೂರ್ಣ ವಿಭಿನ್ನವಾಗಿವೆ,” ಎಂದು ಅವರು ತಿಳಿಸಿದ್ದಾರೆ.
ಮಗುವಿನ ವಿಚಾರವಾಗಿ ಭಿನ್ನಾಭಿಪ್ರಾಯ?:
ಗೌರವ್ ಖನ್ನಾ ಈ ಹಿಂದೆ ‘ಬಿಗ್ ಬಾಸ್ 19’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ಮನೆಯೊಳಗೆ ಮಗುವಿನ ವಿಚಾರವಾಗಿ ಮಾತನಾಡಿದ್ದ ಗೌರವ್, “ನನಗೆ ಮಗುವಾಗಬೇಕು ಎಂಬ ಆಸೆಯಿದೆ, ಆದರೆ ನನ್ನ ಪತ್ನಿ ಆಕಾಂಕ್ಷಾಗೆ ಇದರಲ್ಲಿ ಇಷ್ಟವಿಲ್ಲ. ಇದು ಪ್ರೇಮ ವಿವಾಹವಾದ್ದರಿಂದ ಅವಳು ಹೇಳಿದಂತೆ ನಾನು ಕೇಳಲೇಬೇಕು,” ಎಂದು ಹೇಳಿದ್ದರು.
ಇದೇ ವಿಚಾರವಾಗಿ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾದ ಬಗ್ಗೆ ಮಾತನಾಡಿದ್ದ ಆಕಾಂಕ್ಷಾ, “ತಾಯ್ತನವನ್ನು ಆಯ್ಕೆ ಮಾಡಿಕೊಳ್ಳದಿರುವುದು ನನ್ನ ವೈಯಕ್ತಿಕ ನಿರ್ಧಾರ. ಇದಕ್ಕೆ ನಾನು ಯಾರಿಗೂ ಸಮಜಾಯಿಷಿ ನೀಡುವ ಅಗತ್ಯವಿಲ್ಲ. ಗೌರವ್ ನನಗಿಂತ ವಯಸ್ಸಿನಲ್ಲಿ ಹಿರಿಯವನಾಗಿದ್ದು, ನನ್ನ ನಿರ್ಧಾರವನ್ನು ಗೌರವಿಸುವಷ್ಟು ಪ್ರಬುದ್ಧನಾಗಿದ್ದಾನೆ,” ಎಂದು ಜನವರಿ ತಿಂಗಳ ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡಿದ್ದರು.
ಆಕಾಂಕ್ಷಾ ಚಮೋಲಾ ಮತ್ತು ಗೌರವ್ ಖನ್ನಾ 2016 ರ ನವೆಂಬರ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೂರು ದಿನಗಳ ಕಾಲ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಇಷ್ಟು ವರ್ಷಗಳ ಕಾಲ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದ ಈ ಸ್ಟಾರ್ ಜೋಡಿ, ಈಗ ತಮ್ಮ 8 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿರುವುದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಪ್ರಸ್ತುತ ಆಕಾಂಕ್ಷಾ ಚಮೋಲಾ ಭಾಗವಹಿಸುತ್ತಿರುವ ‘ಲಾಕ್ ಅಪ್ ಸೀಸನ್ 2’ ಶೋನಲ್ಲಿ ರಾಮ್ ಕಪೂರ್, ಶಿವಾಂಗಿ ಜೋಶಿ, ಧೀರಜ್ ಧೂಪರ್, ಹರ್ಷದ್ ಚೋಪ್ಡಾ ಸೇರಿದಂತೆ ಹಲವು ಪ್ರಮುಖ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿದ್ದಾರೆ
Akanksha Chamola confirms her divorce with Gaurav Khanna on Lock Upp😱#lockupp2 #lockupp #GauravKhanna pic.twitter.com/Sqo81Qq0Hw
— 𝐌•✰ (@24X7BiggBoss) June 27, 2026
Reels incident ರೀಲ್ಸ್ ಹುಚ್ಚು – ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ!