Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > One rupee Offer ಮಾಲ್‌ನಲ್ಲಿ 1 ರೂಪಾಯಿ ಆಫರ್ ಸೃಷ್ಟಿಸಿದ ಹಂಗಾಮಾ: ಭಾರೀ ನೂಕುನುಗ್ಗಲು, ಸುಸ್ತಾದ ಪೊಲೀಸರು!
ದೇಶಪ್ರಮುಖ

One rupee Offer ಮಾಲ್‌ನಲ್ಲಿ 1 ರೂಪಾಯಿ ಆಫರ್ ಸೃಷ್ಟಿಸಿದ ಹಂಗಾಮಾ: ಭಾರೀ ನೂಕುನುಗ್ಗಲು, ಸುಸ್ತಾದ ಪೊಲೀಸರು!

Share
1 Min Read
SHARE

newsics.com | ನ್ಯೂಸಿಕ್ಸ್

​ಮಾಲಾಡ್ (ಮುಂಬೈ): ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಹಾಗೂ ಕೇವಲ 1 ರೂಪಾಯಿಗೆ ಬಟ್ಟೆ ನೀಡುವ ಆಫರ್‌ನಿಂದಾಗಿ ಮುಂಬೈನ ಮಾಲಾಡ್ ವೆಸ್ಟ್‌ನಲ್ಲಿರುವ ಇನ್ಫಿನಿಟಿ ಮಾಲ್‌ನಲ್ಲಿ ಶನಿವಾರ ಭಾರೀ ಜನಜಂಗುಳಿ ನಿರ್ಮಾಣವಾಗಿದ್ದು, ಕಾಲ್ತುಳಿತದಂತಹ ಪರಿಸ್ಥಿತಿ ಎದುರಾಗಿದೆ.

ಯುವ ಪೀಳಿಗೆ ಹಾಗೂ ಪ್ರಮುಖವಾಗಿ ‘ಜೆನ್-ಝಿ’ (Gen Z) ಗ್ರಾಹಕರನ್ನು ಸೆಳೆಯುವ ‘ನ್ಯೂಮಿ’ (NEWME) ಎಂಬ ಫ್ಯಾಶನ್ ಬ್ರ್ಯಾಂಡ್ ಹಮ್ಮಿಕೊಂಡಿದ್ದ ‘₹1 ಸೇಲ್’ ಪ್ರಚಾರವೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.

​ವೈರಲ್ ರೀಲ್ ತಂದ ಆಪತ್ತು: ಮಳಿಗೆ ಬಂದ್ ಮಾಡಿದ ಪೊಲೀಸರು

​ಮುಂಬೈನ ಇನ್ಫಿನಿಟಿ ಮಾಲ್‌ನ ನ್ಯೂಮಿ ಔಟ್‌ಲೆಟ್‌ನಲ್ಲಿ ಶನಿವಾರ ₹1 ಆಫರ್ ಇರಲಿದೆ ಎಂದು ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ವೈರಲ್ ಆಗಿತ್ತು. ಇದನ್ನು ನಂಬಿ ನಿನ್ನೆ ಮುಂಜಾನೆಯಿಂದಲೇ ಸಾವಿರಾರು ಗ್ರಾಹಕರು, ಮುಖ್ಯವಾಗಿ ಯುವಕ-ಯುವತಿಯರು ಮಾಲ್‌ನತ್ತ ಧಾವಿಸಿದ್ದಾರೆ. ನೋಡನೋಡುತ್ತಿದ್ದಂತೆ ಮಾಲ್‌ನ ಕಿರಿದಾದ ಪ್ರವೇಶ ದ್ವಾರ ಮತ್ತು ಕಾರಿಡಾರ್‌ಗಳಲ್ಲಿ ಜನಸ್ತೋಮ ಜಮಾಯಿಸಿದೆ.

​ಸ್ಥಳೀಯರ ಆತಂಕ:

ಮುಗಿಬಿದ್ದ ಜನರನ್ನು ನಿಯಂತ್ರಿಸಲು ಮಾಲ್‌ನ ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರೂ ಪರಿಸ್ಥಿತಿ ಕೈಮೀರಿತು. ಒಬ್ಬರ ಮೇಲೊಬ್ಬರು ನೂಕಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿತ್ತು.

ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಮಾಲ್‌ಗೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, ಅಂದು ಇಡೀ ದಿನ ನ್ಯೂಮಿ ಮಳಿಗೆಯನ್ನು ಮುಚ್ಚಿಸಲಾಯಿತು ಹಾಗೂ ಆಫರ್ ಅನ್ನು ರದ್ದುಗೊಳಿಸಲಾಗಿದೆ ಎಂದು ಅನೌನ್ಸ್ ಮಾಡಲಾಯಿತು. ಪೊಲೀಸರ ಸಮಯೋಚಿತ ಕ್ರಮಗಳಿಂದಾಗಿ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಲಿಲ್ಲ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Divorce on reality show ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಘೋಷಿಸಿದ ನಟಿ! ಆಕಾಂಕ್ಷಾ ಹೇಳಿದ್ದೇನು? ವಿಡಿಯೋ ನೋಡಿ

Anant Ambani: ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಅನಂತ ಅಂಬಾನಿ

TAGGED:#onerupeeoffer #mumbai #mall #stamede #police #news #newsics
Share This Article
Facebook Twitter Copy Link Print
Previous Article Anant Ambani: ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಅನಂತ ಅಂಬಾನಿ
Next Article Helicopter crash| ಸೌದಿ ಅರೇಬಿಯಾದ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ಮಂದಿ ಸಾವು

Popular Posts

Helicopter crash| ಸೌದಿ ಅರೇಬಿಯಾದ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ಮಂದಿ ಸಾವು

1 Min Read

One rupee Offer ಮಾಲ್‌ನಲ್ಲಿ 1 ರೂಪಾಯಿ ಆಫರ್ ಸೃಷ್ಟಿಸಿದ ಹಂಗಾಮಾ: ಭಾರೀ ನೂಕುನುಗ್ಗಲು, ಸುಸ್ತಾದ ಪೊಲೀಸರು!

1 Min Read

Anant Ambani: ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಅನಂತ ಅಂಬಾನಿ

1 Min Read

Divorce on reality show ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಘೋಷಿಸಿದ ನಟಿ! ಆಕಾಂಕ್ಷಾ ಹೇಳಿದ್ದೇನು? ವಿಡಿಯೋ ನೋಡಿ

3 Min Read

You Might Also Like

ವಿದೇಶದೇಶಪ್ರಮುಖ

Award to PM Modi ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ, ವಿಡಿಯೋ ನೋಡಿ

2 Min Read
ಕರ್ನಾಟಕಪ್ರಮುಖ

Reels incident ರೀಲ್ಸ್ ಹುಚ್ಚು – ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ!

1 Min Read
ಕರ್ನಾಟಕಪ್ರಮುಖ

CM DK warn ಅಮಲು ಪದಾರ್ಥ ಬೆರಕೆ ನಿಲ್ಲಿಸಿ, ಇಲ್ಲದಿದ್ದರೆ ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ- ಸಿಎಂ

3 Min Read
ಕರ್ನಾಟಕದೇಶಪ್ರಮುಖಮನರಂಜನೆ

Sharmila Mandre Engagement ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಜತೆ ಉಂಗುರ ಬದಲಿಸಿಕೊಂಡ ನಟಿ ಶರ್ಮಿಳಾ ಮಾಂಡ್ರೆ, ಮದುವೆ ಯಾವಾಗ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?