Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Reels incident ರೀಲ್ಸ್ ಹುಚ್ಚು – ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ!
ಕರ್ನಾಟಕಪ್ರಮುಖ

Reels incident ರೀಲ್ಸ್ ಹುಚ್ಚು – ದೇವರಾಯನದುರ್ಗ ಬೆಟ್ಟದಿಂದ ಬಿದ್ದ ಉಪನ್ಯಾಸಕ!

Share
1 Min Read
SHARE

newsics. com| ನ್ಯೂಸಿಕ್ಸ್
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುವ ಸಲುವಾಗಿ ಇಂದಿನ ಜನತೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಮಾಡುವ ಸಾಹಸ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ, ತುಮಕೂರಿನ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ದೇವರಾಯನದುರ್ಗ ಬೆಟ್ಟದಲ್ಲಿ ರೀಲ್ಸ್ ಮಾಡಲು ಹೋಗಿ ಕಾಲೇಜು ಉಪನ್ಯಾಸಕರೊಬ್ಬರು ಕಾಲು ಜಾರಿ ಬೆಟ್ಟದಿಂದ ಆಳವಾದ ಪ್ರಪಾತಕ್ಕೆ ಬಿದ್ದಿರುವ ಘಟನೆ ಇಂದು ನಡೆದಿದೆ.
ಗಾಯಗೊಂಡ ಉಪನ್ಯಾಸಕನನ್ನು ಶಿವಪ್ರಸಾದ್ ಎಂದು ಗುರುತಿಸಲಾಗಿದ್ದು, ಮೂಲತಃ ತುಮಕೂರು ತಾಲೂಕಿನ ಬಳ್ಳಾಪುರದವರಾದ ಇವರು, ಪ್ರಸ್ತುತ ಹಾಸನ ಜಿಲ್ಲೆಯ ಅರಸೀಕೆರೆಯ ಪಿಯು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಜೆಯ ಮಜಾ ಕಳೆಯಲು ದೇವರಾಯನದುರ್ಗ ಬೆಟ್ಟಕ್ಕೆ ಬಂದಿದ್ದ ಶಿವಪ್ರಸಾದ್, ಇಲ್ಲಿನ ಸುಂದರ ವಾತಾವರಣದಲ್ಲಿ ಸಾಮಾಜಿಕ ಮಾಧ್ಯಮಗಳಿಗಾಗಿ ‘ರೀಲ್ಸ್’ ವೀಡಿಯೊ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಅವರು ದೇವರಾಯನದುರ್ಗ ದೇವಾಲಯದ ಹಿಂಭಾಗದಲ್ಲಿರುವ ಅಪಾಯಕಾರಿ ಹಾಗೂ ಕಡಿದಾದ ಬಂಡೆಯೊಂದನ್ನು ಹತ್ತಿದ್ದಾರೆ. ಆದರೆ, ವೀಡಿಯೊ ಚಿತ್ರೀಕರಣದ ಭರದಲ್ಲಿ ಮೈಮರೆತಾಗ ಆಕಸ್ಮಿಕವಾಗಿ ಕಾಲು ಜಾರಿ, ಬೆಟ್ಟದ ಮೇಲಿಂದ ನೂರಾರು ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು:

ಶಿವಪ್ರಸಾದ್ ಅವರು ಬೆಟ್ಟದಿಂದ ಕೆಳಗೆ ಬೀಳುತ್ತಿದ್ದಂತೆ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಘಟನೆಯನ್ನು ಕಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಅತ್ಯಂತ ಶ್ರಮವಹಿಸಿ ಪ್ರಪಾತಕ್ಕೆ ಇಳಿದ ಸ್ಥಳೀಯರು, ತೀವ್ರವಾಗಿ ಗಾಯಗೊಂಡಿದ್ದ ಶಿವಪ್ರಸಾದ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.

Share This Article
Facebook Twitter Copy Link Print
Previous Article CM DK warn ಅಮಲು ಪದಾರ್ಥ ಬೆರಕೆ ನಿಲ್ಲಿಸಿ, ಇಲ್ಲದಿದ್ದರೆ ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ- ಸಿಎಂ
Next Article Award to PM Modi ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ, ವಿಡಿಯೋ ನೋಡಿ

Popular Posts

Helicopter crash| ಸೌದಿ ಅರೇಬಿಯಾದ ಅರಾಮ್ಕೋ ಹೆಲಿಕಾಪ್ಟರ್ ಪತನ; 14 ಮಂದಿ ಸಾವು

1 Min Read

One rupee Offer ಮಾಲ್‌ನಲ್ಲಿ 1 ರೂಪಾಯಿ ಆಫರ್ ಸೃಷ್ಟಿಸಿದ ಹಂಗಾಮಾ: ಭಾರೀ ನೂಕುನುಗ್ಗಲು, ಸುಸ್ತಾದ ಪೊಲೀಸರು!

1 Min Read

Anant Ambani: ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಅನಂತ ಅಂಬಾನಿ

1 Min Read

Divorce on reality show ರಿಯಾಲಿಟಿ ಶೋನಲ್ಲೇ ಡಿವೋರ್ಸ್ ಘೋಷಿಸಿದ ನಟಿ! ಆಕಾಂಕ್ಷಾ ಹೇಳಿದ್ದೇನು? ವಿಡಿಯೋ ನೋಡಿ

3 Min Read

You Might Also Like

ವಿದೇಶದೇಶಪ್ರಮುಖ

Award to PM Modi ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ, ವಿಡಿಯೋ ನೋಡಿ

2 Min Read
ಕರ್ನಾಟಕಪ್ರಮುಖ

CM DK warn ಅಮಲು ಪದಾರ್ಥ ಬೆರಕೆ ನಿಲ್ಲಿಸಿ, ಇಲ್ಲದಿದ್ದರೆ ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ- ಸಿಎಂ

3 Min Read
ಕರ್ನಾಟಕದೇಶಪ್ರಮುಖಮನರಂಜನೆ

Sharmila Mandre Engagement ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಜತೆ ಉಂಗುರ ಬದಲಿಸಿಕೊಂಡ ನಟಿ ಶರ್ಮಿಳಾ ಮಾಂಡ್ರೆ, ಮದುವೆ ಯಾವಾಗ?

2 Min Read
ಕರ್ನಾಟಕದೇಶಪ್ರಮುಖ

Modi cabinet reshuffle ಮುಂಗಾರು ಅಧಿವೇಶನಕ್ಕೂ ಮುನ್ನ ಮೋದಿ ಸಂಪುಟ ಸರ್ಜರಿ, ಬಿಜೆಪಿಯಲ್ಲೂ ಬದಲಾವಣೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?