Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Donation scam ಶ್ರೀರಾಮನಿಗರ್ಪಿಸಿದ ಚಿನ್ನಾಭರಣ, ಬೆಳ್ಳಿ ಇಟ್ಟಿಗೆ ಸುರಕ್ಷಿತ ಎಂದ ಟ್ರಸ್ಟ್
ಪ್ರಮುಖದೇಶ

Donation scam ಶ್ರೀರಾಮನಿಗರ್ಪಿಸಿದ ಚಿನ್ನಾಭರಣ, ಬೆಳ್ಳಿ ಇಟ್ಟಿಗೆ ಸುರಕ್ಷಿತ ಎಂದ ಟ್ರಸ್ಟ್

Share
2 Min Read
SHARE

newsics.com | ನ್ಯೂಸಿಕ್ಸ್

ಅಯೋಧ್ಯೆ: ರಾಮ ಮಂದಿರದ ದೇಣಿಗೆ ಹಾಗೂ ಭಕ್ತರು ನೀಡಿದ ವಸ್ತುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ಟ್ರಸ್ಟ್ ತೆರೆ ಎಳೆದಿದ್ದು, ಪ್ರಭು ಶ್ರೀರಾಮನಿಗೆ ಅರ್ಪಿಸಲು ಭಕ್ತರು ವೈಯಕ್ತಿಕವಾಗಿ ಟ್ರಸ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬೆಳ್ಳಿ ಇಟ್ಟಿಗೆಗಳು, ಚಿನ್ನಾಭರಣಗಳು ಸುರಕ್ಷಿತವಾಗಿವೆ.

ಅಲ್ಲದೆ, ಪ್ರತಿಯೊಂದು ಕಾಣಿಕೆಯೂ ಸಂಪೂರ್ಣ ಲೆಕ್ಕಪತ್ರದ ಅಡಿಯಲ್ಲೇ ಇದ್ದು, ಭಕ್ತರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ದೇಶದ ಕೋಟ್ಯಂತರ ರಾಮಭಕ್ತರಿಗೆ ಟ್ರಸ್ಟ್ ಭರವಸೆ ನೀಡಿದೆ.

ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದುರದೃಷ್ಟಕರ ಪರಿಸ್ಥಿತಿಗಳು ಮರುಕಳಿಸದಂತೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಟ್ರಸ್ಟ್ ಹೇಳಿದೆ.

ರಾಜೀನಾಮೆ ಶೀಘ್ರ ಅಂಗೀಕಾರ:

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಶೀಘ್ರ ಅಂಗೀಕರಿಸಲಾಗುವುದು.

‘ಕಳೆದ ಕೆಲವು ದಿನಗಳಿಂದ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ವರದಿಯಾಗುತ್ತಿರುವ ಘಟನೆಗಳಿಂದ ನಮಗೆ ತೀವ್ರ ಆಘಾತವಾಗಿದೆ, ನೋವಾಗಿದೆ ಮತ್ತು ಆಳವಾದ ಸೌಹಾರ್ದತೆಗೆ ಧಕ್ಕೆಯಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಲು ಮತ್ತು ರಾಮಭಕ್ತರಲ್ಲಿ ವಿಶ್ವಾಸ ಮೂಡಿಸಲು ನಾವು ಬದ್ಧರಾಗಿದ್ದೇವೆ’ ಎಂದು ಟ್ರಸ್ಟ್‌ ಸ್ಪಷ್ಟಪಡಿಸಿದೆ.

ರಾಮಮಂದಿರ ಆಂದೋಲನ ಹಾಗೂ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆ ಪತ್ರಗಳು ಈಗಾಗಲೇ ಟ್ರಸ್ಟ್ ಕೈಸೇರಿವೆ. ಮುಂಬರುವ ಟ್ರಸ್ಟ್‌ನ ತುರ್ತು ಸಭೆಯಲ್ಲಿ ಈ ರಾಜೀನಾಮೆಗಳ ಅಂಗೀಕಾರ ಹಾಗೂ ಮುಂದಿನ ಪದಾಧಿಕಾರಿಗಳ ನೇಮಕದ ಕುರಿತು ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Ayodhya, Uttar Pradesh: Shri Ram Janmabhoomi Teerth Kshetra (Trust) Ayodhya issues a press statement; says, “We are shocked, hurt, and deeply saddened by the incidents reported over the past few days regarding the Shri Ram Mandir (Ayodhya). We are committed to ensuring a fair… pic.twitter.com/nkmOImycYT

— ANI (@ANI) June 27, 2026

 

 

High court order| ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ಬ್ಯಾಂಕ್​ ವಿಧಿಸುವ ದಂಡಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ :​ ಹೈಕೋರ್ಟ್

TAGGED:#ayodhya#Ayodhya #Ram mandir #resign #robbery #Uttar Pradesh
Share This Article
Facebook Twitter Copy Link Print
Previous Article Strawberry Moon ಆಕಾಶದಲ್ಲಿ ಜೂನ್ ಅಂತ್ಯದ ವಿಸ್ಮಯ, ಶೀಘ್ರದಲ್ಲೇ ಕಣ್ಮನ ಸೆಳೆಯಲಿದೆ ಅಪರೂಪದ ‘ಸ್ಟ್ರಾಬೆರಿ ಮೂನ್’!
Next Article Rain info ಮುಂದಿನ ಆರು ದಿನ ರಾಜ್ಯಾದ್ಯಂತ ಭಾರೀ ಮಳೆ, ಹಲವೆಡೆ ಯೆಲ್ಲೋ ಅಲರ್ಟ್

Popular Posts

Rain info ಮುಂದಿನ ಆರು ದಿನ ರಾಜ್ಯಾದ್ಯಂತ ಭಾರೀ ಮಳೆ, ಹಲವೆಡೆ ಯೆಲ್ಲೋ ಅಲರ್ಟ್

1 Min Read

Donation scam ಶ್ರೀರಾಮನಿಗರ್ಪಿಸಿದ ಚಿನ್ನಾಭರಣ, ಬೆಳ್ಳಿ ಇಟ್ಟಿಗೆ ಸುರಕ್ಷಿತ ಎಂದ ಟ್ರಸ್ಟ್

2 Min Read

Strawberry Moon ಆಕಾಶದಲ್ಲಿ ಜೂನ್ ಅಂತ್ಯದ ವಿಸ್ಮಯ, ಶೀಘ್ರದಲ್ಲೇ ಕಣ್ಮನ ಸೆಳೆಯಲಿದೆ ಅಪರೂಪದ ‘ಸ್ಟ್ರಾಬೆರಿ ಮೂನ್’!

2 Min Read

Strange crime ಕೊಲೆ ಮಾಡುವುದು ಹೇಗೆಂದು ಆನ್‌ಲೈನ್‌ನಲ್ಲಿ ಕಲಿತು ಒಂದೇ ಕುಟುಂಬದ ನಾಲ್ವರ ಬರ್ಬರ ಹ*ತ್ಯೆ

3 Min Read

You Might Also Like

ಕರ್ನಾಟಕಪ್ರಮುಖ

Polio Day ಐದು ವರ್ಷದೊಳಗಿನ ಮಕ್ಕಳಿಗೆ ಇಂದು ತಪ್ಪದೆ ಪೋಲಿಯೊ‌ ಲಸಿಕೆ ಹಾಕಿಸಿ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 28-06-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಕರ್ನಾಟಕದೇಶಪ್ರಮುಖ

High court order| ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ಬ್ಯಾಂಕ್​ ವಿಧಿಸುವ ದಂಡಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ :​ ಹೈಕೋರ್ಟ್

2 Min Read
ದೇಶಪ್ರಮುಖ

Adventure trip SSLC ಬಾಲಕಿ ಜತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿ ಮಾಡಿದ್ದೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?