newsics.com | ನ್ಯೂಸಿಕ್ಸ್
ಬೆಂಗಳೂರು: ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ನಿಕಟ ಸಂಬಂಧಿ (ಬಾಮೈದ), ಬೆಳಗಾವಿ ವಲಯದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲಿನ ಜಾರಿ ನಿರ್ದೇಶನಾಲಯದ (ED) ಸುದೀರ್ಘ ದಾಳಿ ಮುಕ್ತಾಯಗೊಂಡಿದೆ.
ಕಾರ್ಯಾಚರಣೆ ಬೆನ್ನಲ್ಲೇ ಇಡಿ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಿಕ್ಕಿರುವ ಅಕ್ರಮ ಸಂಪತ್ತಿನ ಪಟ್ಟಿಯನ್ನು ನೋಡಿ ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ದಂಗಾಗಿದ್ದಾರೆ.
3 ನಗರಗಳ 14 ಕಡೆ ದಾಳಿ: ಸಿಕ್ಕಿದ್ದು 13.3 ಕೋಟಿ ಮೌಲ್ಯದ ಆಸ್ತಿ!
ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ನಗರಗಳ ಒಟ್ಟು 14 ಪ್ರಮುಖ ನೆಲೆಗಳ ಮೇಲೆ ಇಡಿ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿದ್ದವು. ಈ ಇಡೀ ಕಾರ್ಯಾಚರಣೆಯಲ್ಲಿ ಸರಿಸುಮಾರು 13.3 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜಪ್ತಿಯಾದ ಸಂಪತ್ತಿನ ವಿವರ ಇಲ್ಲಿದೆ:
ನಗದು ಹಣ: ರೂ. 5.5 ಕೋಟಿ ನಗದು ರೂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿನ್ನದ ಒಡವೆಗಳು: ರೂ. 7.8 ಕೋಟಿ ಮೌಲ್ಯದ ಭಾರಿ ಪ್ರಮಾಣದ ಸ್ವರ್ಣಾಭರಣ ಪತ್ತೆಯಾಗಿದೆ.
ವಿದೇಶಿ ಹಣ: ರೂ. 3.3 ಲಕ್ಷ ಮೌಲ್ಯದ ವಿವಿಧ ದೇಶಗಳ ಕರೆನ್ಸಿ ಸಿಕ್ಕಿದೆ.
ಇದರೊಂದಿಗೆ, ಬೇನಾಮಿ ಹೆಸರಿನಲ್ಲಿ ಮಾಡಲಾದ ಹೂಡಿಕೆಗಳ ಬಾಂಡ್‌ಗಳು, ಐಷಾರಾಮಿ ಸೈಟು-ಮನೆಗಳ ಆಸ್ತಿ ಪತ್ರಗಳು ಮತ್ತು ಹಣಕಾಸಿನ ವಹಿವಾಟಿನ ಕ್ಯಾಶ್ ಬುಕ್‌ಗಳನ್ನು ಇಡಿ ತನ್ನ ಸುಪರ್ದಿಗೆ ಪಡೆದಿದೆ.
ಭ್ರಷ್ಟಾಚಾರದ ಸೀಕ್ರೆಟ್ ‘ಡೈರಿ’
ಈ ಇಡೀ ದಾಳಿಯಲ್ಲಿ ಇಡಿ ಅಧಿಕಾರಿಗಳ ಕೈಗೆ ಸಿಕ್ಕಿರುವ ಅತ್ಯಂತ ಪ್ರಮುಖ ಸಾಕ್ಷ್ಯವೆಂದರೆ ಅದು ಒಂದು ರಹಸ್ಯ ‘ಡೈರಿ’. ಈ ಡೈರಿಯಲ್ಲಿ ಯಾವ ಯಾವ ವೈನ್ ಶಾಪ್ ಹಾಗೂ ಬಾರ್ ಮಾಲೀಕರಿಂದ ಪ್ರತಿ ತಿಂಗಳು ಎಷ್ಟು ಕಮಿಷನ್ ಮತ್ತು ಮಾಮೂಲಿ ವಸೂಲಿ ಮಾಡಲಾಗುತ್ತಿತ್ತು ಎಂಬ ಕರಾಳ ಸತ್ಯವನ್ನು ಸವಿಸ್ತಾರವಾಗಿ ಬರೆದಿಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಹೊಸ ಲೈಸೆನ್ಸ್ ನೀಡಲು ಹಾಗೂ ಹಳೆಯ ಪರವಾನಗಿ ನವೀಕರಿಸಲು (Renew) ದೊಡ್ಡ ಮಟ್ಟದ ಲಂಚದ ದಂಧೆ ನಡೆದಿರುವುದು ಇದರ ಮೂಲಕ ಸಾಬೀತಾಗಿದೆ. ಈ ರೀತಿ ಬಂದ ಕಪ್ಪು ಹಣವನ್ನು ಐಷಾರಾಮಿ ಬದುಕಿಗೆ, ಬೇನಾಮಿ ಹೂಡಿಕೆಗಳಿಗೆ ಬಳಸಲಾಗಿದೆ ಎಂದು ಇಡಿ ತಿಳಿಸಿದೆ.
ಲೋಕಾಯುಕ್ತ ಎಫ್‌ಐಆರ್ (FIR)ನಿಂದ ಆಪತ್ತು
ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳಾದ ಜಗದೀಶ್ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ. ಮಂಜುನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇದನ್ನೇ ಮೂಲವಾಗಿಟ್ಟುಕೊಂಡ ಇಡಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) 2002ರ ಸೆಕ್ಷನ್ 17ರ ಅಡಿಯಲ್ಲಿ ಈ ಬೃಹತ್ ರೇಡ್ ನಡೆಸಿತ್ತು. ಅಧಿಕಾರಿಗಳು ತಮ್ಮ ಕುಟುಂಬದವರು ಮತ್ತು ಆಪ್ತರ ಬ್ಯಾಂಕ್ ಖಾತೆಗಳನ್ನು ಬಳಸಿ ವ್ಯವಸ್ಥಿತವಾಗಿ ಕೋಟ್ಯಂತರ ರೂಪಾಯಿ ಲಂಚದ ಹಣವನ್ನು ವರ್ಗಾವಣೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ರಾಜ್ಯ ಸಂಪುಟದ ಪ್ರಭಾವಿ ಸಚಿವರ ಕುಟುಂಬಸ್ಥರೇ ಈ ಜಾಲದಲ್ಲಿ ಸಿಲುಕಿರುವುದರಿಂದ ಸರ್ಕಾರದ ಮೇಲೂ ಇದರ ನೆರಳು ಬಿದ್ದಿದ್ದು, ತನಿಖೆ ಮುಂದುವರಿದಿರುವುದರಿಂದ ಇಲಾಖೆಯ ಇನ್ನೂ ಹಲವು ಹಿರಿಯ ತಿಮಿಂಗಿಲಗಳ ಹೆಸರು ಹೊರಬರುವ ಸಾಧ್ಯತೆಯಿದೆ.
ED, Bengaluru Zonal Office has conducted search operations under PMLA, 2002 on 24.06.2026 at 14 premises spread across Bangalore, Mysuru and Belagavi in Karnataka on allegation of systemic corruption in state excise department and therefore, amassing of wealth by govt officials.… pic.twitter.com/jtG7T9a3pB
— ED (@dir_ed) June 25, 2026
Siya – Kethan ಉದ್ಯಮಿ ಕೇತನ್ ಕೊ*ಲೆ ಪ್ರಕರಣ: ಪ್ರತಿದಿನ ಹೊಸ ಕಥೆ, ಹ*ತ್ಯೆಗೆ ನಿಜ ಕಾರಣ ಬಹಿರಂಗ