Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 26-06-2026, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 26-06-2026, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Share
4 Min Read
SHARE

newsics.com | ನ್ಯೂಸಿಕ್ಸ್

ಶುಭೋದಯ

ಇಂದಿನ ಪಂಚಾಂಗ | ರಾಶಿ ಭವಿಷ್ಯ

26-06-2026, ಶುಕ್ರವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಶುಕ್ಲಪಕ್ಷದ ದ್ವಾದಶಿ.

* ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ

* ಮೊಹರಂ

* ಅಂತಾರಾಷ್ಟ್ರೀಯ ಮಾದಕದ್ರವ್ಯ ದುರುಪಯೋಗ ವಿರೋಧಿ ದಿನ

—

ರಾಹು ಕಾಲ 10:46 – 12:23

ಯಮಗಂಡ ಕಾಲ 15:35 – 17:12

ಗುಳಿಕ ಕಾಲ 07:33 – 09:10

—

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಸಿದ್ಧ, ಕರಣ : ಬವ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 47 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:46 – 12:23, ಯಮಗಂಡ ಕಾಲ 15:35 – 17:12, ಗುಳಿಕ ಕಾಲ 07:33 – 09:10.

========

ಇಂದಿನ ರಾಶಿ ಭವಿಷ್ಯ

ಮೇಷ

ಉಕ್ಕಿ ಬರುವ ಪ್ರವಾಹವನ್ನು ತಡೆಯಲು ಅಲ್ಪ ಶಕ್ತಿ ಸಾಲದು. ಅಧಿಕಾರದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಇದರಿಂದ ನಿಮ್ಮ ಕೆಳಗಿನವರು ಸಿಟ್ಟಗೊಂಡಾರು.‌ ನಿಮ್ಮ ಕೆಲಸದ ಮೇಲೆ ಇದರ ಪರಿಣಾಮವಿರಲಿದೆ. ನಿಮ್ಮ ನಂಬಿ ಹಣವನ್ನು ಕೊಡಬಹುದು. ಅದನ್ನು ಉಳಿಸಿಕೊಳ್ಳಿ. ಸರಿಯಾಗಿ ಸಮಯವನ್ನು ಬಳಸಿ. ಇನ್ನೊಬ್ಬರ ವಸ್ತುವನ್ನು ಕೇಳಿ ಪಡೆಯಿರಿ. ಆಪ್ತರ ಮಾತಿನಿಂದ ನಿಮ್ಮ ಕೆಲವು ಅಭಿಪ್ರಾಯವು ಬದಲಾಗುವುದು.

ವೃಷಭ

ತಂದೆಯಿಂದ ಬರಬಹುದಾದ ಧನವು ವಿಳಂಬವಾಗಲಿದೆ. ಎಂದೋ ಆಗಬೇಕಿದ್ದ ಕಾರ್ಯ ಕೊನೆಗೂ ತಾನಾಗಿಯೇ ಘಟಿಸಿದ್ದು, ಖುಷಿ ಇಲ್ಲದೇ ಬೇಸರವೂ ಇಲ್ಲದೇ ಯಥಾಸ್ಥಿತಿಯಲ್ಲಿ ಇರುವಿರಿ. ನಿಮ್ಮ ವಿವಾಹವನ್ನು ಮಾಡಿಸಬೇಕೆಂಬ ಪ್ರಯತ್ನವು ವ್ಯರ್ಥವಾದೀತು. ರಾಜಕಾರಿಣಿಗಳಿಗೆ ಒಳ್ಳೆಯ ಬೆಂಬಲ ಸಿಗಲಿದೆ‌. ಅನ್ಯ ವ್ಯಕ್ತಿಯ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸೌಂದರ್ಯವರ್ಧನೆಗೆ ಬೇಕಾದ ಸಮಯವನ್ನು ಕೊಡುವಿರಿ. ಸ್ಪರ್ಧಾತ್ಮಕವಾಗಿ ನೀವು ಕ್ರಿಯಾಶೀಲತೆಯನ್ನು ತೋರಿಸುವಿರಿ.

ಮಿಥುನ

ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡಿಕೊಳ್ಳುವರು. ಯಾರಿಗೂ ಕೇಡು ಬಯಸದೇ ನಿಮ್ಮಷ್ಟಕ್ಕೆ ನೀವಿರಿ. ಬಂಧುಗಳು ನಿಮ್ಮನ್ನು ಪ್ರೀತಿಸಬಹುದು. ಇಂದು ಹಣದ ಅವಶ್ಯಕತೆಯಿದ್ದು ಸಹೋದರನನ್ನು ಕೇಳುವಿರಿ. ನೂತನ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸುವಿರಿ. ಆಪ್ತರಿಂದ ಹಣದ ವಿಚಾರದಲ್ಲಿ ಮೋಸ ಹೋಗುವಿರಿ. ಕಛೇರಿಯಲ್ಲಿ ಇಂದು ನೀವು ಸ್ವತಂತ್ರರು. ಮನೋರಥವನ್ನು ಈಡೇರಿಸಿಕೊಳ್ಳುವುದು ನಿಮಗೆ ಕಷ್ಟವಾಗುವುದು. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ.

ಕರ್ಕಾಟಕ

ನಿಮ್ಮ ಮಾತಿನ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ಆಮೇಲೆ ಅದಕ್ಕೆ ಬೆಲೆಯೇ ಇಲ್ಲದಂತಾದೀತು. ಕೃಷಿಯ ಚಟುವಟಿಕೆಯಲ್ಲಿ ತೊಡಗುವ ಮನಸ್ಸಾದೀತು. ನಿಮ್ಮ ಮೇಲಿರುವ ದೂರನ್ನು ತಳ್ಳಿಹಾಕುವಿರಿ. ಬೇವರಿನ ಹನಿಯ ಮಹತ್ತ್ವ ಗೊತ್ತಾಗುವ ದಿನ ಇಂದು. ಉದ್ಯೋಗದಲ್ಲಿ ಸಿಗುವ ಪದೋನ್ನತಿಯು ಸಿಗುವುದು ತಪ್ಪಲಿದೆ. ಆಪ್ತರ ಜೊತೆ ಈ ಕುರಿತು ಸಮಾಲೋಚನೆ ಮಾಡುವಿರಿ. ನಿಮ್ಮ ಮಾತುಗಳಿಂದ ನೋವಾಗಲಿದೆ. ಹೇಳಬೇಕಾದುದನ್ನು ನೇರವಾಗಿ ಹೇಳಿ.

ಸಿಂಹ

ಇಂದು ಸ್ನೇಹಿತರ ಜೊತೆ ಹೋಗಬೇಕಿದ್ದ ನಿಮ್ಮ ಪ್ರಯಾಣವು ತುರ್ತು ಕಾರ್ಯದಿಂದ ರದ್ದಾಗಬಹುದು. ಬಹಳ ಆಯಾಸವಾದರೂ ಒತ್ತಡಗಳಿದ್ದರೂ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಅಪರಿಚಿತ ದೂರವಾಣಿಯ ಕರೆಯಿಂದ ಲಾಭದಾಯಕವಾದ ಕೆಲಸವು ಸಿಗಬಹುದು. ಸರ್ಕಾರಿ ಕೆಲಸಗಳು ನಿಧಾನವಾಗಲಿದೆ. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಿದೇಶದವರ ಜೊತೆ ನಿಮ್ಮ ವ್ಯವಹಾರವು ನಡೆಯುವುದು.

ಕನ್ಯಾ

ಹಣ ಸಂಪಾದನೆಗೆ ದೂರಪ್ರಯಾಣ ಮಾಡಬೇಕಾದೀತು. ಮಾಡಲು ತುಂಬ ಕೆಲಸಗಳಿದ್ದು ಯಾವುದನ್ನು ಮಾಡುವುದು ಎಂಬ ಗೊಂದಲ ಸೃಷ್ಟಿಯಾಗಬಹುದು. ಹಿರಿಯರು ನಿಮ್ಮನ್ನು ಪ್ರಶಂಸಿಸುವರು. ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಬರಬೇಕಾದ ಹಣಕ್ಕಾಗಿ ಕಾಯುವಿರಿ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾದೀತು. ಮಾನಸಿಕ ತೊಳಲಾಟವನ್ನು ಪ್ರಯತ್ನಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ.

ತುಲಾ

ಪ್ರಭಾವಿ ಜನರ ಭೇಟಿಯಿಂದ ಹೊಸ ದಿಕ್ಕು ಲಭಿಸುವುದು. ಆಸ್ತಿ ಖರೀದಿಯ ಬಗ್ಗೆ ಹೆಚ್ಚಿನ ಒಲವಿರಲಿದೆ‌. ಭೂಮಿಯನ್ನು ಪಡೆಯುವ ತವಕದಲ್ಲಿ ವ್ಯವಹಾರವನ್ನು ಸರಿಯಾಗಿ ನೋಡಿಕೊಳ್ಳಿ. ಮನೆ ಅಥವಾ ಭೂಮಿಯನ್ನು ಖರೀದಿ ಮಾಡುವಿರಿ. ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಗೆ ಕೊಡುಗೆಯಾಗಿ ನೀಡುವಿರಿ. ವಿದೇಶ ಪ್ರವಾಸದ ಕನಸು ಕಾಣುತ್ತಿರುವವರು ನನಸು ಮಾಡಿಕೊಳ್ಳಬಹುದಾಗಿದೆ. ನಿಮ್ಮ ಉಪಕಾರಕ್ಕೆ ಪ್ರತ್ಯುಪಕಾರವು ಸಿಗದೇ ಇರಬಹುದು.

ವೃಶ್ಚಿಕ

ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಅನೇಕ‌ ಅನುಮಾನಗಳಿಗೆ ಕಾರಣವಾಗಬಹುದು. ಸ್ತ್ರೀಯರು ಮಂಗಳ‌ ಕಾರ್ಯಗಳಲ್ಲಿ ತೊಡಗುವರು. ಮನೆ ಬಳಕೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಹಣದ ವಿಚಾರದಲ್ಲಿ ನಿಮಗಿಂದು ನಿರಾಸಕ್ತಿ ಬರಬಹುದು. ಕಛೇರಿಯ ಜವಾಬ್ದಾರಿಯಲ್ಲಿ ಮಧ್ಯಪ್ರವೇಶದಿಂದ ಇತರರಿಗೆ ಅಸಹನೆ. ಮೇಲ್ನೋಟಕ್ಕೆ ಯಾವುದನ್ನೂ ತೀರ್ಮಾನ ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸುವರು.

ಧನುಸ್ಸು

ಪರರ ಕಷ್ಟಗಳಗೆ ಸ್ಪಂದಿಸಲು ಆಗದೇ ಇರಬಹುದು. ಆಗಿಹೋದ ವಿಷಯವನ್ನು ಮತ್ತೆ ನೆನಪಿಸಿಕೊಂಡು ದಾಂಪತ್ಯದಲ್ಲಿ ಜಗಳವಾಗಬಹುದು. ಶತ್ರುಗಳಿಂದ ಮನೆಯಲ್ಲಿ ಕಿರಿಕಿರಿಯಾಗಲಿದೆ. ಮಕ್ಕಳಿಂದ ನಿಮಗೆ ಅಶುಭವಾರ್ತೆಯು ಬರಲಿದೆ. ಆರ್ಥಿಕಸ್ಥಿತಿಯನ್ನು ಊರ್ಜಿತಗೊಳಿಸಲು ಬಹಳ ಶ್ರಮ ಪಡುವಿರಿ. ಪ್ರೇಮವನ್ನು ಒಪ್ಪಿಕೊಳ್ಳಲಾರಿರಿ. ತಂತ್ರಜ್ಞರಿಗೆ ಉನ್ನತಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ. ನೂತನ ವಾಹನದಲ್ಲಿ ಸಂಚರಿಸುವಿರಿ. ಅತಿಯಾಗಿ ಮಾತಾನಾಡಿ ಗುಟ್ಟನ್ನು ರಟ್ಟು ಮಾಡುವಿರಿ.

ಮಕರ

ವೃತ್ತಿಕ್ಷೇತ್ರದಲ್ಲಿ ಸಹೋದ್ಯೋಗಿಯಿಂದ ತೊಂದರೆ ಬರಬಹುದು. ಮಾತನಾಡಲು ಬಹಳ ಮುಜುಗರವಾದೀತು. ನಿಮಗೆ ಬೇಕಾದುದನ್ನೇ ಮಾಡಿಸಿಕೊಳ್ಳುವ ಹಠದ ಸ್ವಭಾವ ಹೆಚ್ಚಿರುವುದು. ಹೆಚ್ಚಿನ ಜವಾಬ್ದಾರಿಗಳು ಸಿಗಬಹುಸು. ನಿಂತ ಕೆಲಸಕ್ಕೆ ಚಾಲನೆ ಸಿಗಲಿದೆ. ಓಡಾಟದಿಂದ ದೇಹಕ್ಕೆ ಆಯಾಸವಾಗಬಹುದು. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ವಿದ್ಯಾರ್ಥಿಗಳಿಗೆ ಅನುಕಂಪ ಬೇಕಾದೀತು. ಎಲ್ಲರ ಮೇಲೂ ಅನುಮಾನ ಪಡುವ ದುರಭ್ಯಾಸವು ಬೆಳೆಯಬಹುದು.

ಕುಂಭ

ನಿಮ್ಮ ಕಾರ್ಯಕ್ಕೆ ಉತ್ತಮವಾದ ಯಶಸ್ಸು ಸಿಗಲಿದೆ‌. ನಿಮ್ಮನ್ನು ಪರಿಚಿತರು ಮಾತನಾಡಿಸದೇ ಇರಬಹುದು. ಕೃಷಿಕರು ಇಂದು ತಮ್ಮ ಕಾರ್ಯದಲ್ಲಿ ಮಂದಗತಿಯನ್ನು ಕಾಣಬಹುದಾಗಿದೆ. ಮುಕ್ತವಾದ ಮಾತುಗಳು ನಿಮ್ಮನ್ನು ಹಗುರಾಗಿಸುವುದು. ಭೂಮಿಯ ಮೇಲೆ ಹೂಡಿಕೆ ಮಾಡಲು ಸಲಹೆಗಳು ಬರಬಹುದು. ನಿಮ್ಮನ್ನು ನಂಬಿಸಿ ಕೆಲಸ ಮಾಡಿಸಿಕೊಳ್ಳುವರು. ಪರಿಚಿತರ ಮೂಲಕ ನಿಮಗೆ ಅಪರಿಚಿತರ ಸಹಾಯ ದೊರೆಯುವುದು.

ಮೀನ

ವ್ಯಾಪಾರದಿಂದ ಅಧಿಕ ಹಣವು ಉಳಿತಾಯವಾಗಲು ಚಿಂತನೆ ನಡೆಸುವಿರಿ. ಕೆಲಸವನ್ನು ಮಾಡಿಸಿಕೊಳ್ಳಲು ಜಾಣ್ಮೆಯಿಂದ ಮಾತನಾಡುವ ಅತಿ. ವಾಹನ ಚಾಲನೆ ಐಚ್ಛಿಕವಾಗಿರಲಿ. ವಿದ್ಯಾರ್ಥಿಗಳು ಮುಂದಿನ ಓದಿಗೆ ಬೇಕಾದ ತಯಾರಿ ನಡೆಸುವರು. ಉದ್ಯೋಗದಲ್ಲಿ ಜವಾಬ್ದಾರಿ ಸ್ಥಾನವವನ್ನು ಪಡೆಯುವಿರಿ. ಯಾವುದನ್ನೇ ಆದರೂ ನಿಷ್ಠೆಯಿಂದ ಕಾರ್ಯ ಮಾಡುವಿರಿ. ಮನೆಯ ಹಿರಿಯರ ಬಗ್ಗೆ ಪ್ರೀತಿ ಹೆಚ್ಚಾಗಬಹುದು. ಸಂಗಾತಿಯ ಜತೆ ಭಿನ್ನಮತವು ಬರಬಹುದು.

ಪ್ರತಿದಿನ 2 ಲವಂಗ ತಿನ್ನಿ ಈ ಆರೋಗ್ಯ ಸಮಸ್ಯೆಯೇ ಬರಲ್ಲ

 

TAGGED:#almanac #zodiac #prediction #26-06-2026 #friday #horoscope #planetary #positions #news #newsics
Share This Article
Facebook Twitter Copy Link Print
Previous Article ED raid ಸಚಿವ ಸತೀಶ್ ಬಾಮೈದನ ಮೇಲಿನ ED ದಾಳಿ: 13.3 ಕೋಟಿ ಆಸ್ತಿ‌ ಜಪ್ತಿ!
Next Article Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?

Popular Posts

Bomb blast ಕನಕಪುರ ಫಾರ್ಮ್‌ಹೌಸ್ ಬಳಿ ನಾಡಬಾಂಬ್ ಸ್ಫೋಟ: ವಕೀಲನಿಗೆ ಗಾಯ

1 Min Read

Cancer medicine ಭಾರತಕ್ಕೆ ಎಂಟ್ರಿ ಕೊಟ್ಟ ಅತ್ಯಾಧುನಿಕ ಕ್ಯಾನ್ಸರ್ ಔಷಧ

2 Min Read

Ayodhye Ramamandir ರಾಮಮಂದಿರ ದೇಣಿಗೆ ಲೂಟಿ: ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ಟ್ರಸ್ಟಿ ಮಿಶ್ರಾ ರಾಜೀನಾಮೆ

1 Min Read

Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ನಾನೇ ಸೀರೆ ಕತ್ತರಿಸಿ ವೈಶಾಕ್ ಮೃತದೇಹ ಕೆಳಗಿಳಿಸಿದ್ದೆ: ನಟಿ ಕೃಷಿ ತಾಪಂಡ ಹೇಳಿಕೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖಮನರಂಜನೆ

Vinesh Vijayalakshmi ವಿನೀಶ್ ಕಾರು ಓಡಿಸುತ್ತಿರಲಿಲ್ಲ, ಯಾರಿಗೆ ಏನೂ ಆಗಿಲ್ಲ: ಹಾಗಾದ್ರೆ ನಡೆದಿದ್ದೇನು? ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?