Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Indian Passport ಪಾಸ್‌ಪೋರ್ಟ್ ಇದ್ದಾಕ್ಷಣ ಭಾರತೀಯ ಪೌರತ್ವ ಸಾಬೀತಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ದೇಶಪ್ರಮುಖ

Indian Passport ಪಾಸ್‌ಪೋರ್ಟ್ ಇದ್ದಾಕ್ಷಣ ಭಾರತೀಯ ಪೌರತ್ವ ಸಾಬೀತಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Share
1 Min Read
SHARE

newsics.com|ನ್ಯೂಸಿಕ್ಸ್

ನವದೆಹಲಿ: ಪೌರತ್ವ ಮತ್ತು ಪಾಸ್‌ಪೋರ್ಟ್ ನಡುವಿನ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ಭಾರತೀಯ ನಾಗರಿಕರಿಗಷ್ಟೇ ಪಾಸ್‌ಪೋರ್ಟ್ ನೀಡಲಾಗುತ್ತದೆಯಾದರೂ, ಅದು ಪೌರತ್ವವನ್ನು ಅಧಿಕೃತವಾಗಿ ಸಾಬೀತುಪಡಿಸುವ ದಾಖಲೆಯಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.

14ನೇ ಪಾಸ್‌ಪೋರ್ಟ್ ಸೇವಾ ದಿವಸ್ ಅಂಗವಾಗಿ ಬಿಡುಗಡೆಯಾದ ಪ್ರಕಟಣೆಯಲ್ಲಿ, ಪಾಸ್‌ಪೋರ್ಟ್ ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ನೀಡುವ ಪ್ರಯಾಣ ದಾಖಲೆಯಷ್ಟೇ ಎಂದು ತಿಳಿಸಲಾಗಿದೆ.

ಪಾಸ್‌ಪೋರ್ಟ್ ಹೊಂದಿರುವುದರಿಂದ ಮಾತ್ರ ವ್ಯಕ್ತಿಯ ಭಾರತೀಯ ಪೌರತ್ವವನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ, ಭಾರತೀಯ ಪಾಸ್‌ಪೋರ್ಟ್ ಅನ್ನು ಭಾರತೀಯ ನಾಗರಿಕರಿಗಷ್ಟೇ ನೀಡಲಾಗುತ್ತದೆ ಎಂದು ತಿಳಿಸಿದೆ.

ಇತ್ತೀಚೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರಣೆಯ ವೇಳೆ, ಆಧಾರ್ ಕಾರ್ಡ್ ಮಾತ್ರ ಪೌರತ್ವದ ಪುರಾವೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆಧಾರ್ ಕೇವಲ ಗುರುತಿನ ಚೀಟಿಯಾಗಿದ್ದು, ಪೌರತ್ವವನ್ನು ಸಾಬೀತುಪಡಿಸುವ ದಾಖಲೆ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಇದೇ ರೀತಿ ಮತದಾರರ ಗುರುತಿನ ಚೀಟಿ (Voter ID) ಕೂಡ ಪೌರತ್ವದ ಪುರಾವೆಯಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಪೌರತ್ವ ಪಡೆಯುವ ನಿಯಮಗಳು

  • ಜನವರಿ 26, 1950ರಿಂದ ಜುಲೈ 1, 1987ರೊಳಗೆ ಭಾರತದಲ್ಲಿ ಜನಿಸಿದವರು ಹುಟ್ಟಿನಿಂದಲೇ ಭಾರತೀಯ ನಾಗರಿಕರು.
  • ಜುಲೈ 1, 1987ರ ನಂತರ ಜನಿಸಿದವರಲ್ಲಿ, ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕರಾಗಿದ್ದರೆ ಪೌರತ್ವ ಪಡೆಯಬಹುದು.
  • ಡಿಸೆಂಬರ್ 3, 2004 ಅಥವಾ ನಂತರ ಜನಿಸಿದವರು ಪೌರತ್ವ ಪಡೆಯಬೇಕಾದರೆ, ಇಬ್ಬರೂ ಪೋಷಕರು ಭಾರತೀಯ ನಾಗರಿಕರಾಗಿರಬೇಕು ಅಥವಾ ಒಬ್ಬರು ಭಾರತೀಯ ನಾಗರಿಕರಾಗಿದ್ದು, ಮತ್ತೊಬ್ಬರು ಜನನದ ವೇಳೆ ಅಕ್ರಮ ವಲಸಿಗರಾಗಿರಬಾರದು.

ಪಾಸ್‌ಪೋರ್ಟ್ ಸೇವೆಗಳಲ್ಲಿ ಮಹತ್ವದ ವಿಸ್ತರಣೆ

ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, 2025ರಲ್ಲಿ 1.5 ಕೋಟಿ ಪಾಸ್‌ಪೋರ್ಟ್ ಹಾಗೂ ಸಂಬಂಧಿತ ಸೇವೆಗಳು ಒದಗಿಸಲಾಗಿದ್ದು, ಅವುಗಳಲ್ಲಿ 1.39 ಕೋಟಿ ಪಾಸ್‌ಪೋರ್ಟ್‌ಗಳು ಜಾರಿಯಾಗಿವೆ.

ಪ್ರಸ್ತುತ ದೇಶಾದ್ಯಂತ 545 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹತ್ತು ವರ್ಷಗಳ ಹಿಂದೆ ಈ ಸಂಖ್ಯೆ ಕೇವಲ 77 ಆಗಿತ್ತು. ಪೊಲೀಸ್ ಪರಿಶೀಲನೆ ಹೊರತುಪಡಿಸಿ, ಈಗ 6 ಕೆಲಸದ ದಿನಗಳಲ್ಲೇ ಪಾಸ್‌ಪೋರ್ಟ್ ನೀಡಲಾಗುತ್ತಿದೆ. ಅಲ್ಲದೆ, ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿದಾರರು ಕಳೆಯುವ ಸಮಯವನ್ನು 45 ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

TAGGED:#passport #indian #citizenship #news #newsics #MEA
Share This Article
Facebook Twitter Copy Link Print
Previous Article Natural disaster ವೆನೆಜುವೆಲಾದಲ್ಲಿ ಭೀಕರ ಭೂಕಂಪ: ಕಾರಕಾಸ್ ಧ್ವಂಸ, 10 ಸಾವಿರಕ್ಕೂ ಹೆಚ್ಚು ಜನ ಸಾವು
Next Article Airplane confrontation ರನ್‌ವೇನಲ್ಲಿ ಏರ್ ಇಂಡಿಯಾ- ಇಂಡಿಗೋ ವಿಮಾನ ಮುಖಾಮುಖಿ: ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ

Popular Posts

Ayodhye Ramamandir ರಾಮಮಂದಿರ ದೇಣಿಗೆ ಲೂಟಿ: ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ಟ್ರಸ್ಟಿ ಮಿಶ್ರಾ ರಾಜೀನಾಮೆ

1 Min Read

Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ

1 Min Read

ನಾನೇ ಸೀರೆ ಕತ್ತರಿಸಿ ವೈಶಾಕ್ ಮೃತದೇಹ ಕೆಳಗಿಳಿಸಿದ್ದೆ: ನಟಿ ಕೃಷಿ ತಾಪಂಡ ಹೇಳಿಕೆ

2 Min Read

Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Vinesh Vijayalakshmi ವಿನೀಶ್ ಕಾರು ಓಡಿಸುತ್ತಿರಲಿಲ್ಲ, ಯಾರಿಗೆ ಏನೂ ಆಗಿಲ್ಲ: ಹಾಗಾದ್ರೆ ನಡೆದಿದ್ದೇನು? ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ

2 Min Read
ದೇಶಪ್ರಮುಖವೈರಲ್

Torture of a child ಮಗುವನ್ನು ಒದ್ದು ಉರುಳಿಸಿದ ಅಂಗನವಾಡಿ ಸಹಾಯಕಿ! ಆಘಾತಕಾರಿ‌ ವಿಡಿಯೋ ನೋಡಿ

1 Min Read
ದೇಶಪ್ರಮುಖ

Ayodhya scam ಅಯೋಧ್ಯೆ ದೇಣಿಗೆ ದುರ್ಬಳಕೆ: 8 ಮಂದಿ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?