Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Crime > ಪ್ರಭಾವಿ ಬಿಲ್ಡರ್ ಪುತ್ರಿ ಜೊತೆ ಪ್ರೀತಿ? ಜಿಮ್ ಟ್ರೈನರ್‌ನ ಭೀಕರ ಕೊಲೆ ಪ್ರಕರಣದಲ್ಲಿ 4 ಮಂದಿ ಅರೆಸ್ಟ್!
Crimeವೈರಲ್

ಪ್ರಭಾವಿ ಬಿಲ್ಡರ್ ಪುತ್ರಿ ಜೊತೆ ಪ್ರೀತಿ? ಜಿಮ್ ಟ್ರೈನರ್‌ನ ಭೀಕರ ಕೊಲೆ ಪ್ರಕರಣದಲ್ಲಿ 4 ಮಂದಿ ಅರೆಸ್ಟ್!

Share
1 Min Read
SHARE

ಬೆಂಗಳೂರು: ಕಳೆದ 10 ದಿನಗಳಿಂದ ನಾಪತ್ತೆಯಾಗಿದ್ದ ಜಿಮ್ ಟ್ರೈನರ್ ವಿಜಯ್ ಕುಮಾರ್ (32) ಅವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದು, ಪ್ರಭಾವಿ ಬಿಲ್ಡರ್ ಪುತ್ರಿಯೊಂದಿಗಿನ ಪ್ರೇಮ ಸಂಬಂಧವೇ ಕೊಲೆಗೆ ಕಾರಣವಾಗಿದೆಯೇ ಎಂಬ ಅನುಮಾನ ಮೂಡಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ವಿಜಯ್ ಕುಮಾರ್ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನೆಲೆಸಿದ್ದರು. ಮದುವೆಯಾಗಿದ್ದರೂ ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಪ್ರಕರಣದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ದೂರವಿದ್ದರು ಎನ್ನಲಾಗಿದೆ.

ಕುಟುಂಬದವರ ಆರೋಪದ ಪ್ರಕಾರ, ವಿಜಯ್ ಕೆಲಸ ಮಾಡುತ್ತಿದ್ದ ಜಿಮ್‌ಗೆ ಉದ್ಯಮಿ ಕಾಮಿನೇನಿ ಪ್ರಸಾದ್ ಅವರ ಪುತ್ರಿ ಬರುತ್ತಿದ್ದು, ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೇಮಕ್ಕೆ ತಿರುಗಿತ್ತು. ಕೆಲ ಸಮಯದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದರೂ, ಬಳಿಕ ಪೊಲೀಸರು ಅವರನ್ನು ಪತ್ತೆಹಚ್ಚಿ ವಾಪಸ್ ಕರೆತಂದಿದ್ದರು.

ಈ ಘಟನೆಯಿಂದ ಆಕ್ರೋಶಗೊಂಡಿದ್ದ ಬಿಲ್ಡರ್, ವಕೀಲನ ಮೂಲಕ ಸುಪಾರಿ ನೀಡಿ ವಿಜಯ್ ಹತ್ಯೆ ಮಾಡಿಸಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಹಾಗೂ ಬಾಬು ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಯ ಹಿಂದಿನ ನಿಜವಾದ ಕಾರಣ ಮತ್ತು ಸಂಚಿನ ಬಗ್ಗೆ ಬನ್ನೇರುಘಟ್ಟ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Share This Article
Facebook Twitter Copy Link Print
Previous Article ಯೋಗ ದಿನಾಚರಣೆಯಲ್ಲಿ ಶ್ರೀಲೀಲಾಗೆ ಅವಮಾನ? ಸಿಎಂ ಪತ್ನಿಯ ವರ್ತನೆಗೆ ನೆಟ್ಟಿಗರ ಆಕ್ರೋಶ!
Next Article ಮದ್ಯದ ನಶೆಯಲ್ಲಿ ರಸ್ತೆಯ ಮಧ್ಯೆ ಮಲಗಿದ ಯುವತಿ! ಕೈಯಲ್ಲಿ ಸಿಗರೇಟ್, ಪಕ್ಕದಲ್ಲೇ ಮದ್ಯದ ಬಾಟಲಿ; ಟ್ರಾಫಿಕ್ ಜಾಮ್ ವಿಡಿಯೋ ವೈರಲ್

Popular Posts

Actress Nora ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ನಂಬರ್ 1 ಆಗಲಿದ್ದಾರೆ ನೋರಾ

2 Min Read

ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ

1 Min Read

ಪಾನಮತ್ತ ಪ್ರಯಾಣಿಕನಿಂದ ಅವಾಂತರ: ಮರಕ್ಕೆ‌ ಬಸ್ ಡಿಕ್ಕಿ, 11‌ ಮಂದಿಗೆ ಗಾಯ

1 Min Read

ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!

1 Min Read

You Might Also Like

ವೈರಲ್ಈ ದಿನಪ್ರಮುಖ

ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ‌ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ವಿದ್ಯಾರ್ಥಿಗಳಿಗೆ‌ ಮರಣಾತಂಕ

1 Min Read
ವೈರಲ್

ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ಶಾಕ್! ಅರ್ಜಿ ವಜಾ

1 Min Read
ವೈರಲ್ವಿದೇಶ

ಮದ್ಯದ ನಶೆಯಲ್ಲಿ ರಸ್ತೆಯ ಮಧ್ಯೆ ಮಲಗಿದ ಯುವತಿ! ಕೈಯಲ್ಲಿ ಸಿಗರೇಟ್, ಪಕ್ಕದಲ್ಲೇ ಮದ್ಯದ ಬಾಟಲಿ; ಟ್ರಾಫಿಕ್ ಜಾಮ್ ವಿಡಿಯೋ ವೈರಲ್

1 Min Read
filmವೈರಲ್

ಯೋಗ ದಿನಾಚರಣೆಯಲ್ಲಿ ಶ್ರೀಲೀಲಾಗೆ ಅವಮಾನ? ಸಿಎಂ ಪತ್ನಿಯ ವರ್ತನೆಗೆ ನೆಟ್ಟಿಗರ ಆಕ್ರೋಶ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?